Breaking News

ರಾಜ್ಯ ರಾಜಕಾರಣದಲ್ಲಿ ಸಧ್ಯದಲ್ಲೇ ಮಹತ್ವದ ಬದಲಾವಣೆಗಳು ಆಗಲಿದೆ: ರಮೇಶ್ ಜಾರಕಿಹೊಳಿ

Spread the love

ಬೆಳಗಾವಿ : ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಪರೋಕ್ಷವಾಗಿ ಡಿಸಿಎಂ ಹುದ್ದೆಯ ಮೇಲೆ ಕಣ್ಣು ಇಟ್ಟಿರುವ ಬಗ್ಗೆ ಸುಳಿವು ನೀಡಿದಂತಿದೆ. ಎಲ್ಲರಿಗೂ ದೊಡ್ಡ ಹುದ್ದೆ ಮೇಲೆ ಆಸೆ ಇರುತ್ತದೆ. ಈ ನಿಟ್ಟಿನಲ್ಲಿ ನಾನು ಪ್ರಯತ್ನ ಪಡುತ್ತಿದ್ದೇನೆ ಎಂದಿದ್ದಾರೆ.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಎಲ್ಲಿಯೂ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿಲ್ಲ. ನನಗೆ ಹುದ್ದೆ ನೀಡುವುದು, ಬಿಡುವುದು ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ಎಲ್ಲರಿಗೂ ದೊಡ್ಡ ಹುದ್ದೆ ಆಸೆ ಇರಲಿದೆ. ನಾನು ಸಹ ಆ ನಿಟ್ಟಿನಲ್ಲಿ ಪ್ರಯತ್ನಿಸಿದ್ದೇನೆ ಎಂದಿದ್ದಾರೆ.

ರಮೇಶ ಜಾರಕಿಹೊಳಿ ಅವರ ಈ ಪರೋಕ್ಷ ಹೇಳಿಕೆ , ರಾಜ್ಯ ರಾಜಕಾರಣದಲ್ಲಿ ಸಧ್ಯದಲ್ಲೇ ಮಹತ್ವದ ಬದಲಾವಣೆಗಳು ಆಗಲಿದೆ ಎಂಬ ಕೂತುಹಲ ಮೂಡಿದೆ.

 

https://youtu.be/34Ks3HhFgcM

 

ಸಿಎಂ ಬೆಂಗಳೂರಿನಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಇನ್ನು ಎರಡು ದಿನ ಕಾಯಿರಿ ಎಂದು ಹೇಳಿದ್ದಾರೆ. ಇತ್ತ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಸಚಿವ ಸಂಪುಟ ವಿಸ್ತರಣೆ ಒಂದು ತಿಂಗಳ ಮುಂದೆ ಹೋಗುವ ಸಾಧ್ಯತೆ  ಇದೆ ಎಂದು ತಿಳಿಸಿದ್ದಾರೆ. ಬಿಜೆಪಿಯಲ್ಲೇ ಸಚಿವ ಸಂಪುಟ ವಿಸ್ತರಣೆ ಗೊಂದಲ ಮೂಡಿದೆ.

ಇದೇ ವೇಳೆ ಶಾಸಕ ರೇಣುಕಾಚಾರ್ಯ ಹೇಳಿಕೆಗೆ  ಜಾರಕಿಹೊಳಿ ತಿರುಗೇಟು ನೀಡಿದ್ದು, ರಾಜೀನಾಮೆ ನೀಡುವ ಟೈಂ ಬಂದರೆ ನೋಡೋಣ. ಆದರೆ ತ್ಯಾಗ ಮಾಡಿ ಬಂದ 17 ಜನರಿಗೂ ಸ್ಥಾನ ಸಿಗಬೇಕು. ಸಿಎಂ ಕೊಟ್ಟ ಮಾತನ್ನು ತಪ್ಪಲ್ಲ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.


Spread the love

About Laxminews 24x7

Check Also

ದೇವೇಗೌಡರ ಆರೋಗ್ಯ ಚೇತರಿಕೆಗಾಗಿ 108 ತೆಂಗಿನಕಾಯಿ ಒಡೆದು ಹರಕೆ ಹೊತ್ತ ಜೆಡಿಎಸ್ ಕಾರ್ಯಕರ್ತರು

Spread the love ಚಿಕ್ಕಬಳ್ಳಾಪುರ: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ