Breaking News

ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ನಿರ್ಮಾಣವಾಗಲಿರುವ 2 ಗ್ಯಾಲರಿಗಳ ನಿರ್ಮಾಣ ಕಾರ್ಯಕ್ಕೆ ಶಾಸಕ ಅಭಯ ಪಾಟೀಲ ಶನಿವಾರ ಬೆಳಗ್ಗೆ ಚಾಲನೆ ನೀಡಿದರು.

Spread the love

ಸ್ಮಾರ್ಟ್ ಸಿಟಿ  ಯೋಜನೆಯ ಅಡಿಯಲ್ಲಿ ನಿರ್ಮಾಣವಾಗಲಿರುವ 2 ಗ್ಯಾಲರಿಗಳ ನಿರ್ಮಾಣ ಕಾರ್ಯಕ್ಕೆ ಶಾಸಕ ಅಭಯ ಪಾಟೀಲ ಶನಿವಾರ ಬೆಳಗ್ಗೆ ಚಾಲನೆ ನೀಡಿದರು.

 

 

 

 

 

 

ಬೆಳಗಾವಿ ನಗರದ ವ್ಯಾಕ್ಸೀನ್ ಡಿಪೋದಲ್ಲಿ, ಸಿವಿಲ್ ಏವಿಯೇಶನ್ ಗ್ಯಾಲರಿ ಮತ್ತು ಅತ್ಯಾಧುನಿಕವಾದ ಆರ್ಟ್ ಗ್ಯಾಲರಿ ನಿರ್ಮಾಣಕ್ಕೆ ಪೂಜೆ ನೇರವೇರಿಸುವ ಮೂಲಕ ಚಾಲನೆ ನೀಡಿದ್ದಾರೆ.

ಕರ್ನಾಟಕದಲ್ಲಿ ಮೊದಲ ಬಾರಿಗೆ ಬೆಳಗಾವಿಯಲ್ಲಿ ಸಿವಿಲ್ ಏವಿಯೇಶನ್ ಗ್ಯಾಲರಿ ಮತ್ತು ಅತ್ಯಂತ ವಿಭಿನ್ನವಾದ ಆರ್ಟ್ ಗ್ಯಾಲರಿ ನಿರ್ಮಾಣವಾಗುತ್ತಿದ್ದು, ಬೆಳಗಾವಿ ನಗರದ ಖ್ಯಾತಿಯ ಪಟ್ಟಿಯಲ್ಲಿ ಈ ಎರಡೂ ಯೋಜನೆಗಳು ಸೇರ್ಪಡೆ ಆಗಲಿವೆ.

 

 

 

 

 

ಬೆಳಗಾವಿಯ ಮಹಾನಗರದ ವ್ಯಾಕ್ಸೀನ್ ಡಿಪೋ ಪ್ರದೇಶದಲ್ಲಿ 8 ಕೋಟಿ ರೂ ವೆಚ್ಚದಲ್ಲಿ ಸಿವಿಲ್ ಏವಿಯೇಶನ್ ಗ್ಯಾಲರಿ ಮತ್ತು 6 ಕೋಟಿ ರೂ ವೆಚ್ಚದಲ್ಲಿ ಆರ್ಟ್ ಗ್ಯಾಲರಿಗಳನ್ನು ನಿರ್ಮಿಸಲಾಗುತ್ತಿದೆ.

ಇದರಿಂದ ಮಕ್ಜಳಲ್ಲಿ ವಿಮಾನ ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡುವುದರ ಜೊತೆಗೆ ವಿಮಾನಗಳ ಇತಿಹಾಸ ಮತ್ತು ಮಾಹಿತಿ, ನಾಗರಿಕ ವಿಮಾನಗಳು ಮತ್ತು ರಕ್ಷಣಾ ವಿಮಾನಗಳ ಮಾಡೆಲ್ ಗಳು ಏವಿಯೇಶನ್ ಗ್ಯಾಲರಿಯಲ್ಲಿ ಪ್ರದರ್ಶನ ಮಾಡುವುದರ ಜೊತೆಗೆ, ಸಿಮಿಲೇಟರ್ ಅಂದರೆ 4 ಕಾಫೀಟ್ ಗಳನ್ನು ತಂದು ಮಕ್ಕಳಿಗೆ ವಿಮಾನ ಹಾರಿಸುವ ಅನುಭವವನ್ನು ಈ ಸಿಮೀಲೇಟರ್ ಗಳ ಮುಖಾಂತರ ಕೊಡುವಂತಹ ಮಹತ್ವದ ಮತ್ತು ವಿಶೇಷವಾದ ಯೋಜನೆ ಇದಾಗಿದೆ.

ಬೆಳಗಾವಿಯಲ್ಲಿ ಏವಿಯೇಶನ್ ಗ್ಯಾಲರಿ ನಿರ್ಮಾಣ ದಿಂದ ವಿದ್ಯಾರ್ಥಿಗಳಲ್ಲಿ ಏರೋಸ್ಪೇಸ್ ಬಗ್ಗೆ ಆಸಕ್ತಿ ಹೆಚ್ಚಾಗಲಿದೆ, ಈ ಗ್ಯಾಲರಿ ಕೇವಲ ಆಟಕ್ಕೆ ಸೀಮಿತ ಆಗದೇ ಮಕ್ಕಳಿಗೆ ತಾಂತ್ರಿಕ ಜ್ಞಾನ ನೀಡಲಿದೆ ಎಂದು ಶಾಸಕ ಅಭಯ  ಪಾಟೀಲ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಆರ್ಟ್ ಗ್ಯಾಲರಿ ಇಲ್ಲ ಎನ್ನುವ ಕೊರಗು ಕಲಾವಿದರಲ್ಲಿ ಇತ್ತು, ಇದನ್ನು ಮನಗಂಡು, ಬೆಳಗಾವಿಯಲ್ಲಿ 6 ಕೋಟಿ ರೂಗಳ ವೆಚ್ಚದಲ್ಲಿ ಕರ್ನಾಟಕದ ಯಾವ ಭಾಗದಲ್ಲೂ ಇರಲಾರದಂತಹ ವಿಭಿನ್ನವಾದ, ಅತ್ಯಾಕರ್ಷಕ ಆರ್ಟ್ ಗ್ಯಾಲರಿ ನಿರ್ಮಾಣವಾಗುತ್ತಿದ್ದು,ಈ ಎರಡೂ ಗ್ಯಾಲರಿಗಳ ನಿರ್ಮಾಣದಿಂದ ಬೆಳಗಾವಿಯ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಲಿದ್ದು,ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಈ ಸಂದರ್ಭದಲ್ಲಿ ಇದ್ದರು.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ