Breaking News

ಸೋಮವಾರದಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿ………….

Spread the love

ಬೆಂಗಳೂರು: ಸೋಮವಾರದಿಂದ ಕರ್ನಾಟಕದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆಯವರೆಗೆ ಬಂದ್ ಆಗಲಿದೆ.

ಶನಿವಾರ ಒಂದೇ ದಿನ ಕೊರೊನಾ ಮಹಾಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಮತ್ತೆ ಜಾರಿಯಾಗಿದೆ. ಇವತ್ತು ಒಂದೇ ದಿನ ಮಾತ್ರ ರಾತ್ರಿ 9 ಗಂಟೆ ತನಕ ವ್ಯವಹಾರ ನಡೆಸಬಹುದಾಗಿದ್ದು ನಾಳೆಯಿಂದ ರಾತ್ರಿ 8 ಗಂಟೆಯಿಂದ 5 ರ ತನಕ ಕರ್ಫ್ಯೂ ಇರಲಿದೆ.

ಏನು ಇರುತ್ತೆ?
– ಆಸ್ಪತ್ರೆ ಸೇವೆಗಳು, ಮೆಡಿಕಲ್ ಅಂಗಡಿಗಳು ಇರುತ್ತವೆ
– ಅಗತ್ಯ ವಸ್ತು ಸೇವೆಗಳಿಗೆ ನಿರ್ಬಂಧ ಇರಲ್ಲ
– ಹಾಲು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಸೇವೆ
– ಅಗತ್ಯ ವಸ್ತು/ ಸೇವೆಗಳ ವಾಹನಗಳ ಸಂಚಾರ ಇರುತ್ತೆ
– ಕೊರೋನಾ ವಾರಿಯರ್ಸ್ ವಾಹನ ಸಂಚಾರ, ಓಡಾಟಕ್ಕೆ ಅವಕಾಶ ಇರುತ್ತೆ

ಏನು ಇರಲ್ಲ?
– ಮಾಲ್‍ಗಳು, ಸೂಪರ್ ಮಾರ್ಕೆಟ್‍ಗಳು ಬಂದ್
– ದೇವಸ್ಥಾನ, ಮಸೀದಿ, ಚರ್ಚ್ ಬಂದ್
– ಮದ್ಯದ ಅಂಗಡಿಗಳು, ಬಾರ್‍ಗಳು ಬಂದ್
– ಹೋಟೆಲ್ ಡೈನಿಂಗ್, ರೆಸ್ಟೋರೆಂಟ್ ಬಂದ್
– ಖಾಸಗಿ ವಾಹನ ಸಂಚಾರ, ಓಡಾಟ ಬಂದ್

ಜುಲೈ 5ನೇ ತಾರೀಖಿನಿಂದ ಮುಂದಿನ ಆದೇಶದವರೆಗೆ ಪ್ರತಿ ಭಾನುವಾರ ರಾಜ್ಯಾದ್ಯಂತ ಲಾಕ್‍ಡೌನ್ ಇರುವುದಾಗಿ ಸರ್ಕಾರ ತಿಳಿಸಿದೆ.

ಸಂಡೇ ಲಾಕ್‍ಡೌನ್- ಏನಿರುತ್ತೆ?
– ತುರ್ತು ಅವಶ್ಯಕ ವಸ್ತುಗಳು ದೊರಕುತ್ತವೆ
– ಸಿಲಿಂಡರ್ ಗ್ಯಾಸ್, ಹಾಲು, ದಿನಪತ್ರಿಕೆ ಎಂದಿನಂತೆ ಸಿಗುತ್ತೆ
– ತರಕಾರಿ/ಹಣ್ಣು/ದಿನಸಿ ಅಂಗಡಿಗಳು ತೆರೆದಿರುತ್ತೆ
– ಮೆಡಿಕಲ್ ಶಾಪ್, ಕ್ಲಿನಿಕ್‍ಗಳು, ಆಸ್ಪತ್ರೆಗಳು ಓಪನ್
– ಸರಕು ಸಾಗಣೆ ಎಂದಿನಂತೆ ಇರಲಿದೆ

ಸಂಡೇ ಲಾಕ್‍ಡೌನ್ – ಏನಿರಲ್ಲ?
– ತುರ್ತು ಅವಶ್ಯಕ ವಸ್ತುಗಳು ಹೊರತು ಉಳಿದ ಸೇವೆಗಳು ಬಂದ್
– ಸರ್ಕಾರಿ /ಖಾಸಗಿ ಬಸ್‍ಗಳ ಸಂಚಾರ ಸ್ಥಗಿತ
– ಆಟೋ, ಟ್ಯಾಕ್ಸಿ, ಖಾಸಗಿ ವಾಹನಗಳ ಸಂಚಾರ ನಿರ್ಬಂಧ
– ತುರ್ತು ಕೆಲಸ ಹೊರತು ಜನರ ಅನಗತ್ಯ ಓಡಾಟಕ್ಕೆ ಬ್ರೇಕ್
– ಸೆಲೂನ್ ಶಾಪ್, ಬ್ಯೂಟಿ ಪಾರ್ಲರ್‌ಗಳು ಬಂದ್
– ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ, ದುರಸ್ತಿ ಅಂಗಡಿಗಳು, ಶೋರೂಂಗಳು ಲಾಕ್
– ಮೆಕಾನಿಕ್ ಶಾಪ್‍ಗಳು, ಎಲ್ಲ ರೀತಿಯ ಅಂಗಡಿ ಮುಂಗಟ್ಟುಗಳು ಬಂದ್
– ಮಾಲ್‍ಗಳು, ಸೂಪರ್ ಮಾರ್ಕೆಟ್‍ಗಳು ಬಾಗಿಲು ತೆರೆಯಲ್ಲ
– ಕೈಗಾರಿಕೆಗಳು, ಖಾಸಗಿ ಕಂಪನಿಗಳೂ ನಿರ್ಬಂಧ
– ಮದ್ಯದ ಅಂಗಡಿಗಳು ಬಂದ್, ಪಾರ್ಸಲ್ ಕೂಡ ಸಿಗಲ್ಲ
– ಶನಿವಾರ ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 5ರವರೆಗೂ ಮದ್ಯ ಸಿಗಲ್ಲ


Spread the love

About Laxminews 24x7

Check Also

ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ 47ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಆಲಮಟ್ಟಿ ಸ್ವಾಮಿಗಳು

Spread the love ವೀರಶೈವ ಸಮಾಜ ಆಫ್ ನಾರ್ತ್ ಅಮೆರಿಕದ 47ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಆಲಮಟ್ಟಿ ಸ್ವಾಮಿಗಳು ಅಮೆರಿಕಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ