ಬೆಂಗಳೂರು, ಮೇ.08: ‘ನಮ್ಮ ನಿಮ್ಮ ವಾಯ್ಸ್ ಪ್ಲೇ ಮಾಡಿ ರಾಜ್ಯದ ಜನರಿಗೆ ಕೇಳಿಸೋಣ ಎಂದು ಡಿಸಿಎಂ ಡಿಕೆ ಶಿವಕುಮಾರ್(DK Shivakumar)ಗೆ ದೇವರಾಜೇಗೌಡ(Devarajegowda) ಅವರು ಚಾಲೆಂಜ್ ಹಾಕಿದ್ದಾರೆ.
ಇಂದು(ಮೇ.08) ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜೇಗೌಡ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಅಶ್ಲೀಲ ವಿಡಿಯೋ ಬಿಡುಗಡೆ ಬಳಿಕ ಹಲವು ರಾಜಕೀಯ ನಾಯಕರ ರಕ್ಷಣೆಯಾಗುತ್ತಿದೆ.
ನಾನು ಸರ್ಕಾರಕ್ಕೆ ಚಾಲೆಂಜ್ ಹಾಕುತ್ತೇನೆ, ಯಾವುದೇ ಬೆದರಿಕೆಗೆ ನಾನು ಹೆದರಲ್ಲ, ಪ್ರಕರಣದಿಂದ ಹಿಂದೆ ಸರಿಯಲ್ಲ ಎಂದಿದ್ದಾರೆ.ಇನ್ನು ಹಿಂದೆ ಕಾರ್ತಿಕ್ ಪತ್ನಿ ಮೇಲೆ ಹಲ್ಲೆ ಆದಾಗ ಮೂರು ತಿಂಗಳ ಹಿಂದೆ ಪತ್ರ ಬರೆದಿದ್ದೆ ಆದರೆ ನ್ಯಾಯ ಸಿಗಲಿಲ್ಲ.
ಈಗ ಅವರ ಪಕ್ಷದ ನಾಯಕರನ್ನೆ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರ ಪತ್ರವನ್ನ ಸಿಎಂ ಪುರಸ್ಕರಿಸುತ್ತಾರೆ. ಅಶ್ಲೀಲ ವಿಡಿಯೋ ಹಂಚಿಕೆ ಮಾಡಿರೋದು ಘೋರ ಅಪರಾಧ.
ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ನನ್ನ ಮೇಲೆ ದೂರು ಕೊಡುವುದನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.
Laxmi News 24×7