Breaking News

ಒಂದು ದೇಶ, ಒಂದು ಚುನಾವಣೆ’ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ, ಮೋದಿ ಸಂಪುಟ ಅನುಮೋದನೆ

Spread the love

ನವದೆಹಲಿ: ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಿರುವ ಒನ್ ನೇಷನ್-ಒನ್ ಎಲೆಕ್ಷನ್ (One Nation One Election) ಮಸೂದೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ (NDA Govt) ಒಪ್ಪಿಗೆ ನೀಡಿದೆ.

‘ಒಂದು ರಾಷ್ಟ್ರ-ಒಂದು ಚುನಾವಣೆ’ ಪ್ರಸ್ತಾವನೆಗೆ ನರೇಂದ್ರ ಮೋದಿ ಸಂಪುಟ ಅನುಮೋದನೆ ನೀಡಿದ್ದು, ಈ ಬಗ್ಗೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು ಮಾರ್ಚ್‌ನಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆಯ ಸಾಧ್ಯತೆಗಳ ಕುರಿತು ತನ್ನ ವರದಿಯನ್ನು ಸಲ್ಲಿಸಿತ್ತು.

ಈ ವರದಿಗೆ ಮೋದಿ ಸಂಪುಟ ಅನುಮೋದನೆ ನೀಡಿದೆ.

ಈ ವರದಿಯಲ್ಲಿ ನೀಡಿರುವ ಸಲಹೆಗಳ ಪ್ರಕಾರ ಮೊದಲ ಹಂತವಾಗಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಬೇಕು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆದ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ನಡೆಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಇದರೊಂದಿಗೆ, ಎಲ್ಲಾ ಹಂತದ ಚುನಾವಣೆಗಳನ್ನು ಇಡೀ ದೇಶದಲ್ಲಿ ನಿಗದಿತ ಅವಧಿಯಲ್ಲಿ ನಡೆಸಬಹುದು. ಪ್ರಸ್ತುತ, ರಾಜ್ಯ ವಿಧಾನಸಭೆ ಮತ್ತು ಲೋಕಸಭೆಗೆ ಪ್ರತ್ಯೇಕವಾಗಿ ಚುನಾವಣೆಗಳು ನಡೆಯುತ್ತಿವೆ ಅನ್ನೋದು ತಿಳಿದಿರುವ ಸಂಗತಿ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ದಿಗ್ಗಜ ನಾಯಕರು ಒಂದು ದೇಶ ಒಂದು ಚುನಾವಣೆಯನ್ನು ಬಹಳ ಸಮಯದಿಂದ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಇದೀಗ ಕೊನೆಗೂ ಇದನ್ನು ಕಾರ್ಯರೂಪಕ್ಕೆ ತರಲು ಮೋದಿ ಸರ್ಕಾರ ಮುಂದಾಗಿದ್ದು, ಇದರ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಕಾಯ್ದೆ ಪ್ರಸ್ತಾವನೆಗೆ ಸಂಪುಟ ಅಸ್ತು ಎಂದಿದೆ.


Spread the love

About Laxminews 24x7

Check Also

ಇಬ್ಬರು ಯುವಕರ ಮೇಲೆ ಸುಳ್ಳು ಡ್ರಗ್ಸ್ ಕೇಸ್: ಬೆಂಗಳೂರಿನ 4 ಪೊಲೀಸ್ ಅಧಿಕಾರಿಗಳ ಅಮಾನತು!

Spread the love ಇಬ್ಬರ ಯುವಕರ ವಿರುದ್ಧ ಸುಳ್ಳು ಡ್ರಗ್ಸ್ ಪ್ರಕರಣ ದಾಖಲಿಸಿದ್ದ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯ ನಾಲ್ವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ