ಇಂಡಿ (ವಿಜಯಪುರ): ಗುರುವಾರ ಸಂಜೆ ಬಿರುಗಾಳಿ ಸಹಿತ ಸಿಡಿಲು ಅಪ್ಪಳಿಸಿ ಕುರಿಗಾಯಿ ಬಾಲಕ ಬಲಿಯಾಗಿರುವ ದುರ್ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆದಿದೆ.
ಕುರಿ ಮೇಯಿಸುವಾಗ ಸಿಡಿಲಿಗೆ ಬಲಿಯಾದ ಬಾಲಕನನ್ನು ಬೀರಪ್ಪ ನಿಂಗಪ್ಪ ಅವರಾದಿ (15) ಎಂದು ಗುರುತಿಸಲಾಗಿದೆ.
ಇಂಡಿ ಪಟ್ಟಣದ ಹೊರವಲಯದಲ್ಲಿ ಬೀರಪುಪ ಕುರಿ ಮೇಯಿಸುವಾಗ ಜೋರಾಗಿ ಬಿರುಗಾಳಿ ತುಂತುರು ಮಳೆ ಸುರಿಯಲು ಆರಂಭಿಸಿದೆ. ಈ ವೇಳೆ ಮಳೆಯಿಂದ ರಕ್ಷಣೆ ಪಡೆಯಲು ಬೀರಪ್ಪ ಪಕ್ಕದಲ್ಲಿದ್ದ ಮರದ ಕೆಳಗೆ ಹೋಗಿದ್ದಾಗ ಸಿಡಿಲು ಅಪ್ಪಳಿಸಿದೆ.
ಸಿಡಿಲಿನ ಹೊಡೆತಕ್ಕೆ ಕುರಿಗಾಯಿ ಬಾಲಕ ಬೀರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕುಟುಂಬಕ್ಕೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ತಂದೆ-ತಾಯಿ ಸಂಬಂಧಿಕರು ಗೋಳಾಡುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಲೇ ಇಂಡಿ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
Laxmi News 24×7