Breaking News

ಕಸಾಯಿ ಗಲ್ಲಿಯ ರಸ್ತೆಯಲ್ಲಿ ನಿರ್ಮಾಣಗೊಂಡ ಬೃಹತ್ ಗುಂಡಿ…

Spread the love

ಕಸಾಯಿ ಗಲ್ಲಿಯ ರಸ್ತೆಯಲ್ಲಿ ನಿರ್ಮಾಣಗೊಂಡ ಬೃಹತ್ ಗುಂಡಿ…
ಸಂಚರಿಸಲು ಪರದಾಡುತ್ತಿರುವ ವಾಹನ ಸವಾರರು…ಸಮಸ್ಯೆ ಬಗೆಹರಿಸಿದ್ದರೇ ಪ್ರತಿಭಟನೆಯ ಎಚ್ಚರಿಕೆ !!!
ಬೆಳಗಾವಿಯ ಕಸಾಯಿ ಗಲ್ಲಿ ಫಿಶ್ ಮತ್ತು ಮಟನ್ ಮಾರ್ಕೇಟ್’ನಲ್ಲಿ ಗುಂಡಿಯೊಂದು ನಿರ್ಮಾಣವಾಗಿದ್ದು, ವಾಹನ ಸವಾರರು ಪರಿತಪಿಸುವಂತಾಗಿದೆ. ಸಂಬಂಧಿಸಿದವರು ಕೂಡಲೇ ರಸ್ತೆ ದುರಸ್ಥಿ ಮಾಡದಿದ್ದರೇ, ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ.
ಬೆಳಗಾವಿಯ ಬೆಳಗಾವಿಯ ಕಸಾಯಿ ಗಲ್ಲಿ ಫಿಶ್ ಮತ್ತು ಮಟನ್ ಮಾರ್ಕೇಟ್’ನ ರಸ್ತೆ ಅಧೋಗತಿಗೆ ಬಂದಿದೆ. ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿಗಾಗಿ ತೊಡಿದ ಗುಂಡಿ ಸರಿಯಾಗಿ ಮುಚ್ಚದ ಹಿನ್ನೆಲೆ ಅದು ಬಾಯ್ತೆರೆದುಕೊಂಡಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಸಂಚರಿಸಲು ತೊಂದರೆಯಾಗುತ್ತಿದೆ. ಕಸಾಯಿ ಗಲ್ಲಿಯ ರಸ್ತೆಯೂ ಕೇಂದ್ರ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಇಲ್ಲಿ ನಿರ್ಮಾಣವಾದ ಗುಂಡಿಗಳಿಂದ ಸುರಳಿತವಾಗಿ ವಾಹನಗಳು ಸಂಚಾರವಾಗದೇ, ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಜನರಿಗೆ ಮಳೆಗಾಲದಲ್ಲಿ ಮತ್ತು ರಾತ್ರಿಯ ವೇಳೆ ಹರಸಾಹಸ ಪಡುವಂತಾಗಿದೆ.
ಈ ರಸ್ತೆಯಲ್ಲಿ ಈ ರೀತಿಯ ದೊಡ್ಡ ಗುಂಡಿ ನಿರ್ಮಾಣವಾಗಿದ್ದು, ವಾಹನ ಸವಾರರು ಪರಿತಪಿಸುವಂತಾಗುತ್ತಿದೆ. ಮಳೆಗಾಲದಲ್ಲಂತೂ ಇಲ್ಲಿನ ಪರಿಸ್ಥಿತಿ ಹೇಳತೀರದಾಗಿದೆ. ಹಲವಾರು ವಾಹನ ಸವಾರರು ಕೇಂದ್ರ ಬಸ್ ನಿಲ್ದಾಣಕ್ಕೆ ತೆರಳುವಾಗ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸಂಬಂಧಿಸಿದ ಶಾಸಕರು ಪರಿಸ್ಥಿತಿಯನ್ನು ಅವಲೋಕಿಸಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 
ಇನ್ನು ಪೈಪಲೈನ್’ಗಾಗಿ ಇಲ್ಲಿ ಗುಂಡಿಯನ್ನು ಅಗಿಯಲಾಗಿತ್ತಂತೆ. ಕಾಮಗಾರಿ ಮುಗಿದು ತಿಂಗಳು ಕಳೆದರೂ ಕೂಡ ಅದನ್ನು ಸರಿಯಾಗಿ ಮುಚ್ಚದಿರುವುದು ಸಮಸ್ಯೆಯನ್ನು ತಂದೊಡ್ಡಿದೆ. ಇದರ ಮಾಹಿತಿ ಇರದೇ ಬರುವ ವಾಹನ ಸವಾರರು ಗುಂಡಿಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಿದ್ದಾರೆ. ಮಳೆ ಬಿದ್ದಾಗ ಕೆಸರುಮಯ ವಾತಾವರಣ ನಿರ್ಮಾಣವಾಗುತ್ತಿದೆ. ಇಲ್ಲಿ ಮಟನ್ ಮಾರ್ಕೇಟ್ ಇದ್ದು, ಇಲ್ಲಿ ಖರೀದಿಗಾಗಿ ಬರುವವರಿಗೂ ತೊಂದರೆಯಾಗುತ್ತಿದೆ.
ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗುಂಡಿಗಳನ್ನು ಮುಚ್ಚಿ ಸುಸಜ್ಜಿತ ರಸ್ತೆ ನಿರ್ಮಿಸಿ ಕೊಡಬೇಕು.ಇಲ್ಲದ್ದಿದ್ದರೇ, ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದೆಂದು ಇಲ್ಲಿನ ಜನರು ಎಚ್ಚರಿಕೆಯನ್ನು ನೀಡಿದ್ದಾರೆ.

Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ