Breaking News

ನಿಪ್ಪಾಣಿ: 25 ಎನ್‍ಸಿಪಿ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

Spread the love

ನಿಪ್ಪಾಣಿ: ತಾಲ್ಲೂಕಿನ ಶೇಂಡೂರ ಗ್ರಾಮದ ಸುಮಾರು 25 ಎನ್‍ಸಿಪಿ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ತಾಲ್ಲೂಕಿನ ಭಿವಶಿ ಗ್ರಾಮದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಎಲ್ಲ ಕಾರ್ಯಕರ್ತರನ್ನು ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.

ಗ್ರಾಮದ ರಾಜೇಂದ್ರ ಲಾಡ, ಪ್ರವೀಣ ಲಾಡ ನೇತೃತ್ವದಲ್ಲಿ ವಿನಾಯಕ ಗಿರಿ, ತುಕಾರಾಮ ವಡೆಖರ, ಪಾಂಡುರಂಗ ಲಾಡ, ಗಜಾನನ ಕಾಂಬಳೆ, ರಾಜೇಂದ್ರ ದಳವಿ, ಅಣ್ಣಪ್ಪಾ ತೋಡಕರ, ಸಂದೀಪ ದೇಸಾಯಿ, ಮೊದಲಾದವರು ಸೇರಿದಂತೆ ಸುಮಾರು 25 ಕಾರ್ಯಕರ್ತರು ಎನ್‍ಸಿಪಿ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.

ನಿಪ್ಪಾಣಿ: 25 ಎನ್‍ಸಿಪಿ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ‘ಕಳೆದ 10 ವರ್ಷಗಳಲ್ಲಿ ಬಿಜೆಪಿ ಭಾರತದ ಚಿತ್ರಣವೇ ಬದಲಾಯಿಸಿದೆ. ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ತಮ್ಮ ಆಡಳಿತ ಅವಧಿಯಲ್ಲಿ ₹8,810 ಕೋಟಿಗೂ ಅಧಿಕ ಅಭಿವೃಧ್ಧಿ ಕಾಮಗಾರಿಗಳನ್ನು ತಮ್ಮ ಕ್ಷೇತ್ರದಲ್ಲಿ ಕೈಗೊಂಡಿದ್ದಾರೆ. ಇದು ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ’ ಎಂದರು.


Spread the love

About Laxminews 24x7

Check Also

ಜ.19 ರಂದು ’12ನೇ ಸತೀಶ್ ಶುಗರ್ಸ್ ಕ್ಲಾಸಿಕ್-2026′ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬೃಹತ್ ದೇಹದಾರ್ಢ್ಯ ಸ್ಪರ್ಧೆ; ಅಜೀತ್ ಸಿದ್ಧನ್ನವರ

Spread the love ಜ.19 ರಂದು ’12ನೇ ಸತೀಶ್ ಶುಗರ್ಸ್ ಕ್ಲಾಸಿಕ್-2026′ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬೃಹತ್ ದೇಹದಾರ್ಢ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ