ವಿಜಯಪುರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ 12 ನೇ ಘಟಿಕೋತ್ಸವದಲ್ಲಿ ಮಾಜಿ ಶಾಸಕರ ಸೋಮನಗೌಡ ಪಾಟೀಲ ಸಾಸನೂರ ಇಂದು ಭಾಗವಹಿಸಿದ್ದರು.
ಕಳೆದ 113 ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಶೈಕ್ಷಣಿಕ ವಲಯದಲ್ಲಿ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆ ನೀಡಿರುವ ಕೊಡುಗೆ ಅಪಾರವಾದದ್ದು. ವಚನ ಪಿತಾಮಹ ಶ್ರೀ ಫ.ಗು.ಹಳಕಟ್ಟಿ, ಪರಮಪೂಜ್ಯ ಭಂಟನಾಳ ಶ್ರೀಗಳು ಹಾಗೂ ಶ್ರೀ ಬಿ.ಎಂ.ಪಾಟೀಲ ಅವರ ಶ್ರಮಕ್ಕೆ ಇಂದು ವಿಜಯಪುರ ಭಾಗದಲ್ಲಿ ಶಿಕ್ಷಣ ಗುಣಮಟ್ಟ ಪ್ರಗತಿ ಕಂಡಿದೆ ಅಂದರೆ ಅತಿಶಯೋಕ್ತಿಯೆನ್ನಲ್ಲ.
ಈ ಸಂದರ್ಭದಲ್ಲಿ ಕೇಂದ್ರದ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಶಿ ವಿಶ್ವವಿದ್ಯಾಲಯಯ ಕುಲಾಧಿಪತಿಗಳು ಹಾಗೂ ರಾಜ್ಯ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಶ್ರೀ ಎಂ.ಬಿ.ಪಾಟೀಲ, ಸಮ ಕುಲಧಿಪತಿಗಳಾದ ಡಾ.ವೈ.ಎಮ್.ಜಯರಾಜ, ಕುಲಧಿಪತಿಗಳಾದ ಡಾ.ಆರ್.ಎಸ್.ಮುಧೋಳ ಸೇರಿದಂತೆ ವಿಶ್ವವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.