Breaking News

ಚಿರಂಜೀವಿ ಸರ್ಜಾ ನಮ್ಮೊಂದಿಗೆ ಇದ್ದಿದ್ರೆ 35ವರ್ಷ ತುಂಬುತ್ತಿತ್ತು.

Spread the love

ಬೆಂಗಳೂರು: ಇಂದು ಯುವಸಾಮ್ರಾಟ್ ಚಿರಂಜೀವಿ ಸರ್ಜಾ ನಮ್ಮೊಂದಿಗೆ ಇದ್ದಿದ್ರೆ 35ವರ್ಷ ತುಂಬುತ್ತಿತ್ತು. ಆದ್ರೆ ಇವತ್ತು ಚಿರು ಸರ್ಜಾ ನಮ್ಮೊಂದಿಗಿಲ್ಲ ಅನ್ನೋ ನೋವಿನಲ್ಲೇ ಇಂದು ಸರ್ಜಾ ಕುಟುಂಬದವರು ಹಾಗೂ ಅವರ ಅಭಿಮಾನಿ ಬಳಗವಿದೆ.ಚಿರು ಕುಡಿಯನ್ನು ಬರಮಾಡಿಕೊಳ್ಳಲು ಕಾತುರದಿಂದ ಎದುರು ನೋಡ್ತಿದ್ದಾರೆ.

ಧ್ರುವ ಸರ್ಜಾ ಬೃಂದಾವನದಲ್ಲಿರುವ ಚಿರು ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಇಷ್ಟೆಲ್ಲಾ ಕಾರ್ಯಕ್ರಮಗಳ ಮಧ್ಯೆ ಸಂತೋಷ್ ಚಿತ್ರಮಂದಿರದಲ್ಲಿ ರೀ-ರಿಲೀಸ್ ಆಗಿರುವ ಶಿವಾರ್ಜುನ್ ಚಿತ್ರವನ್ನು ಧ್ರುವ ನೋಡಲಿದ್ದು, ಅಭಿಮಾನಿಗಳ ಜೊತೆಗೆ ಕಾಲಕಳೆಯಲಿದ್ದಾರೆ.

ಪ್ರತಿವರ್ಷ ಚಿರು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲಬ್ರೇಟ್ ಮಾಡ್ತಿದ್ದ ಫ್ಯಾನ್ಸ್, ಇಂದು ಚಿರು ಕಟೌಟ್ ಮುಂದೆ ಕೇಕ್ ಕಟ್ ಮಾಡಿ, ಅರ್ಥ ಪೂರ್ಣವಾಗಿ ಬರ್ತ್‍ಡೇ ಸೆಲಬ್ರೇಟ್ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಅಭಿಮಾನಿಗಳಿಗೆ ಸಿಹಿಹಂಚಲಿದ್ದಾರೆ.

ಜೂನಿಯರ್ ಚಿರು ಕುರಿತು ಶುಕ್ರವಾರವಷ್ಟೇ ಧ್ರುವ ಸರ್ಜಾ ವಿಡಿಯೋ ಮಾಡುವ ವೆಲ್ ಕಮ್ ಹೇಳಿದ್ದರು. ನಟ ಧ್ರುವ ಸರ್ಜಾ ವಿಡಿಯೋ ಮೂಲಕ ಈ ಬಗ್ಗೆ ಸುಳಿವು ನೀಡಿದ್ದು, ಜೂನಿಯರ್ ಚಿರು ಆಗಮನದ ಕುರಿತು ತಿಳಿಸಿದ್ದು, ಸ್ವಾಗತಕ್ಕಾಗಿ ವಿಡಿಯೋವನ್ನು ಸಹ ಮಾಡಿದ್ದಾರೆ. ಇದರಲ್ಲಿ ಸರ್ಜಾ ಕುಟುಂಬದ ವಿವಿಧ ಹಿರಿಯರು ಹಾಗೂ ಗಣ್ಯರನ್ನು ಸಹ ತೋರಿಸಲಾಗಿದ್ದು, ಹ್ಯಾಪಿ ವೆಲ್ ಕಮ್ ಚಿರು ಎಂದು ಅರ್ಜುನ್ ಸರ್ಜಾ ಹೇಳುತ್ತಿರುವುದನ್ನು ಗಮನಿಸಬಹುದಾಗಿದೆ. ಮಾತ್ರವಲ್ಲ ಮೇಘನಾರಾಜ್ ಸೀಮಂತ ಕಾರ್ಯದ ಕೆಲ ಚಿತ್ರಣವನ್ನು ಸಹ ನೀಡಲಾಗಿದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ