ಇಂದಿನಿಂದ ಮೂರು ದಿನಗಳ ಕಾಲ ಬಾಗಲಕೋಟೆ ಜಿಲ್ಲೆ ಮುಧೋಳದ ರನ್ನ ಬೆಳಗಲಿಯಲ್ಲಿ ರನ್ನ ವೈಭವ ಕಾರ್ಯಕ್ರಮ ನಡೆಯಲಿದ್ದು, ಅದ್ಧೂರಿ ಚಾಲನೆಗೆ ಕ್ಷಣಗಣನೆ ಆರಂಭಗೊಂಡಿದೆ.
ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ರನ್ನ ವೈಭವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಪೂರ್ವ ಸಿದ್ಧತೆಗಳನ್ನು ಭರದಿಂದ ಮಾಡಿಕೊಳ್ಳಲಾಗುತ್ತಿದೆ. ರನ್ನ ಬೆಳಗಲಿಯಲ್ಲಿ ರನ್ನ ವೈಭವ ಮೆರವಣಿಗೆಗೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ, ಸಚಿವ ತಿಮ್ಮಾಪೂರ ಅವರಿಗೆ ಸಚಿವ ಎಚ್ ಕೆ ಪಾಟೀಲ್, ಜಿಲ್ಲೆಯ ಶಾಸಕರು ಸಂಸದರ ಉಪಸ್ಥಿತಿಯಲ್ಲಿ ಚಾಲನೆ ದೊರೆಯಲಿದೆ. ಜಾನಪದ ವಾಹಿನಿ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾವೆ. ಬೆಳಗಲಿ ಗ್ರಾಮದ ಬಂದಲಕ್ಷ್ಮೀ ದೇವಾಲಯದಿಂದ ರನ್ನ ವೇದಿಕೆ ವರೆಗೂ ಮೆರವಣಿಗೆ ನಡೆಯಲಿದೆ.
ಸಂಜೆ ೬ ಗಂಟೆಗೆ ರನ್ನ ವೈಭವ ಕಾರ್ಯಕ್ರಮಕ್ಕೆ ಸಚಿವ ತಿಮ್ಮಾಪೂರ ಹಾಗೂ ಎಚ್ ಕೆ ಪಾಟೀಲ್, ಹೆಚ್.ಸಿ ಮಹಾದೇವಪ್ಪ, ಪ್ರಿಯಾಂಕ ಖರ್ಗೆ, ಶಿವಾನಂದ್ ಪಾಟೀಲ್,ಲಕ್ಷ್ಮಣ ಸವದಿ ಉಪಸ್ಥಿತಿಯಲ್ಲಿ ಚಾಲನೆ ಸಿಗಲಿದೆ.