Breaking News

Daily Archives: ಮಾರ್ಚ್ 18, 2025

ಪೋಕ್ಸೋ ಕೇಸ್ : ಜಾಮೀನು ಷರತ್ತು ಸಡಿಲಿಕೆ, ಆದೇಶ;B.S.Y.

ಬೆಂಗಳೂರು : ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ತೆಗೆದುಕೊಂಡಿದ್ದ ಕಾಗ್ನಿಜೆನ್ಸ್ ಅನ್ನು ರದ್ದುಪಡಿಸಿ, ಮತ್ತೆ ಹೊಸದಾಗಿ ಪರಿಗಣಿಸುವಂತೆ ಸೂಚನೆ ನೀಡಿರುವ ಆದೇಶದ ಕುರಿತು ಸ್ಪಷ್ಟನೆ ಮತ್ತು ಜಾಮೀನಿಗೆ ವಿಧಿಸಿರುವ ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೈಕೋರ್ಟ್​ಗೆ ಎರಡು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಎರಡೂ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, …

Read More »

ಬೆಳಗಾವಿ ಮಾರುಕಟ್ಟೆಗೆ ವಿವಿಧ ತಳಿಗಳ ಮಾವಿನ ಹಣ್ಣುಗಳು

ಬೆಳಗಾವಿ: ಮಾವಿನ ಹಣ್ಣಿನ ಸೀಸನ್​ ಶುರುವಾಗಿದ್ದು, ಜನರು ಮಾವಿನ‌ ರುಚಿ ಸವಿಯಲು ಕಾತುರರಾಗಿದ್ದಾರೆ. ಆದರೆ, ಈಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಕಾರಣ ದರ ಕೇಳಿ ಗ್ರಾಹಕರು ಹೌಹಾರುತ್ತಿದ್ದಾರೆ. ತರಹೇವಾರಿ ಮಾವು ಮಾರುಕಟ್ಟೆಗೆ ಬಂದಿವೆ. ಪ್ರಮುಖವಾಗಿ ರತ್ನಗಿರಿ, ದೇವಗಡ, ಆಪೂಸ್ (ಆಲ್ಫೊನ್ಸೋ), ರಸಪುರಿ, ಫೈರಿ ಸೇರಿದಂತೆ ವಿವಿಧ ತಳಿಯವು ಮಾರುಕಟ್ಟೆಯಲ್ಲಿವೆ. ಸದ್ಯಕ್ಕೆ ಆಪೂಸ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ, ದುಬಾರಿಯಾಗಿದೆ. ಒಂದು ಡಜನ್ ಮಾವಿನ ಹಣ್ಣಿನ ಬೆಲೆ 1,000 ದಿಂದ 3700 ರೂ.ವರೆಗೂ …

Read More »

ರಾಜ್ಯ ಯುವ ಕಾಂಗ್ರೆಸ್​​​​​​​ನ ಪ್ರಧಾನ ಕಾರ್ಯದರ್ಶಿಯಾಗಿ ರಾಹುಲ್‌ ಜಾರಕಿಹೊಳಿ ಅಧಿಕಾರ ಸ್ವೀಕಾರ

ಬೆಂಗಳೂರು: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್​​​​​ನ ನೂತನ ಕಾರ್ಯದರ್ಶಿಯಾಗಿ ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು ಇಂದು ಪದಗ್ರಹಣ ಮಾಡಿದರು. ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​ ಅವರ ಸಮ್ಮುಖದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಯುವ ಕಾಂಗ್ರೆಸ್ ನ ನೂತನ ಪದಾಧಿಕಾರಿಗಳು ಇದೇ ವೇಳೆ ಪದಗ್ರಹಣ ಮಾಡಿದರು. ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮಹಿಳೆಯರೂ ಪಕ್ಷಕ್ಕಾಗಿ ದುಡಿಯಬೇಕು, ಈ ನಿಟ್ಟಿನಲ್ಲಿ 74 ಮಹಿಳೆಯರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡುತ್ತೇವೆ …

Read More »

ಸಾವರ್ಕರ್ ಪರವಾದ ವಕಾಲತ್ತು ವಹಿಸುವ @BJP4Karnataka ಅಂಬೇಡ್ಕರ್ ರವರ ವಿರುದ್ಧದ ಸಾವರ್ಕರ್ ಸಂಚಿನ ಹೊಣೆಯನ್ನೂ ಹೊತ್ತುಕೊಳ್ಳಲಿ

ಬ್ರಿಟಿಷರಿಗೆ ಮಾಫಿ ಪತ್ರ ಬರೆದಿದ್ದ ಸಾವರ್ಕರ್ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂಸತ್ ಪ್ರವೇಶಿಸದಂತೆ ತಡೆಯುವ ಸಂಚು ರೂಪಿಸಿದ್ದರು ಎನ್ನುವುದು ಸ್ವತಃ ಬಾಬಾ ಸಾಹೇಬರ ಕೈಬರಹದಲ್ಲೇ ದಾಖಲಾಗಿದೆ. ಸಾವಿರಾರು ವರ್ಷಗಳಿಂದ ಶೋಷಿತರ ತಲೆಯ ಮೇಲೆ ಕಾಲಿಟ್ಟುಕೊಂಡು ಬಂದಿದ್ದ ಮನುವಾದಿಗಳಿಗೆ ಅಂಬೇಡ್ಕರ್ ರವರು ಪರಮ ಶತ್ರುವಾಗಿ ಕಂಡಿದ್ದರಲ್ಲಿ ಯಾವುದೇ ವಿಶೇಷತೆ ಇಲ್ಲ. ಬಾಬಾ ಸಾಹೇಬರನ್ನು ಸೋಲಿಸಿದ್ದು ಕಾಂಗ್ರೆಸ್ ಎನ್ನುವ ಬಿಜೆಪಿಯ ಆಧಾರವಿಲ್ಲದ ಸುಳ್ಳು ನರೇಟಿವ್ ನ್ನು ಇಂದು ಸದನದಲ್ಲಿ ಚಾರಿತ್ರಿಕ …

Read More »

ಬೆಳಗಾವಿ ಬೆಕ್ಕೇರಿ ಗ್ರಾಮದಲ್ಲಿ ಹೈ ಅಲರ್ಟ್ ಸಮುದಾಯಗಳ ನಡುವೆ ಘರ್ಷಣೆ, ಕಲ್ಲು ತೂರಾಟ:

ಸಮುದಾಯಗಳ ನಡುವೆ ಘರ್ಷಣೆ, ಕಲ್ಲು ತೂರಾಟ: ಬೆಳಗಾವಿ ಬೆಕ್ಕೇರಿ ಗ್ರಾಮದಲ್ಲಿ ಹೈ ಅಲರ್ಟ್ ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿ ಅದ್ದೂರಿಯಾಗಿ ಹೋಳಿ ಹಬ್ಬ ಆಚರಣೆ ಮಾಡಿದ್ದಾರೆ. ಇದೇ ಹೋಳಿ ಕುರಿತು ಓರ್ವ ಯುವಕ ವಾಟ್ಸಾಪ್​ ಸ್ಟೇಟಸೊಂದನ್ನು ಹಾಕಿಕೊಂಡಿದ್ದಾನೆ. ಅದರಲ್ಲಿ ಅಂಬೇಡ್ಕರ್ ಕುರಿತು ಕೂಡ ಬರೆದು ಹಾಕಿದ್ದು, ಬೇರೊಂದು ಸಮುದಾಯದ ಯುವಕರನ್ನು ಕೆರಳಿಸುವಂತೆ ಮಾಡಿದೆ. ಇದರಿಂದ ಇಂದು ಇಡೀ ಗ್ರಾಮದಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ. ಆಗಿದ್ದೇನು ಎಂಬ ಮಾಹಿತಿ ಇಲ್ಲಿದೆ. …

Read More »

ಜಲನಿಗಮಗಳಿಗೆ ಕೇಂದ್ರ ನೀಡಿದ್ದು ಬಡ್ಡಿರಹಿತ ಸಾಲ…ಅನುದಾನವಲ್ಲ…

ಜಲನಿಗಮಗಳಿಗೆ ಕೇಂದ್ರ ನೀಡಿದ್ದು ಬಡ್ಡಿರಹಿತ ಸಾಲ…ಅನುದಾನವಲ್ಲ… ಸದನಕ್ಕೆ ತಪ್ಪು ಮಾಹಿತಿ ನೀಡದಿರಿ…ಯತ್ನಾಳ ವಿರುದ್ಧ ಗುಡುಗಿದ ಸಿದ್ಧರಾಮಯ್ಯ… ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಜಲ ನಿಗಮಗಳಿಗೆ ನೀಡಿದ್ದು, ಕೇವಲ 1030 ಕೋಟಿ ಬಡ್ಡಿರಹಿತ ಸಾಲ. ಅದನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕೆಂದ್ರ ಸರ್ಕಾರ ರಾಜ್ಯಕ್ಕೆ 10 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆಂದು ಎಂದು ಸಿಎಂ ಸಿದ್ಧರಾಮಯ್ಯ ಸದನಕ್ಕೆ ಹೇಳುತ್ತಿದ್ದಂತೆ ಯತ್ನಾಳ ಮೊದಲೂ ರಾಜ್ಯ …

Read More »

ಧಾರವಾಡದಲ್ಲಿ ಪುನೀತ್ ರಾಜಕುಮಾರ್ ಜನ್ಮ ದಿನಕ್ಕೆ ಅನ್ನ ಸಂತರ್ಪಣೆ… ಹಸಿದ ಹೊಟ್ಟೆಗೆ ಊಟ ನೀಡಿ ಅಭಿಮಾನಿಗಳಿಂದ ಮಾದರಿಯ ಕಾರ್ಯ

ಧಾರವಾಡದಲ್ಲಿ ಪುನೀತ್ ರಾಜಕುಮಾರ್ ಜನ್ಮ ದಿನಕ್ಕೆ ಅನ್ನ ಸಂತರ್ಪಣೆ… ಹಸಿದ ಹೊಟ್ಟೆಗೆ ಊಟ ನೀಡಿ ಅಭಿಮಾನಿಗಳಿಂದ ಮಾದರಿಯ ಕಾರ್ಯ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಜನ್ಮ ದಿನವನ್ನು ಧಾರವಾಡದಲ್ಲಿ ಅವರ ಅಭಿಮಾನಿಗಳು ಅರ್ಥಪೂರ್ಣ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದರು. ಹಸಿದ ಹೊಟ್ಟೆಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಮಾದರಿಯ ಕಾರ್ಯ ಮಾಡಿ ಅಭಿಮಾನ ಮೇರೆದೀದ್ದಾರೆ. ಧಾರವಾಡದ ಮಾಳಮಡ್ಡಿಯ ಆಟೊ ಸ್ಟ್ಯಾಂಡ್ ಬಳಿ ಪುನೀತ್ ರಾಜಕುಮಾರ್ …

Read More »

ಭಾರತರತ್ನ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿ: ಪೂರ್ವಭಾವಿ ಸಭೆ:ಮೊಹಮ್ಮದ್ ರೋಷನ್

ಭಾರತರತ್ನ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿ: ಪೂರ್ವಭಾವಿ ಸಭೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅದ್ದೂರಿ ಆಚರಣೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ : ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಏಪ್ರಿಲ್ 14 ರಂದು ಅದ್ದೂರಿಯಾಗಿ ಆಚರಿಸಲಾಗುವುದು. ಸಂಬಂಧಿಸಿದ ಎಲ್ಲ ಇಲಾಖೆಯ ಅಧಿಕಾರಿಗಳು ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ …

Read More »