Breaking News

ಮಕ್ಕಳನ್ನು ದತ್ತು ನೀಡಲಿಲ್ಲ ಎಂದು ಅಣ್ಣನ ಕೊಲೆ ಮಾಡಿದ ತಮ್ಮ

Spread the love

ಕೋಲಾರ (ಜ. 31):  ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮಲ್ಲೆಂಗುರ್ಕಿ ರೈಲ್ವೆ ಅಂಡರ್ ಪಾಸ್ ಬಳಿ ಕಳೆದ ಜ. 23 ರಂದು  ಸುಟ್ಟು ಕರಕಲಾದ ಸ್ಥಿತಿಯಲ್ಲಿ  ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ತಮ್ಮನ್ನೇ ಅಣ್ಣನನ್ನು ಕೊಲೆ ಮಾಡಿರುವುದು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಬಂಗಾರಪೇಟೆ ನಿವಾಸಿ ರಮೇಶ್ ಕೊಲೆಯಾಗಿದ್ದು, ಆತನ ತಮ್ಮ ರಾಜೇಶ್​ ಈ ಕೃತ್ಯ ಎಸಗಿದವನು. ಮಕ್ಕಳನ್ನು ದತ್ತು ನೀಡದ ಹಿನ್ನಲೆ ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬಯಲಾಗಿದೆ. ನಿನ್ನ ಮಕ್ಕಳನ್ನು ನೋಡಿಕೊಳ್ಳುತ್ತೇನೆ ದತ್ತು ನೀಡುವಂತೆ ಅಣ್ಣ ರಮೇಶ್​ನಿಗೆ ತಮ್ಮ ರಾಜೇಶ್​ ಕೇಳಿದ್ದಾನೆ. ಇದಕ್ಕೆ ರಮೇಶ ಒಪ್ಪದೇ ಮಾತಿಗೆ ಮಾತು ಬೆಳೆದಿದೆ. ಈ ಹಿನ್ನಲೆ ಕುಪಿತನಾಗಿ ಹತ್ಯೆ ಮಾಡಿರುವುದಾಗಿ ರಾಜೇಶ್​ ಪೊಲೀಸರ ಮುಂದೆ ತಿಳಿಸಿದ್ದಾನೆ. 


Spread the love

About Laxminews 24x7

Check Also

ತುಮಕೂರು: ಮುಂಬೈ ಮಾದರಿ ಗಣಪತಿ ವಿಗ್ರಹಗಳಿಗೆ ಹೆಚ್ಚು ಬೇಡಿಕೆ

Spread the loveತುಮಕೂರು: 2025ರ ಚೌತಿ ಬಂದೇ ಬಿಡ್ತು. ಭಕ್ತರು ವಿಭಿನ್ನ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಮುಂಬೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ