ಹೈದರಾಬಾದ್: ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತು ಹಳ್ಳ ದಾಟಿಸಿದ ಘಟನೆ ತೆಲಂಗಾಣದ ಭದ್ರದ್ರಿ ಕೊತಗೊಡೆಂನಲ್ಲಿ ನಡೆದಿದೆ.
ಭದ್ರದ್ರಿ ಕೊತಗೊಡೆಂ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಗುಂಡ್ವಾಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ತಾತ್ಕಾಲಿಕ ಸೇತುವೆ ಸಹ ಪ್ರವಾಹಕ್ಕೆ ಕೊಚ್ಚಿ ಹೋಗಿತ್ತು.
ಸೇತುವೆ ಕೊಚ್ಚಿ ಹೋಗಿದ್ದರಿಂದ ಗ್ರಾಮದ ಗರ್ಭಿಣಿಯನ್ನು ಕೆಲ ಯುವಕರು ಹೆಗಲ ಮೇಲೆ ಹೊತ್ತು ಹಳ್ಳವನ್ನು ದಾಟಿಸಿದ್ದಾರೆ. ಗರ್ಭಿಣಿಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.