ಹಾಸನ: ಜನರು ಕೊರೊನಾ ಭೀತಿಯಲ್ಲಿರುವಾಗ ಹಾಸನದಲ್ಲಿ ಭಯ ಹುಟ್ಟಿಸುವ ಘಟನೆಯೊಂದು ನಡೆದಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೋಟೆಲ್ ಮಾಲೀಕನ ಮಗನೊಬ್ಬ ಗ್ರಾಹಕರಿಗೆ ನೀಡಲು ಇಟ್ಟಿರುವ ಆಹಾರವನ್ನು ಎಂಜಲು ಮಾಡುತ್ತಿದ್ದಾನೆ ಎಂಬ ಅಡಿಬರಹದ ವಿಡಿಯೋ ಹಾಸನದಲ್ಲಿ ವೈರಲ್ ಆಗಿದೆ. ಓರ್ವ ವ್ಯಕ್ತಿ ಹೋಟೆಲ್ ಒಳಗೆ ನಿಂತುಕೊಂಡು ಗ್ರಾಹಕರಿಗೆ ನೀಡಲು ಪಾತ್ರೆಯೊಳಗೆ ಸಂಗ್ರಹಿಸಿಟ್ಟಿರುವ ಆಹಾರವನ್ನು ಸ್ಟಿಕ್‍ನಿಂದ ಪದೇ ಪದೆ ತಿನ್ನುತ್ತಿದ್ದಾನೆ. ಇದನ್ನು ಅಲ್ಲೇ ಇದ್ದವರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾಸನದ ದೊಡ್ಡ ಹೋಟೆಲ್‍ನಲ್ಲಿಯೇ ಈ ರೀತಿ ನಡೆದಿದ್ದು, ಹೋಟೆಲ್‍ಗಳಲ್ಲಿ ಈ ರೀತಿಯೂ ಮಾಡಲಾಗುತ್ತಿದೆ ಎಂದೂ ಬರೆಯಲಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಂಡಿರುವ ಹಾಸನ ಪೊಲೀಸರು, ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗುತ್ತಿರುವ ಹೋಟೆಲ್ ಮಾಲೀಕನಿಂದ ಮಾಹಿತಿ ಪಡೆಯುತ್ತಿದ್ದಾರೆ. ಈ ವಿಡಿಯೋ ನಿಮ್ಮ ಹೋಟೆಲ್‍ಗೆ ಸಂಬಂಧಿಸಿದ್ದಾ, ವಿಡಿಯೋದಲ್ಲಿ ಆಹಾರ ಎಂಜಲು ಮಾಡುತ್ತಿರುವ ವ್ಯಕ್ತಿ ಯಾರು, ಈ ವಿಡಿಯೋ ಯಾವಾಗ ಮಾಡಿದ್ದು ನಿಮಗೆ ಗೊತ್ತಾ ಎಂಬೆಲ್ಲ ಮಾಹಿತಿ ಕಲೆಹಾಕಲಾಗುತ್ತಿದೆ.
Laxmi News 24×7