ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದಲ್ಲಿ ಮತ್ತೊಂದು ಸಜೀವ ನಾಡಬಾಂಬ್​ ಪತ್ತೆ

Spread the love

ಕಾರವಾರ (ಉತ್ತರಕನ್ನಡ): ನಾಡಿನ ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದ ಹಂದಿಯೊಂದನ್ನು ನಾಡಬಾಂಬ್ ಇಟ್ಟು ಹತ್ಯೆಗೈದಿರುವ ಘಟನೆ ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದಲ್ಲಿ ನಡೆದಿತ್ತು.

ಇದೀಗ ಅದೇ ಪ್ರದೇಶದಲ್ಲಿ ಪೊಲೀಸರು ಸಜೀವ ಬಾಂಬ್​ ಪತ್ತೆ ಮಾಡಿದ್ದು, ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸಿದೆ.

ತಾಲೂಕಿನ ಚೆಂಡಿಯಾದ ಸ್ಮಶಾನದ ಬಳಿ ಆಗಸ್ಟ್​ 4 ರಂದು ನಾಡಬಾಂಬ್ ಸ್ಫೋಟವಾಗಿ ಹಂದಿಯೊಂದು ಸಾವನ್ನಪ್ಪಿತ್ತು. ಈ ಹಂದಿ ಗ್ರಾಮಸ್ಥರೊಂದಿಗೆ ಒಡನಾಟ ಹೊಂದಿತ್ತು. ಅದರ ಸಾವಿನಿಂದ ಇಲ್ಲಿನ ಜನರು ತೀವ್ರ ದುಃಖಿತರಾಗಿದ್ದರು. ಅಲ್ಲದೆ, ತಕ್ಷಣ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಈ ಕುರಿತು ಮಾಹಿತಿ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸೀಫ್ರನ್ ಥಾಮಸ್ ಫರ್ನಾಂಡಿಸ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದರು.

ಇದರ ಬೆನ್ನಲ್ಲೇ ನಾಡಬಾಂಬ್​ ಸ್ಫೋಟವಾದ ಪ್ರದೇಶದಲ್ಲಿಯೇ ಮತ್ತೊಂದು ನಾಡಬಾಂಬ್​ ಪತ್ತೆಯಾಗಿದೆ. ಸ್ಥಳದಲ್ಲಿ ಮಂಗಳೂರು ಪೊಲೀಸರು ಬ್ಯಾರಿಕೇಡ್​ ಹಾಕಿ ಬಿಗಿ ಬಂದೋಬಸ್ತ್​ ಕೈಗೊಂಡಿದ್ದಾರೆ. ಇದೀಗ ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಜನರೊಂದಿಗೆ ಒಡನಾಡ ಹೊಂದಿದ್ದ ಹಂದಿ: ಕಳೆದ ಒಂದು ವರ್ಷದಿಂದ ಕಾಡು ಹಂದಿಗಳ ಗುಂಪು ಜನ ವಸತಿ ಪ್ರದೇಶಗಳಿಗೆ ಬರುವುದನ್ನು ಚೆಂಡಿಯಾ ಗ್ರಾಮದ ಜನರು ಗಮನಿಸಿದ್ದರು. ಬಳಿಕ ಅದರಲ್ಲಿ ಒಂದು ಹಂದಿ ಜನರ ಸಂಪರ್ಕದಲ್ಲಿಯೇ ಇರುವುದರಿಂದ ಹಂದಿಗೆ ಹಣ್ಣು, ತರಕಾರಿ ಸೇರಿದಂತೆ ಆಹಾರ ನೀಡುತ್ತಿದ್ದರು. ಕಾಡು ಹಂದಿಯೂ ಜನರಿಗೆ ತೊಂದರೆ ಕೊಡದೇ ರಾತ್ರಿ ವೇಳೆ ಬಂದು ಆಹಾರ ತಿಂದು ಹೋಗುತ್ತಿತ್ತು. ಒಮ್ಮೊಮ್ಮೆ ಹಗಲಿನ ವೇಳೆಯಲ್ಲಿಯೂ ಬರುತ್ತಿತ್ತು. ಅದರಿಂದ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಉರುಳಿಗೆ ಬಿದ್ದ ಚಿರತೆ: ಕಾಡುಪ್ರಾಣಿಗಳನ್ನು ಬೇಟೆಯಾಡಲು ಜನರು ನಾಡಬಾಂಬ್​ ಇಡುತ್ತಾರೆ. ಇತ್ತೀಚೆಗೆ ಮೈಸೂರಿನ ಎಚ್.ಡಿ.ಕೋಟೆ ತಾಲ್ಲೂಕಿನ ಹೆಗ್ಗಡಾಪುರ ಗ್ರಾಮದ ದೇವನಾಯಕ ಎಂಬವರು ಕಾಡುಪ್ರಾಣಿಗಳ ಬೇಟೆಗಾಗಿ ಜಮೀನಿನಲ್ಲಿ ಉರುಳು ಹಾಕಿದ್ದರು. ಈ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿತ್ತು. ಬಳಿಕ ಅರಣ್ಯಾಧಿಕಾರಿಗಳಾದ ಡಿಸಿಎಫ್ ಬಸವರಾಜು, ಎಸಿಎಫ್ ಲಕ್ಷ್ಮಿಕಾಂತ್, ಮೇಟಿಕುಪ್ಪೆ ಅರಣ್ಯಾಧಿಕಾರಿ ಹರ್ಷಿತ್ ಹಾಗೂ ಇತರೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಚಿರತೆಯನ್ನು ಕಳೇಬರವನ್ನು ಪಶುವೈದ್ಯ ಮುಜೀದ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಜಮೀನು ಮಾಲೀಕ ದೇವನಾಯಕ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.


Spread the love

About Laxminews 24x7

Check Also

ದೀಪಾವಳಿ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಾಧ್ಯತೆ

Spread the love ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದೀಪಾವಳಿ ಹಬ್ಬದ ಬಳಿಕ ಮತ್ತು ನವೆಂಬರ್‌ 26ರ ಮುನ್ನ ನಡೆಯುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ