Breaking News
Home / ಜಿಲ್ಲೆ / ಬೆಂಗಳೂರು / ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ದಿನೇ ದಿನೇ ಸ್ಫೋಟ,ಶನಿವಾರ ಬರೋಬ್ಬರಿ 596 ಪ್ರಕರಣ

ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ದಿನೇ ದಿನೇ ಸ್ಫೋಟ,ಶನಿವಾರ ಬರೋಬ್ಬರಿ 596 ಪ್ರಕರಣ

Spread the love

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ದಿನೇ ದಿನೇ ಸ್ಫೋಟವಾಗಿದೆ. ಇಷ್ಟು ದಿನ 100 ರಿಂದ 150 ಹೊಸ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ ಶನಿವಾರ ಬರೋಬ್ಬರಿ 596 ಪ್ರಕರಣ ದಾಖಲಾಗಿವೆ. ಈ ಮೂಲಕ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 2,592ಕ್ಕೆ ಏರಿಕೆ ಆಗಿದೆ.

ಜೂನ್ 6 ರವರೆಗೂ ನಿಯಂತ್ರಣದಲ್ಲಿದ್ದ ಕೊರೊನಾ ಜೂನ್ 6 ನಂತರ ಬೆಂಗಳೂರಿನಲ್ಲಿ ಸ್ಫೋಟವಾಗುತ್ತಿದೆ. ವಯಸ್ಸಾದವರಲ್ಲಿ, ಉಸಿರಾಟದ ಸಮಸ್ಯೆ ಇದ್ದವರಲ್ಲಿ, ನಾನಾ ಕಾಯಿಲೆಗಳಿಂದ ಬಳಲುತ್ತಾ ಇದ್ದವರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಅಲ್ಲದೇ ಬೆಂಗಳೂರಿನಲ್ಲಿ 84 ಜನ ಮರಣ ಹೊಂದಿದ್ದಾರೆ. ಈ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಲು ಕಾರಣ ಏನು? ಸರ್ಕಾರ ಎಲ್ಲಿ ಎಡವಿತು ಎಂಬ ಆತಂಕ ಶುರುವಾಗಿದೆ. ಸರ್ಕಾರದ ನಿರ್ಲಕ್ಷ್ಯ ಮತ್ತು ಎಡವಟ್ಟು ನಿರ್ಧಾರಗಳೇ ಕೊರೊನಾ ಸ್ಫೋಟವಾಗಲು ಕಾರಣ ಎನ್ನಬಹುದಾಗಿದೆ.

1. ಕ್ವಾರಂಟೈನ್ ದಿನಕ್ಕೊಂದು ನಿಯಮ: ಆರಂಭದಲ್ಲಿ ಅನ್ಯರಾಜ್ಯದಿಂದ ಬಂದವರಿಗೆ ಹದಿನಾಲ್ಕು ದಿನದ ಸಾಂಸ್ಥಿಕ ಕ್ವಾರಂಟೈನ್ ಇತ್ತು. ಅದಾದ ಬಳಿಕ ಮಹಾರಾಷ್ಟ್ರಕ್ಕೆ ಮಾತ್ರ ಏಳು ದಿನದ ಸಾಂಸ್ಥಿಕ ಕ್ವಾರಂಟೈನ್ ಉಳಿದ ರಾಜ್ಯಕ್ಕೆ ಹದಿನಾಲ್ಕು ದಿನ ಹೋಂ ಕ್ವಾರಂಟೇನ್ ರೂಲ್ಸ್ ಜಾರಿ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೋಂ ಕ್ವಾರಂಟೈನ್‍ಗೆ ಹೋದವರು ಸರಿಯಾಗಿ ನಿಯಮ ಪಾಲನೆ ಮಾಡದೇ ಸೋಂಕು ಹೆಚ್ಚಾಗಿದೆ.

2. ರೋಗ ಲಕ್ಷಣ ಇರೋರಿಗಷ್ಟೇ ಟೆಸ್ಟಿಂಗ್: ಅನ್ಯರಾಜ್ಯದಿಂದ ಬರುವವರಿಗೆ ಆರಂಭದಲ್ಲಿ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತಿತ್ತು. ಆದರೆ ಪರಿಸ್ಥಿತಿ ಕೈಮೀರುವ ವೇಳೆ ರೋಗಲಕ್ಷಣ ಇರೋರಿಗಷ್ಟೇ ಟೆಸ್ಟ್ ಅಂತ ಘೋಷಣೆ ಮಾಡಲಾಗಿತ್ತು. ಇದರಿಂದ ಸದ್ದಿಲ್ಲದೇ ರೋಗ ಹರಡಿದೆ.

3. ವಾರ್ ರೂಂ ವಿಶ್ಲೇಷಣೆ ಕಡೆಗಣನೆ: ಕೋವಿಡ್ ವಾರ್ ರೂಂ, ಬೆಂಗಳೂರಿನಲ್ಲಿ ಹೈ ರಿಸ್ಕ್ ಕೇಸ್‍ಗಳು ಮತ್ತು ರೋಗಲಕ್ಷಣ ಇಲ್ಲದೇ ಇರೋರ ಬಗ್ಗೆ ಟೆಸ್ಟ್ ರಿಪೋರ್ಟ್ ಮಾಡಿ ಎಚ್ಚರಿಕೆ ನೀಡುತ್ತಿತ್ತು. ಆದರೆ ವಾರ್ ರೂಂ ವಿಶ್ಲೇಷಣೆಯನ್ನು ಕಡೆಗಣಿಸಿ ಕೇವಲ ರೋಗ ಲಕ್ಷಣ ಹೊಂದಿದವರಿಗೆ ಮಾತ್ರವೇ ಪರೀಕ್ಷೆ ನಡೆಸಲು ಆದೇಶಿಸಿದೆ. ಜೊತೆಗೆ ಪರೀಕ್ಷೆಯಲ್ಲೂ ನಿಯಮ ಸಡಿಲಿಸಿದೆ.

3. ದ್ವಿತೀಯ ಸಂಪರ್ಕ ವ್ಯಕ್ತಿಗಳಿಗೆ ಕ್ವಾರಂಟೈನ್, ಪರೀಕ್ಷೆ ಕೈ ಬಿಟ್ಟಿದ್ದು: ದ್ವಿತೀಯ ಸಂಪರ್ಕದ ವ್ಯಕ್ತಿಗಳನ್ನ ಹೋಟೆಲ್ ಕ್ವಾರಂಟೈನ್ ಮಾಡದೇ ಹೋಂ ಕ್ವಾರಂಟೈನ್ ಸೂಚಿಸಿದ್ದು ಮತ್ತು ದ್ವಿತೀಯ ಸಂಪರ್ಕ ವ್ಯಕ್ತಿಗಳಿಗೆ ಟೆಸ್ಟಿಂಗ್ ಕೈ ಬಿಟ್ಟಿದ್ದು. ಇವರು ನಗರದಲ್ಲೆಲ್ಲಾ ಓಡಾಡಿ ಸೋಂಕು ಹರಡಿದ್ದಾರೆ. ಕ್ವಾರಂಟೈನ್ ಅವಧಿ ಕಡಿಮೆ ಮಾಡುವುದರ ಜೊತೆಗೆ ಫಲಿತಾಂಶ ಬರುವುದಕ್ಕೆ ಮೊದಲೇ ಕ್ವಾರಂಟೈನ್ ನಲ್ಲಿ ಇರುವವರನ್ನು ಮನೆಗೆ ಕಳುಹಿಸಿದ್ದು.

5. ರ್‍ಯಾಂಡಮ್ ಟೆಸ್ಟ್ ನಿಲ್ಲಿಸಿದ್ದು: 12 ದಿನಕ್ಕೆ ಇದ್ದ ನಿಗಾ ಅವಧಿಯನ್ನು 10 ದಿನಗಳಿಗೆ ಇಳಿಸಿದೆ. ಅಲ್ಲದೇ ರೋಗ ಲಕ್ಷಣ ಇಲ್ಲದ ಸೋಂಂಕಿತರನ್ನು ಏಳೇ ದಿನಕ್ಕೆ ಮನೆಗೆ ಕಳುಹಿಸಲಾಗುತ್ತಿದೆ. ಆದರೆ ನೆಗೆಟಿವ್ ಇದ್ದವರು ಕೂಡ ರೋಗ ಹಬ್ಬುವ ಸಾಧ್ಯತೆ ಇದ್ದರೂ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಸೋಂಕು ಹೆಚ್ಚಿರುವ ಕಂಟೈನ್ಮೆಟ್ ವಲಯಗಳಲ್ಲಿ ರ್‍ಯಾಂಡಮ್ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ರೋಗ ಲಕ್ಷಣವೇ ಇಲ್ಲದ ಬಹಳಷ್ಟು ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಇದೀಗ ರ್‍ಯಾಂಡಮ್ ಪರೀಕ್ಷೆಯನ್ನು ತ್ಕಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ.

6. ಏರಿಯಾ ಸೀಲ್‍ಡೌನ್ ನಿಯಮಗಳು ಸರಿಯಾಗಿ ಪಾಲನೆ ಆಗದೇ ಇರುವುದರ ಜೊತೆಗೆ ತಜ್ಞರ ಸಲಹೆಗಳಿಗೆ ಹೆಚ್ಚು ಒತ್ತು ಕೊಡದೇ ಇರದ ಕಾರಣ ಸೋಂಕು ಹೆಚ್ಚಾಗಿದೆ.

7. ವಿಷಮಶೀತ ಜ್ವರ ಮತ್ತು ಉಸಿರಾಟದ ಪ್ರಕರಣಗಳು ಜಾಸ್ತಿ ಆಗುತ್ತಿದ್ದರೂ ಬೆಂಗಳೂರಿನಲ್ಲಿ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡದೇ ಇರುವುದು

8 ಸರ್ಕಾರದ ಎಡವಟ್ಟು ತೀರ್ಮಾನಗಳು:
* ಹೊರ ರಾಜ್ಯದಿಂದ ಬಂದತ್ತವರಿಗೆ ಕ್ವಾರಂಟೈನ್ ಮಾಡದೇ ಹೊಂ ಕ್ವಾರಂಟೈನ್ ಸೂಚಿಸಿದ್ದು
* ಸ್ಥಳೀಯ ಮಟ್ಟದಲ್ಲಿ ಟೆಸ್ಟಿಂಗ್ ನಿಲ್ಲಿಸಿದ್ದು
* ಆರಂಭದಲ್ಲಿ ಮಹಾನಗರಿ ಬಗ್ಗೆ ನಿರ್ಲಕ್ಷ್ಯ ಮಾಡಿದ್ದು
* ಕೊರೊನಾ ವಾರಿಯರ್ಸ್‍ಗೆ ಸರಿಯಾಗಿ ಟೆಸ್ಟ್ ಮಾಡದೇ ಇರೋದು
* ಐಎಲ್ ಐ, ಸ್ಯಾರಿ ಕೇಸ್ ಹೆಚ್ಚಳ
* ಟೆಸ್ಟಿಂಗ್ ನಲ್ಲಿ ನಿಧಾನ ಮಾಡಿದ್ದು, ಬೆಂಗಳೂರು ಟೆಸ್ಟಿಂಗ್ ಸ್ಟಾಪ್ ಮಾಡಿ ಹೊರ ರಾಜ್ಯದ ಟೆಸ್ಟಿಂಗ್ ಮಾಡಲು ಮುಂದಾಗಿದ್ದು
* ಸೆಕೆಂಡರಿ ಕಾಂಟ್ಯಾಕ್ಟ್ ಗಳನ್ನ ನಿರ್ಲಕ್ಷ್ಯ ಮಾಡಿದ್ದು
* ಆಸ್ಪತ್ರೆಯಲ್ಲಿ ನಿಗಾ ಅವಧಿ ಕಡಿಮೆ ಮಾಡಿದ್ದು

ಹೀಗೆ ಸರ್ಕಾರದ ಎಡವಟ್ಟು ಕಾರಣಗಳಿಂದ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಸದ್ಯಕ್ಕೆ ಸರ್ಕಾರ ಪ್ರತಿ ಭಾನುವಾರ ಕರ್ಫ್ಯೂವನ್ನು ಜಾರಿ ಮಾಡಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ