ಬೆಂಗಳೂರು, ಜೂ.3- ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ 10 ಹಾಸಿಗೆ ಸಾಮಥ್ರ್ಯದ ಐಸೊಲೇಷನ್ ವಾರ್ಡ್‍ಗಳನ್ನು ಕಡಿಮೆ ವೆಚ್ಚದಲ್ಲಿ ನಿರ್ಮಿಸಿ ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರ ಸುರಕ್ಷತೆಯ ಭಯವನ್ನು ಅಲೆಯನ್ಸ್ ವಿವಿ ನಿವಾರಿಸಿದೆ.
ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ ಅತಿ ಕಡಿಮೆ ಖರ್ಚಿನ ಅತ್ಯಾಧುನಿಕ ಐಸೊಲೇಷನ್ ವಾರ್ಡ್ ನಿರ್ಮಾಣದ ಸಂಶೋಧನೆ ಹಾಗೂ ಅಭಿವೃದ್ಧಿ ಕೆಲಸ ಬೆಂಗಳೂರಿನ ಅಲೆಯನ್ಸ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ
ಇಲ್ಲಿನ ಸಂಶೋಧಕರ ತಂಡ, ಸಾಗಿಸಲು ಪೂರಕವಾದ 10 ಹಸಿಗೆ ಸಾಮಥ್ರ್ಯದ ಐಸೊಲೇಷನ್ ವಾರ್ಡ್ (ಪೋರ್ಟೆಬಲ್ ಐಸೊಲೇ ಷನ್ ವಾರ್ಡ್) ಅಭಿವೃದ್ಧಿಪಡಿಸಿದ್ದು, ಇದರ ಖರ್ಚು ಕೇವಲ 7 ಲಕ್ಷ ರೂ. ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ, ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ ಸದಸ್ಯರಾದ ಡಾ.ಹರಿನಾಥ್ ಐರೆಡ್ಡಿ ನೇತೃತ್ವದ ಸಂಶೋಧನಾ ತಂಡ ಈ ಐಸೊಲೇಷನ್ ವಾರ್ಡ್‍ಅನ್ನು ಅಭಿವೃದ್ಧಿಪಡಿಸಿದೆ.
ಈ ಮಾದರಿಯ ವೈಶಿಷ್ಟ್ಯತೆ ಎಂದರೆ ಇದು ಕೊರೊನಾ ವೈರಸ್‍ಅನ್ನು ಅತಿ ವೇಗವಾಗಿ ಕೊಲ್ಲುವ ಸಾಮಥ್ರ್ಯ ಕೂಡ ಹೊಂದಿದೆ. ನೆಗೆಟಿವ್ ಪ್ರೆಷರ್ ಐಸೊಲೇಷನ್ ಚೇಂಬರ್ ಮೂಲಕ ರೋಗಿಗಳಿಗೆ ಐಸೊಲೇಷನ್, ಚೇಂಬರ್ ಒಳಗೆ ನೆಗೆಟಿವ್ ಪ್ರೆಷರ್‍ಅನ್ನು ಉಂಟುಮಾಡುವ ಮೂಲಕ ಸೋಂಕನ್ನು ಇನ್ನೊಬ್ಬರಿಗೆ ಹರಡುವ ಸಾಧ್ಯತೆಯನ್ನು ಕಡಿತಗೊಳಿಸುವುದು, ರೇಡಿಯೇಷನ್ ಎನರ್ಜಿ ಮೂಲಕ ವೈರಸ್‍ಅನ್ನು ನಿಷ್ಕ್ರಿಯಗೊಳಿಸುವುದು, ಅತ್ಯಾಧುನಿಕ ಎಚ್‍ಇಪಿಎ ಫಿಲ್ಟರ್ ಮೂಲಕ ಎಲ್ಲ ಸಕ್ರಿಯ ಸಾಂಕ್ರಾಮಿಕ ರೋಗಾಣುಗಳನ್ನು ನಿಷ್ಕ್ರಿಯಗೊಳಿಸುವುದು ಹಾಗೂ ಐಸೊಲೇಷನ್ ವಾರ್ಡ್‍ನಿಂದ ಶುದ್ಧೀಕರಣಗೊಂಡ ವಾಯು ಹೊರಗಿನ ವಾತಾವರಣ ಸೇರುವಂತಹ ವ್ಯವಸ್ಥೆ ಸೇರಿದೆ.
ಆಲ್ಪಾವಧಿಯಲ್ಲೇ ಚಿಕಿತ್ಸೆ: ಡಾ.ಹರಿನಾಥ್ ಐರೆಡ್ಡಿ ಅವರ ಪ್ರಕಾರ, ಯುಡಿಎನ್‍ಪಿಐಸಿ ಎರಡು ಕೋಣೆಗಳನ್ನು ಹೊಂದಿದ್ದು, ಒಂದು ಕೋಣೆಯಲ್ಲಿ ಕೋವಿಡ್-19 ರೋಗಿಗೆ ಹೊರಗಿನಿಂದ ಚಿಕಿತ್ಸೆ ನೀಡಲಾಗುತ್ತದೆ. ಇನ್ನೊಂದು ಕೋಣೆಯಲ್ಲಿ ವೈರಸ್‍ಅನ್ನು ಕೊಲ್ಲುವ ಪ್ರಕ್ರಿಯೆ ನಡೆಯುತ್ತದೆ. ಈ ಸಾಧನದ ವಿಶಿಷ್ಟತೆ ಎಂದರೆ ರೋಗಿ ಬಹುಬೇಗ ಚೇತರಿಸಿಕೊಳ್ಳುತ್ತಾನೆ ಹಾಗೂ ಅತಿ ವೇಗದಲ್ಲಿ ಸೋಂಕು ಶುದ್ಧೀಕರಿಸುವ ಪ್ರಕ್ರಿಯೆ ಕೂಡ ನಡೆಯುತ್ತದೆ.
ಪ್ರಸ್ತುತ ಐಸೊಲೇಷನ್ ವಾರ್ಡ್‍ಗಳನ್ನು ಸಾಂಪ್ರದಾಯಿಕ ವಿಧಾನದಲ್ಲಿ ಶುದ್ಧೀಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ಒಂದಿಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ ಎನ್ನಲಾಗಿದೆ.
ಸ್ಥಳೀಯವಾಗಿ ಖರೀದಿಸಿದ ವಸ್ತುಗಳು:
ಯುಡಿಎನ್‍ಪಿಐಸಿ ಯಂತ್ರ ಸ್ಥಳೀಯವಾಗಿ ಖರೀದಿಸಿದ ಯುವಿ ಬೆಳಕನ್ನು ಬಳಸುತ್ತದೆ. ಕೇವಲ ನಾಲ್ಕು ದಿನಗಳಲ್ಲಿ ಈ ಸಾಧನದ ವಾಣಿಜ್ಯ ಉತ್ಪಾದನೆ ಸಾಧ್ಯವಿದೆ ಎನ್ನುತ್ತಾರೆ ಡಾ.ಹರಿನಾಥ್ ಐರೆಡ್ಡಿ. ದೇಶದ ಯಾವುದೇ ಭಾಗದ ಆಸ್ಪತ್ರೆಯಲ್ಲೂ ಕೂಡ ಇದನ್ನು ಬಳಸಬಹುದು. ಈ ಸಂಶೋಧನಾ ತಂಡ ಒಂದು ತಿಂಗಳ ಸತತ ಸಂಶೋಧನೆ ಬಳಿಕ ಇದನ್ನು ಅಭಿವೃದ್ಧಿಪಡಿಸಿದ್ದು, ಸರ್ಕಾರದ ಮಟ್ಟದಲ್ಲಿ ದೃಢೀಕರಣ ಪಡೆದು, ಆಸ್ಪತ್ರೆಗಳಲ್ಲಿ ಇದನ್ನು ಅಳವಡಿಸಲು ಸಜ್ಜಾಗಿದೆ. ದೊಡ್ಡ ಮಟ್ಟದಲ್ಲಿ ಈ ಸಾಧನ ಉತ್ಪಾದನೆಗೆ ಸಂಶೋಧಕರು ಬೆಂಗಳೂರಿನ ಇಂಡಿಯನ್ ಹೈ ವಾಕ್ಯೂಮ್ ಪಂಪ್ಸ್ ಹಾಗೂ ಎಸಿಎಸ್ ಯುವಿ ಟೆಕ್ನಾಲಜೀಸ್ ಜತೆಗೆ ಕೈ ಜೋಡಿಸಿದ್ದಾರೆ.
ಡಾ.ಹರಿನಾಥ್ ಪ್ರಕಾರ, ಸದ್ಯದ ನಮ್ಮ ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಮೊದಲ ಹಂತದ ವೈದ್ಯಕೀಯ ಸಿಬ್ಬಂದಿಗಳಾದ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ದಾದಿಯರು ಸೋಂಕಿಗೊಳಗಾಗುವ ಭೀತಿ ಎದುರಿಸುತ್ತಿದ್ದು, ಇಂತಹವರ ಬೆಂಬಲದಿಂದ ಈ ಸಂಶೋಧನೆ ಸಾಧ್ಯವಾಗಿದೆ ಎಂದು ಡಾ.ಹರಿನಾಥ್ ಐರೆಡ್ಡಿ ತಿಳಿಸಿದ್ದಾರೆ.