ನವದೆಹಲಿ,ಜ.16- ಕೊರೊನಾ ಸೋಂಕು ನಿವಾರಣೆಗೆ ಕಂಡುಹಿಡಿದಿರುವ ಲಸಿಕೆ ಬಗ್ಗೆ ಯಾರಾದರೂ ಸುಳ್ಳು ವದಂತಿಗಳನ್ನು ಹಬ್ಬಿಸಿದರೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ಇದು ವಿಜ್ಞಾನಿಗಳು ಕಳೆದ ಹಲವು ತಿಂಗಳುಗಳಿಂದ ಅಹೋರಾತ್ರಿ ಕಠಿಣ ಪರಿಶ್ರಮ ವಹಿಸಿ ಲಸಿಕೆಯನ್ನು ಆವಿಷ್ಕಾರ ಮಾಡಿದ್ದಾರೆ. ನಾನು ದೇಶದ ಜನತೆಯಲ್ಲಿ ಸ್ಪಷ್ಟವಾಗಿ ಮನವಿ ಮಾಡಿಕೊಳ್ಳುವುದೇನೆಂದರೆ ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಅಗತ್ಯವಿರುವವರು ಲಸಿಕೆಯನ್ನು ಮುಕ್ತ ಮನಸ್ಸಿನಿಂದ ತೆಗೆದುಕೊಳ್ಳಿ ಎಂದು ದೇಶದ ಜನತೆಗೆ ಮನವಿ ಮಾಡಿದರು.ನವದೆಹಲಿಯಲ್ಲಿ ಇಂದು ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವಕ್ಕೆ ನಾವು ಇಂದು ಕೊರೊನಾ ಲಸಿಕೆಯನ್ನು ರಫ್ತು ಮಾಡುವ ಹಂತಕ್ಕೆ ಬಂದಿದ್ದೇವೆ.
ಭಾರತೀಯರ ಲಸಿಕೆ ವಿದೇಶಿ ಲಸಿಕೆಗಳಿಗೆ ಹೋಲಿಸಿದರೆ ಸಾಕಷ್ಟು ಪರಿಣಾಮಕಾರಿಯಾಗಿದೆ. ದೇಶದ ಜನರು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಕಿವಿಮಾತು ಹೇಳಿದರು.
ದೇಶದ ಜನರು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಕಿವಿಮಾತು ಹೇಳಿದರು. ಯಾವುದೇ ಭಯ ಇಲ್ಲದೇ ಲಸಿಕೆ ಪಡೆಯಲು ಸಿದ್ಧರಾಗಿರಿ. ಮೊದಲ ಹಂತದಲ್ಲಿಯೇ ನಾವು 3 ಕೋಟಿ ಜನರಿಗೆ ಲಸಿಕೆ ನೀಡುತ್ತಿದ್ದೇವೆ. ಎರಡನೇ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ವಿಜ್ಞಾನಿಗಳು ಕಳೆದ 10 ದಿನಗಳಿಂದ ಹಬ್ಬ, ಸಂತೋಷಕೂಟ, ಅವರ ಕುಟುಂಬವನ್ನು ಬಿಟ್ಟು ಈ ಲಸಿಕೆಯನ್ನು ಕಂಡುಹಿಡಿಯಲು ಪರಿಶ್ರಮ ಪಟ್ಟಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಇಷ್ಟು ತಿಂಗಳ ಕಾಲ ದೇಶದ ಪ್ರತಿ ಮನೆಯಲ್ಲೂ ಕೊರೊನಾ ಲಸಿಕೆ ಯಾವಾಗ ಬರುತ್ತದೆ ಎಂಬ ಪ್ರಶ್ನೆ ಇತ್ತು. ಈಗ ಅತಿ ಕಡಿಮೆ ಅವಧಿಯಲ್ಲಿ 2 ಮೇಡ್ ಇನ್ ಇಂಡಿಯಾ ವ್ಯಾಕ್ಸಿನ್ ಅಭಿವೃದ್ಧಿಯಾಗಿದೆ ಎಂದರು. ಮೊದಲು ಡೋಸ್ ತೆಗೆದುಕೊಂಡವರು 2ನೇ ಡೋಸ್ ತೆಗೆದುಕೊಳ್ಳುವುದನ್ನು ಮರೆಯಬೇಡಿ. 2ನೇ ಡೋಸ್ ಪಡೆಯುವುದ ಅತ್ಯವಶ್ಯಕವಾಗಿದೆ. ನಂತರ ಕೊರೊನಾ ಪಡೆದ ನಂತರ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಸೇರಿದಂತೆ ನಿಯಮಗಳ ಪಾಲನೆಯನ್ನು ಯಾರೊಬ್ಬರು ಮರೆಯಬಾರದು.
 Laxmi News 24×7
Laxmi News 24×7
				 
		 
						
					