Breaking News

ಬೆಳಗಾವಿಯಲ್ಲಿ ಕರಾಳ ಪೆಟ್ರೋಲ್, ಡಿಸೇಲ್ ದಂಧೆ

Spread the love

ಬೆಳಗಾವಿಯಲ್ಲಿ ಕರಾಳ ಪೆಟ್ರೋಲ್, ಡಿಸೇಲ್ ದಂಧೆ
ಕುಂದಾನಗರಿ ಬೆಳಗಾವಿಯಲ್ಲಿ ರಾಜಾರೋಷವಾಗಿ ಪೆಟ್ರೋಲ್-ಡಿಸೇಲ್ ಕರಾಳ ದಂಧೆ ನಡೆಯುತ್ತಿದ್ದು ಕರಾಳ ದಂಧೆಯ ಇಂಚಿಂಚು ರಹಸ್ಯ ಬಯಲಾಗಿದೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗ್ತಿದ್ದಂತೆ ಗಂಟುಮೂಟೆ ಸಮೇತ ತೈಲ ಕಳ್ಳರು ಎಸ್ಕೇಪ್ ಸ್ಥಳವೊಂದನ್ನ ಬಿಟ್ಟು ನಾಪತ್ತೆಯಾಗಿದ್ದಾರೆ‌.
May be an image of train, ambulance and text
ಕಠಿಣ ಕ್ರಮ ಕೈಗೊಳ್ಳಬೇಕಿದ್ದ ಪೊಲೀಸರು, ತೈಲ ನಿಗಮದ ಅಧಿಕಾರಿಗಳಿಗೂ ಕಣ್ಮುಚ್ಚಿಕುಳಿತ್ತಿದ್ದು ಅಕ್ರಮದ ಪಾಲು ಇರೋ ಬಗ್ಗೆ ವಾಸನೆ ಮೂಡಿದೆ. ಹಾಗಾದರೆ ಏ‌ನಿದು ತೈಲ ಕಳ್ಳರ ರಹಸ್ಯ ಅಂತೀರಾ
May be an image of train and text
ರಾತ್ರೋರಾತ್ರಿ ರಹಸ್ಯವಾಗಿ ಪೆಟ್ರೋಲ್ ಡಿಸೇಲ್ ಕಳ್ಳತನ ಮಾಡ್ತಿರೋ ಖದೀಮರು, ಮಾಧ್ಯಮಗಳಲ್ಲಿ ಗಂಟುಮೂಟೆ ಸಮೇತ ನಾಪತ್ತೆ ಆಗಿರೋ ಈ ಎಲ್ಲ ದೃಶ್ಯ ಕಂಡುಬಂದಿದ್ದು ಬೆಳಗಾವಿ ಗಾಂಧಿನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ.
 ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕವೇ ರಾಜಾರೋಷವಾಗಿ ತೈಲ ದರೋಡೆ ಮಾಡಲಾಗುತ್ತಿದ್ದು ಪೆಟ್ರೊಲ್ ಬಂಕ್ ಮಾಲೀಕರಿಗೂ ಮಕ್ಮಲ್ ಟೋಪಿ, ಸರ್ಕಾರಕ್ಕೂ ತೆರಿಗೆ ವಂಚನೆಯನ್ನು ಖದೀಮರು ಮಾಡುತ್ತಿದ್ದಾರೆ.ಬೆಳಗಾವಿಯ ಸುಭಾಷ ನಗರ, ಅಶೋಕ ನಗರ, ಗಾಂಧಿ ನಗರದಲ್ಲಿ ನಿತ್ಯವೂ ಪೆಟ್ರೋಲ್, ಡಿಸೇಲ್ ಹಗಲು ದರೋಡೆ ನಡೆಯುತ್ತಿದೆ‌‌.
May be an image of text that says "초마지 DOLRSTE DOL DIESEL DELIVERY CALL 9739666880 984 9844486855 6000LTRS."
ಸ್ವಲ್ಪವೂ ಎಚ್ಚರ ತಪ್ಪಿದ್ರೆ ಬೆಳಗಾವಿಗೆ ದೊಡ್ಡ ಗಂಡಾಂತರ ಕಾದಿದ್ದು ಸ್ವಲ್ಪಹೆಚ್ಚೂಕಮ್ಮಿಯಾದ್ರೂ ರಾಷ್ಟ್ರೀಯ ಹೆದ್ದಾರಿ,ಮಾರುತಿ ಹಣ್ಣಿನ ಮಾರುಕಟ್ಟೆ ಉಡೀಸ್ ಆಗುತ್ತದೆ. ತೈಲ ಕಳ್ಳ ದಂಧೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರು, ಪ್ರಭಾವಿಗಳೂ ಭಾಗಿಯಾಗಿರುವ ಶಂಕೆ ಇದ್ದು ಹೀಗಾಗಿ ಕಳೆದ ಹಲವಾರು ವರ್ಷಗಳಿಂದ ಈ ದಂಧೆ ನಡೆದುಕೊಂಡು ಬಂದಿದ್ದರೂ ಈವರೆಗೂ ಯಾವೊಬ್ಬ ಅಧಿಕಾರಿಗಳು ತಡೆಯುವ ಕೆಲಸ ಮಾಡಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರಆಗುತ್ತಿದ್ದಂತೆ ಎಲ್ಲರೂ ನಾಪತ್ತೆ ಆಗಿದ್ದಾರೆ.
ಇನ್ನೂ ತೈಲ ಕಳ್ಳತನ ಮಾಡೋ‌ ಖದೀಮರು ದೇಸೂರು ಡಿಪೋದಿಂದ ಟ್ಯಾಂಕರ್‌ಗಳನ್ನ ತುಂಬಿಕೊಂಡು ಪೆಟ್ರೋಲ್ ಬಂಕ್ ಬದಲು ತೈಲ ಕಳ್ಳರ ಸೆಡ್‌ಗೆ ಟ್ಯಾಂಕರ್ ವಾಹನ ತರುತ್ತಾರೆ.
ಸದ್ಯದ ಮಾಹಿತಿ ಪ್ರಕಾರ ಬೆಳಗಾವಿ ಗಾಂಧಿ ನಗರ ಸೇರಿದಂತೆ ಮೂರು ಕಡೆಗಳಲ್ಲಿ ತಾತ್ಕಾಲಿಕ ಸೆಡ್ ನಿರ್ಮಿಸಿ ತೈಲ ದರೋಡೆಕೋರರು ದರೋಡೆಗೆ ಇಳಿದಿದ್ದು ಟ್ಯಾಂಕರ್‌ನಲ್ಲಿ ಪೈಪ್‌ನಿಂದ ಡೀಸೆಲ್, ಪೆಟ್ರೋಲ್ ಕಳ್ಳತನ ಮಾಡುತ್ತಿದ್ದು ಅದಕ್ಕಾಗಿ ತೈಲ ತುಂಬಿದ ಟ್ಯಾಂಕರ್ ಮೇಲಿನ ಕ್ಯಾಪ್ ಓಪನ್ ಮಾಡಿ ಕೃತ್ಯ ಎಸಗುತ್ತಿದ್ದು ಬಳಿಕ ಪೈಪ್ ಹಾಕಿ ಪ್ರತಿ ಟ್ಯಾಂಕರ್‌ನಿಂದ ನೂರು ಲೀಟರ್ ತೈಲ ಕಳ್ಳತನ ಮಾಡುತ್ತಾರೆ.
ಪ್ರತಿದಿನ ಒಂದೊಂದು ಸೆಡ್‌ನಲ್ಲಿ 10ರಿಂದ 15ಟ್ಯಾಂಕರ್‌ಗಳಲ್ಲಿನ ತೈಲ ಕಳ್ಳತನ ಮಾಡುತ್ತಿದ್ದು ಹೀಗೆ ಕದ್ದ ಪ್ರತಿ ಲೀಟರ್ ಪೆಟ್ರೋಲ್‌‌ಗೆ ಟ್ಯಾಂಕರ್ ಚಾಲಕರಿಗೆ 50 ರೂಪಾಯಿ ನೀಡುವ ಖದೀಮರು ಬಳಿಕ 90ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಮಾರಿಕೊಳ್ಳುತ್ತಿದ್ದಾರೆಂತೆ. ಇನ್ನೂ ಇಂತಹ ಪ್ರಕರಣಗಳು ಬೆಳಕಿಗೆ ಬರ್ತಿದ್ದಂತೆ ಲಾರಿಯಿಂದ ಪೆಟ್ರೋಲ್, ಡಿಸೆಲ್ ಕಳ್ಳತನ ತಡೆಯಲು ಡಿಜಿಟಲ್ ಲಾಕ್ ಅಳವಡಿಕೆ ಮಾಡಿದ್ದು ಡಿಪೋದಲ್ಲೇ ಟ್ಯಾಂಕರ್‌ನ ಎಕ್ಸಿಟ್ ಪಾಯಿಂಟ್ ನಲ್ಲಿ ಡಿಜಿಟಲ್ ಲಾಕ್,ಜಿಪಿಎಸ್ ಅಳವಡಿಕೆ ಮಾಡುತ್ತಾರೆ.
ಆದರೂ ಡಿಸೆಲ್ ಲಾರಿಯ ಮೇಲ್ಬಾಗದ ಕ್ಯಾಪ್ ಓಪನ್ ಮಾಡಿ ದರೋಡೆ ಮಾಡುತ್ತಿದ್ದು ನಿತ್ಯ ಸಾವಿರಾರು ಲೀಟರ್ ಪೆಟ್ರೋಲ್, ಡೀಸೆಲ್ ಕಳ್ಳತನ ಮಾಡ್ತಿದ್ದಾರೆ. ಇಷ್ಟಾದರೂ ಪೊಲೀಸರು ದಿವ್ಯಮೌನ ವಹಿಸಿದ್ದು ಕಳ್ಳ ದಂಧೆಗೆ ಬ್ರೇಕ್ ಹಾಕದ ತೈಲ ನಿಗಮಗಳ ಅಧಿಕಾರಿಗಳು,‌‌ಪೊಲೀಸರ ನಡೆ ಬಗ್ಗೆಯೂ ಅನುಮಾನ ಹುಟ್ಟಿಕೊಂಡಿದೆ.
ಒಟ್ಟಾರೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗ್ತಿದ್ದಂತೆ ಗಂಟುಮೂಟೆ ಕಟ್ಟಿಕೊಂಡು ಪರಾರಿಯಾದ ದರೋಡೆಕೋರರು ತಗಡಿನ ಸೆಡ್ ನಲ್ಲಿ ಪೆಟ್ರೋಲ್, ಡಿಸೇಲ್ ಬ್ಯಾರಲ್ ಗಳನ್ನು ತುಂಬಿಸಿ ಇಟ್ಟಿದ್ದು ಯಾವೊಬ್ಬ ಅಧಿಕಾರಿಗಳು ಈವರೆಗೂ ಭೇಟಿ,ನೀಡಿ ಪರಿಶೀಲನೆ ನಡೆಸಿಲ್ಲ.ಹೀಗಾಗಿ ಪೊಲೀಸರು,ತೈಲ ನಿಗಮದ ಅಧಿಕಾರಿಗಳ ನಡೆಯ ಬಗ್ಗೆಯೂ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ.

Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ