ಬೆಳಗಾವಿ ಲಾಕ್ ಡೌನ್ ಆಗತ್ತಾ..?
ಬೆಂಗಳೂರು: ವೈದ್ಯಕೀಯ ಅವಸ್ಥೆ, ಕೊರೊನಾ ಅಬ್ಬರದ ನಡುವೆ ಬೆಂಗಳೂರಲ್ಲಿ ಮತ್ತೆ ಲಾಕ್‍ಡೌನ್ ಬೇಕಾ ಮತ್ತು ಬೇಡ್ವಾ ಅನ್ನೋದು ಇಂದು ತೀರ್ಮಾನ ಆಗುವ ಸಾಧ್ಯತೆಗಳಿವೆ.
ಬುಧವಾರ ಬೆಳಗ್ಗೆ 5 ಗಂಟೆಗೆ ಕೊನೆ ಆಗುವ ಲಾಕ್‍ಡೌನ್‍ನ್ನು ಮತ್ತಷ್ಟು ದಿನ ಮುಂದುವರಿಸಬೇಕಾ? ಒಂದು ವೇಳೆ ಮುಂದುವರಿಸಿದ್ರೆ ಎಷ್ಟು ದಿನ? ಅಥವಾ ಇನ್ಮುಂದೆ ಲಾಕ್‍ಡೌನ್ ಬೇಕೇ ಬೇಡ್ವಾ ಅನ್ನೋದು ಇಂದು ತೀರ್ಮಾನ ಆಗುವ ಸಾಧ್ಯತೆಗಳಿವೆ. ಇಂದು ಸಿಎಂ ಬಿಎಸ್‍ವೈ ನೇತೃತ್ವದಲ್ಲಿ ಕೊರೊನಾ ನಿಯಂತ್ರಣ ಕುರಿತಂತೆ ಟಾಸ್ಕ್ ಫೋರ್ಸ್ ಸಭೆ ನಡೆಯಲಿದೆ.
ಇಂದು ಸಂಜೆ 4 ಗಂಟೆಗೆ ಸಿಎಂ ಬಿಎಸ್‍ವೈ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಯಲಿದೆ. ಬೆಂಗಳೂರಲ್ಲಿ ಮತ್ತೆ ಲಾಕ್‍ಡೌನ್ ಬೇಕೇ ಬೇಡ್ವೇ ಎಂಬ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಹಾಗೆ ಬೆಂಗಳೂರಲ್ಲಿ ಮತ್ತೆ ಲಾಕ್‍ಡೌನ್‍ನ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಯಲಿದೆ. ರೋಗ ನಿರೋಧಕ ಶಕ್ತಿ ವರ್ಧಿಸಲು ಆರ್ಯುವೇದ ಚಿಕಿತ್ಸಾ ಕ್ರಮದ ಬಗ್ಗೆ ಅಂತಿಮ ನಿರ್ಧಾರ ಮತ್ತು ಸೋಂಕಿನ ಲಕ್ಷಣ ಇಲ್ಲದವರಿಗೆ ಹೋಂ ಐಸೋಲೇಷನ್ ಬಗ್ಗೆ ಸ್ಪಷ್ಟ ನಿರ್ಧಾರ ಇವತ್ತು ಪ್ರಕಟವಾಗಬಹುದು.
ಇತ್ತ ಲಾಕ್‍ಡೌನ್ ಮಂಗಳವಾರಕ್ಕೆ ಮುಗಿಯಲಿದೆ. ರಾಜ್ಯದಲ್ಲಿ ಮತ್ತೆ ಎಲ್ಲೂ ಲಾಕ್‍ಡೌನ್ ಮಾಡಲ್ಲ ಎಂದು ಈಗಾಗ್ಲೇ ಸಿಎಂ ಹೇಳಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಮೈಸೂರು ಉಸ್ತುವಾರಿ ಸಚಿವ ಎಸ್‍ಟಿ ಸೋಮಶೇಖರ್ ಹೇಳಿದ್ದಾರೆ. ಕೊರೊನಾ ಪಾಸಿಟಿವ್ ಕೇಸ್ ಬಂದ ಮನೆಯನ್ನಷ್ಟೇ ಸೀಲ್‍ಡೌನ್ ಮಾಡ್ತೇವೆ. ಎರಡ್ಮೂರು ಮನೆಗಳಲ್ಲಿ ಕೇಸ್ ಬಂದ್ರಷ್ಟೇ ರೋಡ್ ಸೀಲ್‍ಡೌನ್ ಮಾಡ್ತೇವೆ ಎಂದು ಎಸ್‍ಟಿ ಸೋಮಶೇಖರ್ ಹೇಳಿದ್ದಾರೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಕೂಡಾ ಮತ್ತೆ ಲಾಕ್‍ಡೌನ್ ಇಲ್ಲ ಎಂದಿದ್ದಾರೆ.
ಬೆಳಗಾವಿಯಲ್ಲಿ ಇಂದು ನಡೆಯುವ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿ ಬೆಳಗಾವಿ ಲಾಕ್ ಡೌನ್ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲ್ಲಿದ್ದಾರೆ