Breaking News

ಮಳೆಗಾಲ ಆರಂಭವಾಗಲೂ ಕೆಲವೇ ದಿನಗಳು ಬಾಕಿ ಆದರೂ ಬಳ್ಳಾರಿ ನಾಲೆಯಿಂದ ಹೂಳೆತ್ತದ ಸರ್ಕಾರ?

Spread the love

ಮಳೆಗಾಲ ಆರಂಭವಾಗಲೂ ಕೆಲವೇ ದಿನಗಳು ಬಾಕಿ… ಆದರೂ ಬಳ್ಳಾರಿ ನಾಲೆಯಿಂದ ಹೂಳೆತ್ತದ ಸರ್ಕಾರ…!!!
ರೈತರಲ್ಲಿ ಮೂಡಿದ ಆತಂಕ….
ನಮ್ಮನ್ನು ಬದುಕಿಸಿ ಎಂದು ಗೊಗರೆದ ರೈತರು..!!
ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಆದರೂ ಇಲ್ಲಿಯ ವರೆಗೂ ಬೆಳಗಾವಿಯ ಬಳ್ಳಾರಿ ನಾಲೆಯ ಹೂಳೆತ್ತದ ಕಾರಣ ರೈತರಿಗೆ ಆತಂಕ ಎದುರಾಗಿದೆ. ಸಂಬಂಧಿಸಿದ ಜನಪ್ರತಿನಿಧಿಗಳು ಸಂಭಾವ್ಯ ಸಮಸ್ಯೆಯನ್ನು ಅವಲೋಕಿಸಿ, ರೈತರನ್ನು ಬದುಕಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಹೌದು, ಬೆಳಗಾವಿ, ಅನಗೋಳ ಮತ್ತು ಶಹಾಪೂರ, ವಡಗಾಂವ, ಹಲಗಾ ಪ್ರದೇಶದಿಂದ ಬಳ್ಳಾರಿ ನಾಲೆಯೂ ಹಾಯ್ದು ಹೋಗುತ್ತದೆ. ಇದಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯಲಾಗುತ್ತದೆ. ಅದೇ ರೀತಿ ಹಿಂಗಾರು ಹಂಗಾಮಿನಲ್ಲಿ ಚನ್ನಂಗಿ, ಕಡಲಿ, ಗೋಧಿ, ತರಕಾರಿಗಳನ್ನು ಬೆಳೆಯಲಾಗುತ್ತದೆ.
ಕಳೆದ ಬಾರಿ ಶಾಸಕರು ಬಳ್ಳಾರಿ ನಾಲೆಯ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ ಮಂಜೂರಾಗಿರುವುದಾಗಿ ತಿಳಿಸಿದ್ದಾರೆ. ಆದರೇ, ಇಲ್ಲಿಯ ವರೆಗೂ ಯಾವುದೇ ಕಾಮಗಾರಿಗಳು ಆರಂಭವಾಗಿಲ್ಲ. ಕಳೆದ ಹಲವು ವರ್ಷಗಳಿಂದ ಇದರ ಹೂಳೆತ್ತದ ಕಾರಣ,
ಮಳೆಗಾಲದಲ್ಲಿ ನೀರು ತುಂಬು ಇದರ ಪಕ್ಕದಲ್ಲಿರುವ ರೈತರ ಜಮೀನಿಗೆ ನೀರು ನುಗ್ಗುತ್ತಿದೆ. ಇದರಿಂದಾಗಿ ಈ ಭಾಗದ ರೈತರು ಪೇಚಿಗೆ ಸಿಲುಕುತ್ತಾರೆ.
ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಸಮಸ್ಯೆಯನ್ನು ಪರಿಹರಿಸಿ ಅಲ್ಪ ಭೂ ಮಾಲೀಕರನ್ನು ಬದುಕಿಸಬೇಕು. ಕಳೆದ ಬಾರಿಯಂತೆ ಅತಿವೃಷ್ಠಿಯಾದರೇ, ರೈತರು ಬದುಕು ದುಸ್ತರವಾಗುತ್ತದೆ ಎಂದು ರೈತ ರಾಜು ಮರವೆ ಹೇಳಿದರು.
ಒಟ್ಟಾರೆ, ಮಳೆಗಾಲ ಅವಾಂತರ ಎದುರಾಗುವ ಮೊದಲೇ ಸಂಭಾವ್ಯ ಸಮಸ್ಯೆಯನ್ನು ಪರಿಹರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

Spread the love ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ