Breaking News

ಆನ್​​ಲೈನ್​ ಮೂಲಕ ಎಂಎಲ್​ಸಿ ಹೆಚ್​ ವಿಶ್ವನಾಥ್ ಪುತ್ರನಿಗೆ 1 ಲಕ್ಷಕ್ಕೂ ಅಧಿಕ ಹಣ ವಂಚನೆ

Spread the love

ಮೈಸೂರು, ಆ.5: ಆನ್​ಲೈನ್​ ವಂಚನೆ(Online Fraud) ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಎಷ್ಟೇ ವಂಚನೆ ಪ್ರಕರಣಗಳು ಬೆಳಕಿಗೆ ಬಂದರೂ, ಜನಸಾಮಾನ್ಯರು ಮಾತ್ರ ಇಂತಹವರ ಬಲೆಗೆ ಬೀಳುವುದು ಮಾತ್ರ ತಪ್ಪುತ್ತಿಲ್ಲ. ಮುಖ್ಯವಾಗಿ ಶಿಕ್ಷಣವಂತರೇ ಇಂತಹವರ ಗಾಳಕ್ಕೆ ಬಿದ್ದು, ಹಣ ಕಳೆದುಕೊಳ್ಳುತ್ತಿದ್ದಾರೆ. ಅದರಂತೆ ಇದೀಗ ಆನ್‌ಲೈನ್ ವಂಚನೆಯ ಜಾಲಕ್ಕೆ ಓರ್ವ ಎಂಎಲ್‌ಸಿ ಎಚ್ ವಿಶ್ವನಾಥ್ ಪುತ್ರ ಅಮಿತ್ ಬಿದ್ದು, ಬರೊಬ್ಬರಿ 1.99 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಬಳಿಕ ಘಟನೆ ಹಿನ್ನಲೆ ಕೂಡಲೇ ಸೈಬರ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ.

ಘಟನೆ ವಿವರ

ಹೌದು, ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಅವರು ಹಣ ಡ್ರಾ ಮಾಡಲು ಎಟಿಎಂಗೆ ಹೋಗಿದ್ದಾರೆ. ಈ ವೇಳೆ ಹಣ ಬಾರದ ಹಿನ್ನೆಲೆ ಗೂಗಲ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಿ ಕರೆ ಮಾಡಿದ್ದಾರೆ. ನಂತರ ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, ಬ್ಯಾಂಕ್ ಖಾತೆ ಬಗ್ಗೆ ವಿವರ ಪಡೆದು, ಅವರ ಖಾತೆಯಿಂದ 1.99 ಲಕ್ಷ ಹಣವನ್ನ ಲಪಟಾಯಿಸಿದ್ದಾನೆ.

 

ಜೆಸಿಬಿ ಬಳಸಿ ಎಟಿಎಂ ಕಳ್ಳತನಕ್ಕೆ ಯತ್ನ

ಇನ್ನು ಇತ್ತೀಚೆಗಷ್ಟೇ ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಇಡ್ಯಾ ಎಂಬಲ್ಲಿ‌ ಗುರುವಾರ ತಡರಾತ್ರಿ ಜೆಸಿಬಿ ಬಳಸಿ ಎಟಿಎಂ ಕಳವು ಮಾಡಲು ದುಷ್ಕರ್ಮಿಗಳು ವಿಫಲ ಯತ್ನ ನಡೆಸಿದ ಘಟನೆ ನಡೆದಿತ್ತು. ಕಳ್ಳತನ ಮಾಡಿದ ಜೆಸಿಬಿಯನ್ನ ಬಳಸಿ ಎಟಿಎಂ ಹೊತ್ತೊಯ್ಯಲು ದುಷ್ಕರ್ಮಿಗಳು ಯತ್ನಿಸಿದ್ದರು. ಎಟಿಎಂ ಎತ್ತುವ ಸಂದರ್ಭ ಬ್ಯಾಂಕ್​​ನ ಸೆಂಟ್ರಲ್‌ ಸರ್ವಲೆನ್ಸ್ ಸಿಸ್ಟಂಗೆ ಮಾಹಿತಿ ರವಾನೆಯಾಗಿತ್ತು. ಕೂಡಲೇ ಸರ್ವಲೆನ್ಸ್ ಸಿಸ್ಟಂ ಸಿಬ್ಬಂದಿ ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಪೊಲೀಸರನ್ನು ಕಂಡ ಕೂಡಲೇ ದುಷ್ಕರ್ಮಿಗಳು ಜೆಸಿಬಿ ಬಿಟ್ಟು ಪರಾರಿಯಾಗಿದ್ದರು


Spread the love

About Laxminews 24x7

Check Also

ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ: ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸಲು ಮತ್ತೆ ಅವಕಾಶ: ಹಗಲಿನಲ್ಲೇ ಸಿಗಲಿದೆ 7 ಗಂಟೆ ಉಚಿತ ವಿದ್ಯುತ್! ಅರ್ಜಿ ಸಲ್ಲಿಕೆ ಹೇಗೆ?

Spread the love ಪಂಪ್‌ಸೆಟ್ ಅಕ್ರಮ ಸಕ್ರಮ ಯೋಜನೆ: ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸಲು ಮತ್ತೆ ಅವಕಾಶ: ಹಗಲಿನಲ್ಲೇ ಸಿಗಲಿದೆ 7 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ