Breaking News

ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್: ಬೆಳಗಾವಿಯ 7 ವಿದ್ಯಾರ್ಥಿಗಳು ಆಯ್ಕೆ

Spread the love

ಬೆಳಗಾವಿ: ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ(SGFI) ಆಯೋಜಿಸಿರುವ ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್​ಗೆ ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದ 7 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಮಣಿಪುರದ ಇಂಫಾಲ್​ನಲ್ಲಿ‌ ಏಪ್ರಿಲ್ 6ರಿಂದ ಸ್ಪರ್ಧೆ ನಡೆಯಲಿದೆ.

ಕರ್ನಾಟಕದಿಂದ 20 ಕ್ರೀಡಾಪಟುಗಳು ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್​ಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಏಳು ಮಂದಿ ಬೆಳಗಾವಿ ಜಿಲ್ಲೆಯವರಾಗಿದ್ದರೆ. ಅದರಲ್ಲೂ‌ಹಳ್ಳಿ ಪ್ರತಿಭೆಗಳೇ ಎನ್ನುವುದು ಮತ್ತೊಂದು ವಿಶೇಷ.

ಈ ಏಳು ಕ್ರೀಡಾಪಟುಗಳಲ್ಲಿ ಐವರು ಕಡೋಲಿ ಗ್ರಾಮದವರು. ಕಡೋಲಿ ಕೃಷಿಗೆ ಮಾತ್ರವಲ್ಲದೇ ಕ್ರೀಡಾ ಕ್ಷೇತ್ರದಲ್ಲೂ ಹೆಸರುವಾಸಿ. ಖೋ ಖೋ, ಕುಸ್ತಿ, ರನ್ನಿಂಗ್, ಕ್ರಿಕೆಟ್, ಫುಟ್‌ಬಾಲ್, ಈಜು ಮತ್ತು ಸೈಕ್ಲಿಂಗ್ ಸೇರಿ ಮತ್ತಿತರ ಕ್ರೀಡೆಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ಕ್ರೀಡಾಪಟುಗಳು ಸಾಧನೆಗೈದಿದ್ದಾರೆ. ಇದೀಗ ಸಾಧನೆಗಳ‌ ಪಟ್ಟಿಗೆ ವೇಟ್ ಲಿಫ್ಟಿಂಗ್ ಸೇರ್ಪಡೆಯಾಗಿದೆ.

ಕಡೋಲಿ ಗ್ರಾಮದ ಶಿವಾಜಿ ಪ್ರೌಢಶಾಲೆಯ 10ನೇ ತರಗತಿ‌ ವಿದ್ಯಾರ್ಥಿಗಳಾದ ಆದರ್ಶ ಧಾಯಗೊಂಡೆ, ನಾಗೇಶ ಅನಗೋಳ್ಕರ್, ಶ್ರದ್ಧಾ ಕಾಸರ್, 9ನೇ ತರಗತಿ ವಿದ್ಯಾರ್ಥಿನಿ ಸೃಷ್ಟಿ ಮುತಗೇಕರ್, ಕಡೋಲಿಯ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ‌ನಿ ಪುರ್ವಿತಾ ದೋಮನೆ, ಕಲ್ಲೇಹೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ವರುಣ ಬೆನಕೆ ಹಾಗೂ ಬೆಳಗಾವಿ ನಗರದ ಮರಾಠಿ‌ ವಿದ್ಯಾನಿಕೇತನ ಶಾಲೆಯ 10ನೇ ತರಗತಿಯ ಅದಿತಿ ಪಾಟೀಲ್ ರಾಷ್ಟ್ರಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್​ಗೆ ಆಯ್ಕೆಯಾದವರು.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ