ತೆಲಂಗಾಣ: ದೆಹಲಿಯಲ್ಲಿ ಶ್ರದ್ಧಾ ವಾಕರ್ ಎಂಬ ಯುವತಿಯನ್ನು 35 ತುಂಡಗಳನ್ನಾಗಿ ಕತ್ತರಿಸಿದ್ದ ಆಕೆಯ ಪ್ರಿಯಕರ ಅಫ್ತಾಬ್ ಪೂನಾವಾಲಾ, ಪ್ರೇಯಸಿ ದೇಹದ ಭಾಗಗಳನ್ನು ಹಲವು ಪ್ರದೇಶಗಳಲ್ಲಿ ಎಸೆದಿದ್ದ ಘಟನೆ ಅಂದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅದೇ ಮಾದರಿಯಲ್ಲಿ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಎಂಬ ಯುವತಿಯ ದೇಹವನ್ನು 50 ತುಂಡು ಮಾಡಿ, ಫ್ರಿಡ್ಜ್ನಲ್ಲಿಟ್ಟು, ತಾನು ಆತ್ಮಹತ್ಯೆಗೆ ಶರಣಾದ ಪ್ರೇಮಿ ಕಥೆ ಕರುನಾಡ ಜನರನ್ನು ಆತಂಕಕ್ಕೆ ದೂಡಿತ್ತು.
ಸದ್ಯ ಇಲ್ಲೊಂದು ಘಟನೆ ಕೂಡ ಇದನ್ನೇ ಹೋಲುತ್ತಿದ್ದು, 16 ಲಕ್ಷ ರೂ. ಹಣಕ್ಕಾಗಿ ತಾನು ಪ್ರೀತಿಸಿದ ಹುಡುಗಿಯನ್ನೇ ಕತ್ತರಿಸಿ, ಮಣ್ಣಿನೊಳಗೆ ಹೂತ್ತಿಟ್ಟ ಘಟನೆ (Girlfriend Murder) ಇದೀಗ ತಡವಾಗಿ ಬೆಳಕಿಗೆ ಬಂದಿದೆ.ಇತ್ತೀಚೆಗಷ್ಟೇ ತೆಲಂಗಾಣ ಮೂಲದ ಪ್ರಿಯಕರನೊಬ್ಬ 16 ಲಕ್ಷ ರೂ. ಹಣದ ದಾಹಕ್ಕೆ ತಾನು ಇಷ್ಟಪಟ್ಟು ಪ್ರೀತಿಸಿದ ಹುಡುಗಿಯನ್ನೇ ಬರ್ಬರವಾಗಿ ಹತ್ಯೆಗೈದಿದ್ದಾನೆ. ಪ್ರಿಯಕರನ ಮೋಸದ ಜಾಲಕ್ಕೆ ತುತ್ತಾದ 30 ವರ್ಷದ ಸ್ವಾತಿ, 20 ತುಂಡಾಗಿ ಭೂಮಿ ಸೇರಿದ ಘಟನೆ ಸ್ಥಳೀಯ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ. ಈ ಘಟನೆ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಜೂಲುರುಪಾಡು ಮಂಡಲದ ಕೊಮ್ಮುಗುಡೆಂನಲ್ಲಿ ಸಂಭವಿಸಿದೆ.