Breaking News
Home / Uncategorized / 72 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ವ್ಯಕ್ತಿ 18800 ರೂ ದಂಡ ಕಟ್ಟಿದ್ದಾನೆ.

72 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ವ್ಯಕ್ತಿ 18800 ರೂ ದಂಡ ಕಟ್ಟಿದ್ದಾನೆ.

Spread the love

ಬೆಳಗಾವಿ – 72ನೇ ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ವ್ಯಕ್ತಿಯನ್ನು ಹಿಡಿದ ಸಂಚಾರಿ ಪೊಲೀಸರು, ಆತನಿಗೆ ತರಬೇತಿ ನೀಡಿ, ತರಬೇತಿ ಪಡೆದ ಬಗ್ಗೆ ಪ್ರಮಾಣ ಪತ್ರವನ್ನೂ ನೀಡಿ ಕಳಿಸಿದ್ದಾರೆ.

ಈ ಕುರಿತು ಡಿಸಿಪಿ ವಿಕ್ರಂ ಅಮಟೆ ಟ್ವೀಟ್ ಮಾಡಿದ್ದಾರೆ. ಆರೀಫ್ ಜಮಾದಾರ್ (28) ಎನ್ನುವ ವ್ಯಕ್ತಿ ಒಟ್ಟೂ 72 ಬಾರಿ ಸಂಚಾರ ನಿಯಮ ಉಲ್ಲಂಘಿಸಿರುವುದು ಪೊಲೀಸರ ಗಮನಕ್ಕೆ ಬಂದಿದೆ. 72 ಬಾರಿ ಸೇರಿ ಒಟ್ಟೂ 18800 ರೂ ದಂಡ ಕಟ್ಟಿದ್ದಾನೆ.

ಪ್ರತಿ ಬಾರಿ ಹಿಡಿದಾಗಲೂ ದಂಡ ಕಟ್ಟಿ ಹೋಗುತ್ತಾನೆ. ಮತ್ತೆ ಅದೇ ಅಥವಾ ಬೇರೆ ಮಾದರಿಯ ನಿಯಮ ಉಲ್ಲಂಘನೆ ಮಾಡುತ್ತಾನೆ. ಹೆಲ್ಮೆಟ್ ಧರಿಸದಿರುವುದು ಹೆಚ್ಚಿನ ಸಂದರ್ಭದಲ್ಲಿ ಕಂಡುಬಂದಿದೆ. ಜೊತೆಗೆ ನೋ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿರುವುದು, ಒನ್ ವೇ ಸಂಚಾರ ನಿಯ ಉಲ್ಲಂಘನೆ ಇತ್ಯಾದಿ ಕೇಸ್ ಗಳಿವೆ ಎಂದು ಡಿಸಿಪಿ ವಿಕ್ರಂ ಅಮಟೆ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

2019 -20ರ ಅವಧಿಯಲ್ಲಿ ಈ ಎಲ್ಲ ಕೇಸ್ ಗಳು ದಾಖಲಾಗಿವೆ.

ಮೈಸೂರಲ್ಲೊಬ್ಬ 180 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ವಿಕ್ರಂ ಅಮಟೆ ನೆನಪಿಸಿಕೊಂಡರು. ಆತ ದಂಡ ಕಟ್ಟಲಾಗದೆ ವಾಹನವನ್ನೇ ಬಿಟ್ಟು ಹೋಗಿದ್ದನಂತೆ. ನಂತರ ವಾಹನವನ್ನು ಹರಾಜು ಹಾಕಿ ದಂಡ ಭರ್ತಿ ಮಾಡಿಕೊಳ್ಳಲಾಗಿತ್ತು ಎಂದು ಅವರು ಹೇಳಿದರು.

ಗುರುವಾರ ಆರಿಫ್ ಜಮಾದಾರ್ ಗೆ ದಂಡೆ ವಿಧಿಸಿ, ಸಂಚಾರ ನಿಯಮ ಉಲ್ಲಂಘಿಸದೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಕುರಿತು ತರಬೇತಿ ನೀಡಲಾಯಿತು. ಜೊತೆಗೆ ತರಬತಿ ಪಡೆದ ಬಗ್ಗೆ ಪ್ರಮಾಣ ಪತ್ರವನ್ನೂ ಕೊಡಲಾಗಿದೆ.

ಇನ್ನು ಮುಂದೆ ಆತ ಹೇಗೆ ನಡೆದುಕೊಳ್ಳುತ್ತಾನೆ ನೋಡಬೇಕಿದೆ.

https://twitter.com/DCP_LO_Belagavi?ref_src=twsrc%5Etfw%7Ctwcamp%5Etweetembed%7Ctwterm%5E1347141326559608833%7Ctwgr%5E%7Ctwcon%5Es1_&ref_url=https%3A%2F%2Fpragativahini.com%2Fcrime-news%2F72-times-traffic-violation%2F

 


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ