Breaking News

ಈ ಅವಧಿಯ ಕೊನೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಳೆಗಾರರಿಗೆ ಗುಡ್​ ನ್ಯೂಸ್​

Spread the love

ನವದೆಹಲಿ, (ಫೆಬ್ರವರಿ 21): ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದೆ.

ಕಬ್ಬಿನ(sugarcane) ಖರೀದಿ ದರ ಹೆಚ್ಚಳಕ್ಕೆ ಕೇಂದ್ರ ಸಂಪುಟ ಸಭೆ ಅನುಮತಿ ನೀಡಿದೆ. ಪ್ರತಿ ಕ್ವಿಂಟಲ್‌ಗೆ 315 ರೂಪಾಯಿದಿಂದ 340 ರೂ.ಗೆ ಏರಿಕೆ ಮಾಡಿದೆ. ಇದರೊಂದಿಗೆ ಕಬ್ಬಿನ ಎಫ್​ಆರ್​ಪಿ ಪ್ರತಿ ಕ್ವಿಂಟಲ್​ಗೆ 25 ರೂ. ಹೆಚ್ಚಿಸಿದಂತಾಗಿದೆ. ಈ ಬಗ್ಗೆ ಕೇಂದ್ರ ಪ್ರಸಾರ ಮತ್ತು ಕ್ರೀಡಾ ಖಾತೆ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದಾರೆ.

ಸಂಪುಟ ಸಭೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಕಬ್ಬಿನ ದರ ಪ್ರತಿ ಕ್ವಿಂಟಾಲ್​ಗೆ 340 ರೂಪಾಯಿಗೆ ಹೆಚ್ಚಿಳ ಮಾಡಲಾಗಿದೆ. ಇದು ಕಬ್ಬಿನ ಐತಿಹಾಸಿಕ ಬೆಲೆಯಾಗಿದ್ದು, ಇದು ಪ್ರಸಕ್ತ 2023-24 ರ ಹಂಗಾಮಿನ ಕಬ್ಬಿನ ಎಫ್‌ಆರ್‌ಪಿಗಿಂತ ಸುಮಾರು ಶೇ.8ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಸಭೆಯಲ್ಲಿ FRP ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಬ್ಬನ್ನು ಮುಖ್ಯವಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. 2024-25ನೇ ಸಾಲಿಗೆ ಕಬ್ಬಿನ ಎಫ್‌ಆರ್ ಪಿಯನ್ನು ಪ್ರತಿ ಕ್ವಿಂಟಾಲ್ಗೆ 340 ರೂ.ಗಳಂತೆ ಶೇ.10.25 ರಷ್ಟು ಸಕ್ಕರೆ ಚೇತರಿಕೆ ದರದಲ್ಲಿ ಸಿಸಿಇಎ ಅನುಮೋದಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು.

ಪರಿಷ್ಕೃತ ಎಫ್‌ಆರ್ ಪಿ ಅಕ್ಟೋಬರ್ 1, 2024 ರಿಂದ ಜಾರಿಗೆ ಬರಲಿದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದ ಮೇಲೆ ಎಫ್‌ಆರ್ ಪಿಯನ್ನು ನಿರ್ಧರಿಸಲಾಗಿದೆ.

ಮುಂದಿನ ಕಬ್ಬು ಹಂಗಾಮಿನ ವೇಳೆ ಅಂದರೆ 2024ರ ಅಕ್ಟೋಬರ್ 1ರಿಂದ 2025 ಸೆಪ್ಟಂಬರ್ 30ರ ಅವಧಿಗೆ ಕಬ್ಬು ಖರೀದಿ ದರವನ್ನು ಕ್ವಿಂಟಲ್‌ಗೆ 315 ರು.ನಿಂದ 340 ರು.ಗೆ ಹೆಚ್ಚಿಸಲಾಗಿದೆ. ಅಂದರೆ ಪ್ರತಿ ಕ್ವಿಂಟಲ್‌ಗೆ 25 ರು. ಹೆಚ್ಚಳ ಮಾಡಲಾಗಿದೆ. ರೈತರಿಗೆ ನ್ಯಾಯಸಮ್ಮತ ಮತ್ತು ಸಮಂಜಸ ಬೆಲೆ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಇದು ನರೇಂದ್ರ ಮೋದಿ ಸರ್ಕಾರ ಒಂದೇ ಬಾರಿಗೆ ಕಬ್ಬು ಖರೀದಿ ದರದಲ್ಲಿ ಮಾಡಿದ ಗರಿಷ್ಠ ಏರಿಕೆ ಪ್ರಮಾಣವಾಗಿದೆ. ಈ ಏರಿಕೆಯ ಲಾಭ ಹೆಚ್ಚಿನ ಕಬ್ಬು ಬೆಳೆಯುವ ಕರ್ನಾಟಕ, ಮಹಾರಾಷ್ಟ್ರರ, ಉತ್ತರಪ್ರದೇಶದ ರಾಜ್ಯಗಳ ರೈತರಿಗೆ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ (ಸಿಸಿಇಎ) ಈ ನಿರ್ಧಾರ ಕೈಗೊಳ್ಳಲಾಯಿತು.


Spread the love

About Laxminews 24x7

Check Also

ಏರ್​ಗನ್​ನಿಂದ ಹಾರಿದ ಗುಂಡು: ಶಿರಸಿಯಲ್ಲಿ 9 ವರ್ಷದ ಬಾಲಕ ಸಾವು

Spread the love ಶಿರಸಿ(ಉತ್ತರಕನ್ನಡ): ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕನ ಕೈಯ್ಯಿಂದ ಏರ್​ಗನ್​ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಹೃದಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ