Breaking News

ಯುದ್ಧೋಪಾದಿಯಲ್ಲಿ ಕೋಟೆ ಕೆರೆ ನಾಲೆಯ ಸ್ವಚ್ಛತೆ ಶಾಸಕ ಆಸೀಫ್ ಸೇಠ್ ಮತ್ತು ನಗರಸೇವಕರಿಂದ ಪರಿಶೀಲನೆ

Spread the love

ಯುದ್ಧೋಪಾದಿಯಲ್ಲಿ ಕೋಟೆ ಕೆರೆ ನಾಲೆಯ ಸ್ವಚ್ಛತೆ
ಶಾಸಕ ಆಸೀಫ್ ಸೇಠ್ ಮತ್ತು ನಗರಸೇವಕರಿಂದ ಪರಿಶೀಲನೆ
ಮಾನ್ಸೂನ್ ಸಮಯದಲ್ಲಿ ನಿರ್ಮಾಣವಾದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇಂದು ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಅವರು ಬೆಳಗಾವಿ ಕೋಟೆ ಕೆರೆಗೆ ಭೇಟಿ ನೀಡಿ ಬ್ಲಾಕೇಜ್ ಸ್ವಚ್ಛತೆಗಾಗಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ಪರಿಶೀಲನೆ ನಡೆಸಿದರು.
ಇಂದು ಬೆಳಗಾವಿಯ ಉತ್ತರ ಶಾಸಕ ಆಸೀಫ್ ಸೇಠ್ ಅವರು ಬೆಳಗಾವಿಯ ಕೋಟೆ ಕೆರೆಗೆ ಭೇಟಿ ನೀಡಿ ಬೃಹತ್ ನಾಲೆ ಶುದ್ಧಿಕರಣಕ್ಕಾಗಿ ಕೈಗೊಂಡ ಕಾಮಗಾರಿಯನ್ನು ಪರಿಶೀಲಿಸಿದರು. ಪ್ಲಾಸ್ಟಿಕ್, ಥರ್ಮಾಕೋಲ್, ಸೇರಿದಂತೆ ತ್ಯಾಜ್ಯಗಳಿಂದ ನಾಲೆಯೂ ಮುಚ್ಚು ಹೋಗಿರುವುದು ಕಂಡು ಬಂದಿತು.
“ನಮ್ಮ ಬೆಳಗಾವಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಎಲ್ಲರ ಜವಾಬ್ದಾರಿಯೂ ಆಗಿದೆ. ನಾಲೆಗಳನ್ನು ಮಳೆಯ ನೀರನ್ನು ಹೊರಹಾಕಲು ನಿರ್ಮಿಸಲಾಗಿವೆ, ಅವುಗಳು ಕಸದ ತೊಟ್ಟಿಗಳಲ್ಲ ಪ್ಲಾಸ್ಟಿಕ್, ಥರ್ಮಾಕೋಲ್ ತ್ಯಾಜ್ಯವನ್ನು ಅದರಲ್ಲಿ ಎಸೆದರೇ ನೀರು ಹರಿದು ಹೋಗದೇ ಅವಾಂತರ ಸೃಷ್ಠಿಯಾಗುತ್ತದೆ. ಕಸವನ್ನು ನಿಯಮಿತವಾಗಿ ಪ್ರತಿದಿನ ಮನೆ ಮುಂದೆ ಆಗಮಿಸುವ ಕಸದ ವಾಹನಗಳಿಗೆ ನೀಡಬೇಕು. ಸರ್ಕಾರ ಮತ್ತು ಮಹಾನಗರ ಪಾಲಿಕೆ ಮೂಲಸೌಕರ್ಯಗಳ ನಿರ್ವಹಣೆಗೆ ಬದ್ಧವಾಗಿವೆ ಎಂದು ಸ್ಪಷ್ಟಪಡಿಸಿದರು. ಆದರೆ ನಾಗರಿಕರ ಜಾಗೃತಿ ಮತ್ತು ಸಹಕಾರವೂ ಅಷ್ಟೇ ಮುಖ್ಯ ಎಂದರು.
ಮಹಾನಗರ ಪಾಲಿಕೆಯ ಆಯುಕ್ತರಾದ ಶುಭಾ ಬಿ ಅವರು ಪಾಲಿಕೆ ಸಿಬ್ಬಂದಿಗೆ ನಿಯಮಿತವಾಗಿ ಬ್ಲಾಕ್ ಸ್ಪಾಟ್ ಪ್ರದೇಶಗಳಲ್ಲಿ ನಿಗಾವಹಿಸಲು ಹಾಗೂ ತುರ್ತು ಸಂದರ್ಭದಲ್ಲಿ ತಕ್ಷಣ ಕಳಿಸಲಾಗುವ ತಂಡಗಳನ್ನು ಸಿದ್ಧಪಡಿಸಿ ಸ್ವಚ್ಚತೆ ಕೈಗೊಳ್ಳಲಲು ಸೂಚಿಸಿದರು. ನಗರಸೇವಕರು ಕೂಡಾ ಸ್ಥಳೀಯವಾಗಿ ಜಾಗೃತಿ ಮೂಡಿಸಲು ತಮ್ಮ ಸಹಕಾರವನ್ನು ನೀಡುವುದಾಗಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ನಗರಸೇವಕ ಶಿವಾಜೀರಾವ್ ಮಂಡೋಳಕರ, ರವಿ ಸಾಳುಂಕೆಮಹಾನಗರ ಪಾಲಿಕೆ ಆಯುಕ್ತರಾದ ಶುಭಾ ಬಿ. ಸೇರಿದಂತೆ ಇನ್ನುಳಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ಧರು. ಶಾಸಕರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ