Breaking News
Home / Uncategorized / ಸೆಂಟ್ರಲ್ ವಿಸ್ತಾ : ನೂತನ ಸಂಸತ್ ಭವನ ನಿರ್ಮಾಣ ಕಾರ್ಯ ಶುರು

ಸೆಂಟ್ರಲ್ ವಿಸ್ತಾ : ನೂತನ ಸಂಸತ್ ಭವನ ನಿರ್ಮಾಣ ಕಾರ್ಯ ಶುರು

Spread the love

ನವದೆಹಲಿ ಜ.15- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಜನೆಯಡಿ ರೂಪಿಸಲಾದ ನೂತನ ಸಂಸತ್ ಭವನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಚಾಲನೆ ದೊರೆತಿದೆ. ಕಳೆದ ಒಂದು ತಿಂಗಳ ಹಿಂದೆ ಬೃಹತ್ ಸಂಸತ್ ಭವನ ನಿರ್ಮಾಣ ಯೋಜನೆಯ ಅದ್ಧೂರಿ ಶಂಕು ಸ್ಥಾಪನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಟ್ಟಿಗೆ ಇಡುವ ಮೂಲಕ ನೆರವೇರಿಸಿದ್ದರು.

ತ್ರಿಕೋನಾಕೃತಿಯಲ್ಲಿ ನಿರ್ಮಾಣವಾಗಲಿರುವ ಪಾರ್ಲಿಮೆಂಟ್ ಕಟ್ಟಡ 2022ರ 75ನೇ ಸ್ವಾತಂತ್ರ್ಯೋತ್ಸವ ದಿನಕ್ಕೆ ಪೂರ್ಣಗೊಳ್ಳಲಿದೆ. ನೂತನ ಸಂಸತ್ ಭವನದಲ್ಲಿ 2022ರ ಮುಂಗಾರು ಅಧಿವೇಶನ ನಡೆಸುವ ಯೋಜನೆ ಇರುವುದರಿಂದ ಕಟ್ಟಡ ನಿರ್ಮಾಣ ಕಾಮಗಾರಿ ಇಂದಿನಿಂದ ಶುರುವಾಗಿದೆ ಎಂದು ಸಂಸತ್ ಭವನ ಅಧಿಕಾರಿಗಳು ತಿಳಿಸಿದ್ದಾರೆ.

971 ಕೋಟಿ ರೂ.ಗಳ ಈ ಯೋಜನೆ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ವಹಿಸಿಕೊಂಡಿದ್ದು, ನಿಗದಿತ ಅವಧಿಯೊಳಗೆ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಿದೆ. ಸೆಂಟ್ರಲ್ ವಿಸ್ತಾ ಯೋಜನೆಯ ಸಂಸತ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಲು 14 ಸದಸ್ಯರ ಪಾರಂಪರಿಕ ತಂಡ ಕಳೆದ ವಾರವಷ್ಟೇ ಅನುಮತಿ ನೀಡಿತ್ತು.

ಕಟ್ಟಡದಲ್ಲಿ ಎರಡು ದೊಡ್ಡ ಸಭಾಂಗಣ ನಿರ್ಮಾಣವಾಗಲಿದ್ದು, ಲೋಕಸಭೆಯಲ್ಲಿ 888 ಆಸನಗಳು ರಾಜ್ಯಸಭೆಯಲ್ಲಿ 384 ಆಸನಗಳು ಸಾಮಥ್ರ್ಯ ಇದರಲ್ಲಿರಲಿದೆ. 1272 ಆಸನಗಳವರೆಗೆ ಹೆಚ್ಚುವರಿ ಸಾಮಥ್ರ್ಯ ಹೊಂದಿರುತ್ತದೆ.


Spread the love

About Laxminews 24x7

Check Also

ಸಾಲ ತೀರಿಸದ್ದಕ್ಕೆ ಪತ್ನಿ-ಪುತ್ರನ ಗೃಹಬಂಧನ; ಮನನೊಂದ ರೈತ ಆತ್ಮಹತ್ಯೆ

Spread the love ಬೆಳಗಾವಿ: ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ರೈತನೋರ್ವ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭೀಕರ ಬರಕ್ಕೆ ಬೆಳೆ ಕೈಕೊಟ್ಟಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ