ಸೋರುತಿಹುದು ಬೆಳಗಾವಿ ತಹಶೀಲ್ದಾರರ ಕಾರ್ಯಾಲಯ…
ದಾರು ಗಟ್ಟಿ ಮಾಡುವವರಾರಯ್ಯಾ???
ಸೋರುತಿಹುದು ಬೆಳಗಾವಿ ತಹಶೀಲ್ದಾರರ ಕಾರ್ಯಾಲಯ…
ದಾರು ಗಟ್ಟಿ ಮಾಡುವವರಾರಯ್ಯಾ???

ಮಳೆಯಲ್ಲಿ ಪರಿತಪಿಸುತ್ತಿರುವ ಜನರುಕೂಡಲೇ ದುರಸ್ಥಿ ಮಾಡಬೇಕೆಂದು ಆಗ್ರಹ
ಬೆಳಗಾವಿಯ ತಹಶೀಲ್ದಾರರ ಕಾರ್ಯಾಲಯ ಭಾರಿ ಮಳೆಗೆ ಸೋರುತ್ತಿದ್ದು, ಮಳೆ ನೀರಿನಲ್ಲೇ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಂಚರಿಸುವ ಪ್ರಸಂಗ ಎದುರಾಗಿದ್ದು, ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ ಎಂದೆಲ್ಲ ಹೇಳುತ್ತಾರೆ. ಆದರೇ, ಮಳೆಗಾಲದಲ್ಲಿ ಬೆಳಗಾವಿ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದ ದಯನೀಯ ಪರಿಸ್ಥಿತಿ ಹೇಳತೀರದಾಗಿದೆ. ಮಳೆ ಬಂತೆಂದರೇ ಸಾಕು ಕಾರ್ಯಾಲಯ ಹೊರಗೆ ಮಾತ್ರವಲ್ಲ, ಒಳಗೂ ಮಳೆ ನೀರು ಸುರಿಯಲಾರಂಭಿಸುತ್ತವೆ. ಇದರಿಂದಾಗಿ ಅಧಿಕಾರಿಗಳು ಮತ್ತು ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರಿಗೆ ತೊಂದರೆ ಅನುಭವಿಸುವಂತಾಗಿದೆ.

ಬೆಳಗಾವಿ ರಾಜ್ಯದ ಎರಡನೇ ದೊಡ್ಡ ಜಿಲ್ಲೆಯಾದರೂ ತಹಶೀಲ್ದಾರರಿಗೆ ಸ್ವಂತ ಕಟ್ಟಡವಿರದಿರುವುದು ವಿಪರ್ಯಾಸವೇ ಸರಿ.
ಸ್ವಾತಂತ್ರ್ಯಪೂರ್ವದ ಮಹಾನಗರ ಪಾಲಿಕೆ ಕಟ್ಟಡದಲ್ಲಿಯೇ ಮಹಾನಗರ ಪಾಲಿಕೆ ಕಾರ್ಯ ನಿರ್ವಹಿಸುತ್ತಿದ್ದು, ಸ್ವಂತ ಕಟ್ಟಡವಿಲ್ಲ. ಕೂಡಲೇ ಈ ಕಟ್ಟಡವನ್ನು ದುರಸ್ಥಿಗೊಳಿಸಬೇಕು. ಇಲ್ಲವೇ, ನೂತನ ಕಟ್ಟಡವನ್ನಾದರೂ ನಿರ್ಮಿಸಬೇಕೆಂಬುದು ಜನರ ಆಗ್ರಹವಾಗಿದೆ.