ಗೋಕಾಕ: ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣದಲ್ಲಿ ಕಡಿತವಾಗಿರುವದರಿಂದ ಘಟಪ್ರಭಾ ನದಿಯ ನೀರಿನ ಮಟ್ಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
ಸೋಮವಾರದಿಂದ ಬಂದ್ ಆಗಿದ್ದ ಲೋಳಸುರ ಸೇತುವೆ ಈಗ ಮುಕ್ತವಾಗಿದೆ. ಆದ್ರೆ ನೀರಿನ ರಬಸಕ್ಕೆ ಕಸ ಕಡ್ಡಿಗಳು ಸೇತುವೆ ಮೇಲೆ ಬಂದಿವೆ. ಸೇತುವೆಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದ್ದು ಜನರು ಸಂಚರಿಸುತ್ತಿದ್ದಾರೆ.
ಗೋಕಾಕ ನಗರಕ್ಕೆ ಮಹಾರಾಷ್ಟ್ರ ಮತ್ತು ವಿಜಯಪುರಕ್ಕೆ ರಸ್ತೆ ಕಲ್ಪಿಸುವ ಲೋಳಸುರ ಸೇತುವೆ ಬಂದ್ ಆಗಿದ್ದರಿಂದ ನಿತ್ಯ ಸಂಚರಿಸುವ ಜನರು ಪರದಾಡುವಂತಾಗಿತ್ತು.
https://www.facebook.com/105350550949710/videos/379124906442348/