Breaking News
Home / Uncategorized / ಭಾನುವಾರ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಇಂದು ಜಿಲ್ಲೆ ಸಂಪೂರ್ಣ ಸ್ಥಬ್ದವಾಗಿದೆ….

ಭಾನುವಾರ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಇಂದು ಜಿಲ್ಲೆ ಸಂಪೂರ್ಣ ಸ್ಥಬ್ದವಾಗಿದೆ….

Spread the love

ಬೆಳಗಾವಿ: ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಭಾನುವಾರ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಇಂದು ಜಿಲ್ಲೆ ಸಂಪೂರ್ಣ ಸ್ಥಬ್ದವಾಗಿದೆ.

ಶನಿವಾರ ರಾತ್ರಿ 8 ಗಂಟೆಯಿಂದಲೆ ಲಾಕ್ ಡೌನ್ ಜಾರಿಗಿದ್ದರು ಸಹ ಸ್ವಲ್ಪ ಮಟ್ಟಿಗೆ ವಾಹನಗಳು ರಸ್ತೆ ಇಳಿದಿದ್ದವು. ಆದ್ರೆ ಭಾನುವಾರ ಬೆಳಗಿನ ಜಾವದಿಂದ ಬೆಳಗಾವಿ ಸ್ಥಬ್ಧವಾಗಿದೆ.

ಪ್ರತಿ ದಿನ ಜನದಟ್ಟನೆ ಯಿಂದ ಕೂಡಿರುವ ಸಂಗೋಳಿ ರಾಮಣ್ಣ ವೃತ್ತ, ಬಸ್ ನಿಲ್ದಾಣ ರಸ್ತೆ, ಚನ್ನಮ್ಮ ವೃತ್ತ, ಖಡೇಬಜಾರ ಸೇರಿದಂತೆ ಪ್ರಮುಖ ರಸ್ತೆಗೆ ಬಸ್, ದ್ವಿಚಕ್ರ ವಾಹನ ರಸ್ತೆಗೆ ಇಳಿದಿಲ್ಲ‌.

ಜನರ ಓಡಾಟ ಇಲ್ಲದಾಗಿದೆ. ಬೆಳಗಾವಿ ನಗರದಲ್ಲಿ ಹಾಲು,ಔಷಧಿ ಅಂಗಡಿ ಹೊರತು ಪಡಿಸಿದರೆ ಬೇರೆ ಯಾವ ಅಂಗಡಿಯೂ ಬಾಗಿಲು ತೆರೆದಿಲ್ಲ. ಇನ್ನೂ ಕೃಷಿ ಉತ್ಪನ್ನ ಮಾರುಕಟ್ಟೆಯೂ ಸಹ ಸಂಪೂರ್ಣ ಬಂದ್ ಆಗಿದೆ.

 

ನಿಪ್ಪಾಣಿ ಕುಗನೋಳಿ ಚೆಕ್ಕ್ ಪೋಸ್ಟ್ ನಲ್ಲೂ ಅಗತ್ಯ ವಸ್ತುಗಳ ಸರಕು ಸಾಗಿಸುವ ವಾಹನಗಳನ್ನು ಮಾತ್ರ ಗಡಿ ಪ್ರವೇಶ ಮಾಡಲು ಅವಕಾಶ ಮಾಡಿ ಕೊಡಲಾಗುತ್ತಿದೆ.

ಬೆಳಗಾವಿ ನಗರದಲ್ಲಿ ಎಲ್ಲ ಪ್ರಮೂಖ ರಸ್ತೆಗಳಲ್ಲಿ ಪೊಲೀಸ್ ಕಣ್ಗಾವಲು ಇದೆ. ನಗರಕ್ಕೆ ಯಾವುದೇ ವಾಹನ ಪ್ರವೇಶವಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಬೆಳಗಾವಿ ನಗರ ಮತ್ತು ಜಿಲ್ಲೆಯಾದ್ಯಂತ ಲಾಕ್ ಡೌನ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.


Spread the love

About Laxminews 24x7

Check Also

ಶಾಲಾರಂಭಕ್ಕೆ ಭರದ ಸಿದ್ಧತೆ

Spread the love ಉಡುಪಿ: ಉಭಯ ಜಿಲ್ಲೆಗಳಲ್ಲೂ ಶಾಲಾರಂಭಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಮೇ 29ರಿಂದ 2024-25ನೇ ಸಾಲಿನ ಶೈಕ್ಷಣಿಕ ತರಗತಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ