ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ನಾಗನೂರ ಕೆ.ಎಂ ಮತ್ತು ಕೆ.ಡಿ ಗ್ರಾಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೋಣಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಜನರು ಬೇಸತ್ತಿದ್ದಾರೆ.
ಗ್ರಾಮದ ಹೊರವಲಯದಲ್ಲಿ 300 ಮೀಟರ್ ಅಂತರದಲ್ಲಿ 10 ಕೋಳಿ ಫಾರ್ಮ್ ಇವೆ. ಇಲ್ಲಿಂದಲೇ ಗ್ರಾಮಕ್ಕೆ ನೋಣಗಳು ಬಂದಿವೆ.
ಗ್ರಾಮದ ಮನೆಗಳಲ್ಲಿ ಊಟ ಮಾಡುವಾಗಲೆಲ್ಲ ತಟ್ಟೆಯಲ್ಲಿ ನೋಣಗಳ ಬೀಳುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದರು.
ನಾಗನೂರ ಕೆ.ಎಂ.ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮೇ 29ರಿಂದ ಆರಂಭವಾಗಿದೆ. ನೂರಾರು ಮಕ್ಕಳು ಮಧ್ಯಾಹ್ನದ ಬಿಸಿಯೂಟ ಮಾಡುತ್ತಾರೆ. 100ಮೀಟರ್ ಅಂತರದಲ್ಲಿ ಸರ್ಕಾರಿ ಪೌಢ ಶಾಲೆ, ಕೆಎಂಎಫ್ ಹಾಲಿನ ಡೇರಿ ಇದ್ದು, ಸಂಘಗಳು, ಗ್ರಾಮ ಪಂಚಾಯ್ತಿ, ತಲಾಟಿ ಕಚೇರಿ ಇರುವುದರಿಂದ ನಿತ್ಯ ಸಾವಿರಾರು ಜನ ಸಂಚರಿಸುವುದರಿಂದ ಅವರ ಆರೊಗ್ಯದ ಮೇಲೆ ಗಂಭೀರ ಪರಿಣಾಮಗಳಾಗುವ ಸಾಧ್ಯತೆಗಳಿವೆ.
ವಾರದೊಳಗೆ ಕೋಳಿ ಫಾರ್ಮ್ ಅನ್ನು ಸ್ಥಗಿತಗೊಳಿಸದಿದ್ದರೆ ಫಾರ್ಮ ಮೇಲೆ ದಾಳಿ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.