Breaking News
Home / Uncategorized / ಬೆಳಗಾವಿಯ ಮನೆಗಳಲ್ಲಿ ಕಳವು | ಆರೋಪಿ ಬಂಧನ: ₹4 ಲಕ್ಷ ಮೌಲ್ಯದ ಆಭರಣ ವಶ…?

ಬೆಳಗಾವಿಯ ಮನೆಗಳಲ್ಲಿ ಕಳವು | ಆರೋಪಿ ಬಂಧನ: ₹4 ಲಕ್ಷ ಮೌಲ್ಯದ ಆಭರಣ ವಶ…?

Spread the love

ಬೆಳಗಾವಿ: ಇಲ್ಲಿನ ಕ್ಯಾಂಪ್ ಠಾಣೆ ಪೊಲೀಸರು ಮನೆಗಳಲ್ಲಿ ಕಳವು ಮಾಡಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಿ ಅವರಿಂದ ₹ 4 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವಂಟಮೂರಿ ಕಾಲೊನಿಯ ರಾಜು ಯಲ್ಲಪ್ಪ ಆಲಟ್ಟಿ (19 ವರ್ಷ) ಬಂಧಿತ.

‘ಮನೆಯ ಬಾಗಿಲಿನ ಬೀಗ ಮುರಿದು ಅಲ್ಮೆರಾದಲ್ಲಿದ್ದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಯಾರೋ ಕಳವು ಮಾಡಿದ್ದಾರೆ’ ಎಂದು ವಿನಾಯಕ ನಗರದ ನಕ್ಷತ್ರ ಕಾಲೊನಿಯ ಸಂಗೀತಾ ಪಾಟೀಲ ಮತ್ತು ಹಿಂಡಲಗಾ ವಿಜಯನಗರದ ದತ್ತ ಕಾಲೊನಿಯ ಸಂಗೀತಾ ಬಿರ್ಜೆ ಹೋದ ವರ್ಷದ ನವೆಂಬರ್‌ನಲ್ಲಿ ದೂರು ನೀಡಿದ್ದರು.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ ಡಿ. ಸಂತೋಷಕುಮಾರ್‌ ಹಾಗೂ ತಂಡದವರು ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಎರಡು ಮನೆಗಳಲ್ಲೂ ಕಳವು ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಕಳವು ಮಾಡಿದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ


Spread the love

About Laxminews 24x7

Check Also

ಎಸ್‌ಐಟಿ ತನಿಖೆಯಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಲ್ಲ ಎಂದ ಸಿಎಂ

Spread the loveಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ ಎಸ್‌ಐಟಿ ನಡೆಸುತ್ತಿರುವ ತನಿಖೆಯಲ್ಲಿ ಸರ್ಕಾರ ಯಾವುದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ