Breaking News

ಬೆಳಗಾವಿ ಜಿಲ್ಲೆಯ ಚಾಲಕನ ಪುತ್ರನ ಸಾಧನೆ; UPSC ಪರೀಕ್ಷೆಯಲ್ಲಿ 440ನೇ ಸ್ಥಾನ!

Spread the love

ಬೆಳಗಾವಿ ; ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು. ಸತತ ಪರಿಶ್ರಮ, ಸತತ ಓದು ಗುರುವಿಲ್ಲದೆಯೂ ನಮ್ಮ ಗುರಿಯನ್ನು ತಲುಪಲು ಸಹಕಾರಿ ಎಂಬುದನ್ನು ಚಾಲಕನ‌ ಮಗ ಇಂದು ಸಾಧನೆ ಮಾಡುವುದರ ಮೂಲಕ ಆ ಗ್ರಾಮದ ಹೆಮ್ಮೆಯ ಜೊತೆಗೆ ತಂದೆ ತಾಯಿಯ ಗೌರವವನ್ನು ಹೆಚ್ಚಿಸಿದ್ದಾನೆ.

ಹೌದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಕೀರ್ತಿಯನ್ನು ಗ್ರಾಮದ ಜಗದೀಶ ಅಡಹಳ್ಳಿ ಅವರು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 440 ನೇ ರ್‍ಯಾಂಕ್ ಪಡೆಯುವುದರ ಮೂಲಕ ರಾಜ್ಯದ ಹಾಗೂ ಬೆಳಗಾವಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಜಗದೀಶ್ ಮಧ್ಯಮ ವರ್ಗದ ಶ್ರೀಕಾಂತ ಹಾಗೂ ಸುಮಿತ್ರಾ ಅಡಹಳ್ಳಿ ದಂಪತಿಯ ನಾಲ್ವರು ಮಕ್ಕಳಲ್ಲಿ ಕಿರಿಯ ಪುತ್ರ. ಇದೀಗ 29 ವರ್ಷದಲ್ಲಿ ದೊಡ್ಡ ಹುದ್ದೆ ಪಡೆಯುವ ಮೂಲಕ ಇತರ ಬಡ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಕಳೆದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪರೀಕ್ಷೆಯಲ್ಲಿ ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಗದೀಶ್. ಈಗ ಮತ್ತೆ ಯು.ಪಿ.ಎಸ್.ಸಿ ಯಲ್ಲಿ ಉತ್ತೀರ್ಣರಾಗಿ ತಂದೆ ತಾಯಿ ಜೊತೆಗೆ ಮೋಳೆ ಎಂಬ ಪುಟ್ಟ ಗ್ರಾಮಕ್ಕೆ ಹೆಮ್ಮ ತಂದುಕೊಟ್ಟಿದ್ದಾರೆ‌.

ಮೋಳೆಯ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ 10ನೇ ತರಗತಿ ರುವ ಜಗದೀಶ, ಶೇ80.06 ಅಂಕಗಳಿಸಿದ್ದರು. ಪಿಯುಸಿ ಅಥಣಿ ತಾಲ್ಲೂಕಿನ ಜಾಧವಜಿ ಆನಂದಜಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ 89 ಅಂಕ ಪಡೆದಿದ್ದರು. ಪದವಿಯನ್ನು ಬೆಳಗಾವಿಯ ಕೆ.ಎಲ್.ಎಸ್. ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ ಶೇ 87 ಅಂಕಗಳೊಂದಿಗೆ ತೇರ್ಗಡೆಯಾಗಿ 2016 ರಿಂದ ನವದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿದ್ದರು.

: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ; ಜನರಲ್ಲಿ ಮೂಡಿದೆ ಕಳೆದ ವರ್ಷದ ಪ್ರವಾಹದ ಭಯ

2016 ರಲ್ಲಿ ನವದೆಹಲಿಯಲ್ಲಿ ಯು.ಪಿ.ಎಸ್.ಸಿ ಕೋಚಿಂಗ್‌ ಗೆ ಸೇರ್ಪಡೆಗೊಂಡು ಅಧ್ಯಯನ ಪ್ರಾರಂಭಿಸಿದ ಜಗದೀಶ್‌, 5 ಬಾರಿ ಯುಪಿಎಸ್‌ಸಿ ಪರೀಕ್ಷೆಯನ್ನೂ ಬರೆದಿದ್ದಾರೆ. ಕೆಎಎಸ್‌ 2ನೇ ಬಾರಿಯ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಈಗ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 440 ನೇ ರ್‍ಯಾಂಕ್ ಪಡೆದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿಗೆ ಹೆಮ್ಮೆಯಾಗಿದ್ದಾರೆ.
ಸದ್ಯ ಫಲಿತಾಂಶ ಬಂದಿದೆ. ಮುಂದಿನ ದಿನಗಳಲ್ಲಿ ಐ.ಎ.ಎಸ್‌. ಹುದ್ದೆಗೆ ಹೋಗಿ ಬಡ ಜನರ ಸೇವೆ ಮಾಡುವ ಗುರಿಯನ್ನು ನಾನು ಹೊಂದಿದ್ದೇನೆ. ಸತತ ಪ್ರಯತ್ನ ಹಾಗೂ ಗುರಿಯನ್ನು ಇಟ್ಟುಕೊಂಡು ಪ್ರಯತ್ನ ಮಾಡಬೇಕು. ಸಾಧಿಸುವ ಛಲವಿದ್ದರೆ ಎಲ್ಲವೂ ಸಾದ್ಯ ಅನ್ನುತ್ತಾರೆ ಜಗದೀಶ್‌. ಒಟ್ಟಿನಲ್ಲಿ ಮಧ್ಯಮ ಕುಟುಂಬದಲ್ಲಿ ಜನಿಸಿ ಪುಟ್ಟ ಗ್ರಾಮದದಿಂದ ಬೆಳೆದು ಗ್ರಾಮೀಣ ಭಾಗದಲ್ಲಿ ರುವ ಜಗದೀಶ್ ಅವರ ಸಾಧನೆ ನಿಜಕ್ಕೂ ಶ್ಲಾಘನೀಯ.


Spread the love

About Laxminews 24x7

Check Also

ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ

Spread the love ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ ಎಂಎಲ್ಸಿ ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ