ಉಡುಪಿ: ನಗರಸಭೆಯ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಸರಕಾರಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಗರಸಭೆ ಕಚೇರಿ ಹೊರಗಡೆ ತೆರಿಗೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬನ್ನಂಜೆ ನಿವಾಸಿ ಶಾಲಿನಿ ಹಾಗೂ ಕುಕ್ಕಿಕಟ್ಟೆಯ ಗಣೇಶ್ ಎಂದು ಗುರುತಿಸಲಾಗಿದೆ. ಆನಂದ ಸುವರ್ಣ ಎಂಬವರು ಕಲ್ಮಾಡಿಯಲ್ಲಿರುವ ತನ್ನ ಕಟ್ಟಡಕ್ಕೆ ಸಂಬಂಧಪಟ್ಟಂತೆ 2025ರ ಅ.16ರಂದು 12 ವರ್ಷಗಳ ಆಸ್ತಿ ತೆರಿಗೆ ಮೊತ್ತ ಒಟ್ಟು 34,730 ರೂ. ಹಣವನ್ನು …
Read More »Daily Archives: ಫೆಬ್ರವರಿ 23, 2026
ಪ್ರಧಾನಿ ಮನೆ ಸುತ್ತಲಿನ 717 ಮನೆ ತೆರವಿಗೆ ಆದೇಶ
ನವದೆಹಲಿ: ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದ ಸುತ್ತ ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗಿದ್ದ 3 ಕೊಳಗೇರಿಗಳ ನಿವಾಸಿಗಳಿಗೆ ಮಾ.6ರ ಒಳಗಾಗಿ ಜಾಗ ಖಾಲಿ ಮಾಡುವಂತೆ ನೋಟೀಸ್ ನೀಡಲಾಗಿದೆ. ಅವರಿಗೆ 45 ಕಿ.ಮೀ. ದೂರದಲ್ಲಿರುವ ಸಾವ್ದಾ ಘೇವ್ಡಾದಲ್ಲಿ ಪುನರ್ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಜಾಗ ಖಾಲಿ ಮಾಡುವಂತೆ ನೋಟೀಸ್ ಭಾಯಿ ರಾಮ್ ಕ್ಯಾಂಪ್, ಮಸ್ಜಿದ್ ಕ್ಯಾಂಪ್ ಮತ್ತು ಡಿಐಡಿ ಕ್ಯಾಂಪ್‌ಗಳು ಪ್ರಧಾನಿ ನಿವಾಸದಿಂದ ಕೆಲವೇ ಕಿ.ಮೀ. ದೂರದಲ್ಲಿವೆ. ಇವು ಸರ್ಕಾರಿ ಭೂಮಿಯಲ್ಲಿದ್ದುದರಿಂದ ಜಾಗ …
Read More »ಬೆಸ್ಕಾಂ |ಮೃತರ ಕುಟುಂಬದವರಿಗೆ ತಲಾ ₹1 ಕೋಟಿ ಪರಿಹಾರ: ಚೆಕ್ ವಿತರಿಸಿದ ಜಾರ್ಜ್
ಬೆಂಗಳೂರು: ಕರ್ತವ್ಯದ ವೇಳೆ ಮೃತಪಟ್ಟಿರುವ ಬೆಸ್ಕಾಂನ ಮೂವರು ಸಿಬ್ಬಂದಿಯ ಕುಟುಂಬವರಿಗೆ ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ತಲಾ ₹1 ಕೋಟಿ ಪರಿಹಾರದ ಚೆಕ್ ಅನ್ನು ಬುಧವಾರ ವಿತರಿಸಿದರು. ವಿದ್ಯುತ್ ಆಘಾತದಲ್ಲಿ ಮೃತಪಟ್ಟ ಗೌರಿಬಿದನೂರು ಉಪ ವಿಭಾಗದ ಸಹಾಯಕ ಪವರ್‌ಮ್ಯಾನ್ ಉದಯ ಕುಮಾರ್ ಅವರ ಪತ್ನಿ ವಿ. ಕೀರ್ತನಾ, ರಸ್ತೆ ಅಪಘಾತಗಳಲ್ಲಿ ಮೃತರಾದ ಗುಡಿಬಂಡೆ ಉಪ ವಿಭಾಗದ ಪವರ್‌ಮ್ಯಾನ್ ಬಿ.ವಿ. ಮಂಜಪ್ಪ ಅವರ ಪತ್ನಿ ದಾಕ್ಷಾಯಿಣಿ ಹಾಗೂ ಚಿಂತಾಮಣಿ ಉಪ …
Read More »ಜೂನ್ ಒಳಗೆ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ
ಕಾರವಾರ: ಜೂನ್ ಒಳಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಂಕೋಲಾ ತಾಲೂಕಿನ ಮಂಜುಗಣಿಯಲ್ಲಿ ಭಾನುವಾರ ಗಂಗಾವಳಿ -ಮಂಜುಗಣಿ ಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು. ಗೋಕರ್ಣ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿಸುವಂತೆ ಬೇಡಿಕೆ ಇದೆ. ಆದರೆ, ಚುನಾವಣೆ ಸಮೀಪಿಸಿದ್ದು, ಜನಗಣತಿ ಕೂಡ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಹೊಸದಾಗಿ ಪಟ್ಟಣ ಪಂಚಾಯಿತಿ ರಚನೆ ಸಾಧ್ಯವಿಲ್ಲ. ಚುನಾವಣೆ ಮುಗಿದ ನಂತರ ಗೋಕರ್ಣ ಪಟ್ಟಣ ಪಂಚಾಯಿತಿ ರಚನೆ …
Read More »
Laxmi News 24×7