ಒಂದು ಕಂಟೇನರ್ …ಎರಡು ಕಾಂಪಾರ್ಟ್ಮೆಂಟ್ … ಇದು ಖದೀಮರ ಕೈಚಳಕ !!!
ಗೋವಾದಿಂದ ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಮದ್ಯ ಜಪ್ತಿ.
ಬೆಳಗಾವಿಯಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿಗಳ ಭರ್ಜರಿ ಕಾರ್ಯಾಚರಣೆ.
ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಾಟ ಮಾಡ್ತಿದ್ದ ಮದ್ಯ ಜಪ್ತಿ.
ಪುಷ್ಪಾ ಸಿನೆಮಾ ಮಾದರಿಯಲ್ಲಿ ಕಂಟೇನರ್ ವಾಹನದಲ್ಲಿ ಸಾಗಿಸುತ್ತಿದ್ದ ಮದ್ಯ.
ಕಂಟೇನರ್ ವಾಹನದಲ್ಲಿ ಕಂಪಾರ್ಟ್ಮೆಂಟ್ ಮಾಡಿದ್ದ ಕಿರಾತಕರು.
ಡ್ರೈವರ್ ಹಿಂಬದಿಯಲ್ಲಿ ಕಂಪಾರ್ಟ್ಮೆಂಟ್ ಮಾಡಿ ಮದ್ಯದ ಬಾಕ್ಸ್ ಗಳನ್ನಿಟ್ಟು ಸಾಗಾಟ.
ಹೊರಗಡೆ ಭಾಗದಲ್ಲಿ ಡಸ್ಟ್ ಬಿನ್ ಬಾಕ್ಸ್ ಗಳನ್ನಿಟ್ಟು ಸಂಶಯ ಬರದಂತೆ ಸಾಗಾಟ.
ಕಣಕುಂಬಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಓಡಿ ಹೋದ ಚಾಲಕ.
ಈ ವೇಳೆ ಸಂಶಯ ಬಂದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ.
255 ಬಾಕ್ಸ್ ಗಳಲ್ಲಿ 720ಎಂಎಲ್ಎ ನ 3,060 ಬಾಟಲ್ ಗಳು ಪತ್ತೆ.
49 ಲಕ್ಷ ಮೌಲ್ಯದ ಮದ್ಯದ ಬಾಟಲ್, 35ಲಕ್ಷ ಮೌಲ್ಯದ ಕಂಟೇನರ್ ವಾಹನ ಜಪ್ತಿ.
ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದ ಅಬಕಾರಿ ಇಲಾಖೆಯ ಅಪರ ಆಯುಕ್ತ ಡಾ. ವೈ.ಮಂಜುನಾಥ ಹೇಳಿಕೆ.