ಕಾನ್ಪುರ, ಜುಲೈ 3: ದಾಳಿಗೆ ತೆರಳಿದ್ದ ಸಮಯದಲ್ಲಿ ರೌಡಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಡಿವೈಎಸ್‌ಪಿ ಸೇರಿ 8 ಮಂದಿ ಪೊಲೀಸರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ರೌಡಿ ಶೀಟರ್ ವಿಕಾಸ್ ದುಬೆ ಇದ್ದ ಪ್ರದೇಶದ ಸುಳಿವು ಪಡೆದಿದ್ದ ಪೊಲೀಸರು ದಾಳಿಗೆಂದು ತೆರಳಿದ್ದರು ಆ ಸಂದರ್ಭದಲ್ಲಿ ರೌಡಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಕಾನ್ಪುರದಲ್ಲಿ ಪೊಲೀಸರ ಹತ್ಯೆಗೈದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಘಟನೆಯ ಬಗ್ಗೆ ತಕ್ಷಣ ವರದಿ ಸಲ್ಲಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಡಿಜಿಪಿ ಎಚ್‌ಸಿ ಅವಸ್ತಿ ಅವರಿಗೆ ನಿರ್ದೇಶನ ನೀಡಿದ್ದಾರೆ.
ಗುರುವಾರ ರಾತ್ರಿ 12 ಗಂಟೆಯ ಹೊತ್ತಿಗೆ ಪೊಲೀಸರು ರೌಡಿ ಶೀಟರ್ ಇದ್ದ ಪ್ರದೇಶಕ್ಕೆ ತೆರಳಿ ಹುಡುಕಾಟ ನಡೆಸಿತ್ತು ಎಂದು ಪತ್ರಿಕೆ ವರದಿ ಮಾಡಿದೆ.
ಘಟನಾ ಸ್ಥಳಕ್ಕೆ ಎಸ್‌ಎಸ್‌ಪಿ ಮತ್ತು ಐಜಿ ಧಾವಿಸಿದ್ದು ಬೆರಳಚ್ಚು ತಜ್ಞರ ತಂಡ ತನಿಖೆ ನಡೆಸುತ್ತಿದೆ.