ಹುಬ್ಬಳ್ಳಿ: ಇತ್ತೀಚಿಗೆ ಭೀಕರವಾಗಿ ಹತ್ಯೆಯಾದ ಯುವತಿ ಅಂಜಲಿ ಅಂಬಿಗೇರ ಅವರ ನಿವಾಸಕ್ಕೆ ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಇಂದು ಭೇಟಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಅಂಜಲಿ ಅವರ ಅಜ್ಜಿ ಗಂಗಮ್ಮ ಮತ್ತು ಸಹೋದರಿಯರಿಗೆ ಧೈರ್ಯ ಹೇಳಿದ ಲಾಡ್, ಸಂತೋಷ್ ಲಾಡ್ ಫೌಂಡೇಷನ್ ನಿಂದ ರೂ.
2 ಲಕ್ಷ ಚೆಕ್ ನೀಡಿದರು.
ಅಂಜಲಿ ಪ್ರಕರಣ: ಆರೋಪಿ ಗಿರೀಶ್ ವಿಶ್ವ ಸಾವಂತ್ ಬಂಧನ ಕುರಿತು ಸಹೋದರಿ ಯಶೋಧ ಹೇಳಿದ್ದು ಹೀಗೆ…
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬೆಳೆದ ಮಗಳನ್ನು ಕಳೆದುಕೊಂಡ ಅವರ ನೋವು ಕಂಡು ನಿಜಕ್ಕೂ ಬೇಸರವಾಯಿತು. ಅಂಜಲಿ ಕುಟುಂಬಕ್ಕೆ ವೈಯುಕ್ತಿಕವಾಗಿ 2 ಲಕ್ಷ ರೂಪಾಯಿಗಳ ಸಹಾಯ ಮಾಡಿದ್ದೇನೆ. ಅಂಜಲಿ ಸಾವಿಗೆ ನ್ಯಾಯ ಕೊಡಿಸುವುದು ನಮ್ಮ ಸರ್ಕಾರದ ಜವಾಬ್ದಾರಿ ಎಂದರು.