Breaking News

ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ಕಣ್ಸನ್ನೆ ಬೆಡಗಿ-

Spread the love

ಚೆನ್ನೈ: ತನ್ನ ಕಣ್ಸನ್ನೆ ಮೂಲಕವೇ ಇಡೀ ದೇಶದಲ್ಲಿ ತಲ್ಲಣ ಸೃಷ್ಟಿಸಿ, ಕಣ್ಸನ್ನೆ ಚೆಲುವೆ ಎಂದೇ ಖ್ಯಾತಿ ಪಡೆದಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ದಿಢೀರನೇ ಇನ್ಸ್ಟಾಗ್ರಾಮ್ ಖಾತೆ ಡಿಲೀಟ್ ಮಾಡಿದ್ದರು. ಇದೀಗ ಪ್ರಿಯಾ ವಾರಿಯರ್ ಮತ್ತೆ ಇನ್ಸ್ಟಾಗ್ರಾಮ್ ಖಾತೆಯನ್ನು ಆಕ್ವೀವ್ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

ಪ್ರಿಯಾ ಕಣ್ಸನ್ನೆ ಮೂಲಕವೇ ಬಾಲಿವುಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಫರ್ ಗಿಟ್ಟಿಸಿಕೊಳ್ಳುವ ಮೂಲಕ ಬಹುಬೇಡಿಕೆ ನಟಿಯಾಗಿದ್ದರು. ಆದ್ರೆ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದು, ಇದರ ಭಾಗವಾಗಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದರು. ಇದನ್ನು ಕಂಡ ಅವರ ಅಭಿಮಾನಿಗಳಿಗೆ ತೀವ್ರ ಬೇಸರವಾಗಿತ್ತು. ಇದ್ದಕ್ಕಿದ್ದಂತೆ ಈ ನಿರ್ಧಾರವನ್ನೇಕೆ ಮಾಡಿದರು ಎಂದು ಯೋಚಿಸುತ್ತಿದ್ದರು. ಆದರೀಗ ಪ್ರಿಯಾ ವಾರಿಯರ್ ಮತ್ತೆ ಇನ್ಸ್ಟಾಗ್ರಾಮ್ ಖಾತೆಯನ್ನು ಆಕ್ವೀವ್ ಮಾಡಿದ್ದಾರೆ. ಅಲ್ಲದೆ ಇನ್ಸ್ಟಾಗ್ರಾಮ್ ಖಾತೆ ಡಿಲೀಟ್ ಮಾಡಿದ್ದಕ್ಕೆ ಕಾರಣ ಕೂಡ ನೀಡಿದ್ದಾರೆ.

 

“ತುಂಬಾ ಜನರು ಇನ್‍ಸ್ಟಾಗ್ರಾಮ್ ಖಾತೆ ಡಿಲೀಟ್ ಯಾಕೆ ಮಾಡಿದ್ದೀರಿ ಎಂದು ಕೇಳುತ್ತಿದ್ದಾರೆ. ನಾನು ಬ್ರೇಕ್ ತೆಗೆದುಕೊಳ್ಳುವ ಉದ್ದೇಶದಿಂದ ಇನ್ಸ್ಟಾಗ್ರಾಮ್‍ನಿಂದ ದೂರ ಉಳಿದಿದ್ದೆ. ಲಾಕ್‍ಡೌನ್ ಸಂದರ್ಭದಲ್ಲಿ ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಆದರೆ ನಾನು ಮನಸ್ಸಿನ ನೆಮ್ಮದಿಗಾಗಿ ಇನ್ಸ್ಟಾಗ್ರಾಮ್ ಖಾತೆ ಡಿಲೀಟ್ ಮಾಡುವ ನಿರ್ಧಾರ ಮಾಡಿದ್ದೆ. ನಿಜಕ್ಕೂ ನಾನು ಕಳೆದ ಎರಡು ವಾರದಿಂದ ತುಂಬಾ ನೆಮ್ಮದಿಯಾಗಿದ್ದೆ. ಕಲಾವಿದರು ಶಾಶ್ವತವಾಗಿ ಸಾಮಾಜಿಕ ಜಾಲತಾಣದಿಂದ ದೂರ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ನಾನು ಸಣ್ಣ ಬ್ರೇಕ್ ಪಡೆದಿದ್ದೆ, ಈಗ ಮತ್ತೆ ಮರಳಿದ್ದೀನಿ” ಎಂದು ತಿಳಿಸಿದರು.

ನಾನು ಈ ಎರಡು ವಾರಗಳು ತುಂಬಾ ಸಂತೋಷದಿಂದ ಕುಟುಂಬದವರ ಜೊತೆ ಎಂಜಾಯ್ ಮಾಡಿದ್ದೀನಿ. ಮನಸ್ಸಿನ ನೆಮ್ಮದಿಗಾಗಿ ಮಾತ್ರ ನಾನು ಇನ್ಸ್ಟಾಗ್ರಾಮ್‍ನಿಂದ ದೂರ ಉಳಿದಿದ್ದೆ. ಬೇರೆ ಕಾರಣವೇನು ಇಲ್ಲ. ಆದರೆ ಅನೇಕರು ಸಾಕಷ್ಟು ರೀತಿಯಲ್ಲಿ ಕಾಮೆಂಟ್, ಟ್ರೋಲ್‍ಗಳನ್ನು ಮಾಡಿದ್ದಾರೆ. ನನಗೆ ಈ ಟ್ರೋಲ್ ಹೊಸದೇನಲ್ಲ. ಆದರೆ ಕೆಲವು ಟ್ರೋಲ್‍ಗಳು ತುಂಬಾ ನೋವಾಗುತ್ತೆ. ಆದರೆ ಇದೆಲ್ಲ ನನ್ನನ್ನು ಮತ್ತಷ್ಟು ಗಟ್ಟಿಗೊಳಿಸುತ್ತೆ” ಎಂದು ಹೇಳಿದ್ದಾರೆ.


Spread the love

About Laxminews 24x7

Check Also

5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಪಿಸಿಸಿಎಫ್ ಆದೇಶಿಸಿದ್ದಾರೆ.

Spread the loveಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ