Breaking News

Daily Archives: ಫೆಬ್ರವರಿ 6, 2025

ಗೃಹಲಕ್ಷ್ಮಿ ಯೋಜನೆ ಹಣವನ್ನು ಕೂಡಿಟ್ಟು 24 ಸಾವಿರ ರೂವನ್ನು ಶಾಲೆಗೆ ನೀಡಿದ ಆಶಾ ಕಾರ್ಯಕರ್ತೆ*

ರಾಜ್ಯ ಸರ್ಕಾರದ ಜನಪ್ರಿಯ ಗೃಹಲಕ್ಷ್ಮೀ ಯೋಜನೆ ಒಂದೆಲ್ಲ ಒಂದು ಒಳ್ಳೆ ಕಾರಣಕ್ಕೆ ಸುದ್ದಿಯಲ್ಲಿದೆ. ಮಹಿಳೆಯರು ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಸದ್ಬಳಕೆ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಐರಣಿ ಗ್ರಾಮದ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆ ಹಣವನ್ನು ಕೂಡಿಟ್ಟು 24 ಸಾವಿರ ರೂವನ್ನು ಶಾಲೆಗೆ ನೀಡಿದ್ದಾರೆ. ಆಶಾ ಕಾರ್ಯಕರ್ತೆ ಗಂಗಮ್ಮ ಲಗುಬಿಗಿ ಎಂಬುವರು ಹಣ ಉಳಿಸಿ 24,000ರೂ. ಗಳನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ನೀಡಿದ್ದಾರೆ. ಗಂಗಮ್ಮಳ ಕಾರ್ಯಕ್ಕೆ …

Read More »

ಬಿಟ್ ಕಾಯಿನ್ ಹಗರಣ: ನಲಪಾಡ್ ಗೆ ಬಂಧನದ ಭೀತಿ

ಬಹುಕೋಟಿ ಬಿಟ್ ಕಾಯಿನ್ ಹಗರಣ ಸಂಬಂಧ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರಿಗೆ ಎಸ್‌ಐಟಿ ನೋಟಿಸ್ ನೀಡಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಇದರಿಂದಾಗಿ ನಲಪಾಡ್ ಅವರಿಗೆ ಬಂಧನ ಭೀತಿ ಶುರುವಾಗಿದೆ. ಅಂತರರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೊತೆಗೆ ನಲಪಾಡ್ ವ್ಯಾವಹಾರಿಕ ನಂಟು ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪ ಹಿನ್ನೆಲೆಯಲ್ಲಿ ನಲಪಾಡ್ ಅವರಿಗೆ ಫೆಬ್ರವರಿ 7ರಂದು ವಿಚಾರಣೆಗೆ ಹಾಜರಾಗುವಂತೆ ಸೆಕ್ಷನ್ …

Read More »

ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ಯಾವುದೇ ಕ್ಷಣದಲ್ಲಿ ಘೋಷಣೆ

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ ಯಾವುದೇ ಕ್ಷಣದಲ್ಲಿ ಘೋಷಣೆಯಾಗಬಹುದು. ಈ ತಿಂಗಳ 20ರೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರಿಗೆ ಅನುಭವದ ಕೊರತೆ ಇದೆ ಎನ್ನುವ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯದ ಅಧ್ಯಕ್ಷನಾಗಿ ನನಗೆ ಅನುಭವದ ಕೊರತೆ ಇರಬಹುದು. ಆದರೆ ಪಕ್ಷದ ಕಾರ್ಯಕರ್ತನಾಗಿ ನನ್ನದೇ ಆದ ಅನುಭವ ಇದೆ. ಕಾರ್ಯದರ್ಶಿಯಾಗಿ, ಉಪಾಧ್ಯಕ್ಷನಾಗಿ, ಕಾರ್ಯಕರ್ತನಾಗಿ ಕೆಲಸ ಮಾಡಿ ಅನುಭವ …

Read More »

ಕಾವೇರಿ ಆಸ್ತ್ರೆಯಿಂದ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಅಂಬ್ಯುಲೆನ್ಸ್ ಕೊಡುಗೆ ಬನ್ನೇರುಘಟ್ಟ ಪ್ರವಾಸಿಗರು, ಸ್ಥಳೀಯರಿಗೂ ಆಂಬ್ಯುಲೆನ್ಸ್ ಸೇವೆ: ಈಶ್ವರ ಖಂಡ್ರೆ

ಬೆಂಗಳೂರು : ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನಕ್ಕೆ ಕೊಡುಗೆಯಾಗಿ ಬಂದಿರುವ ಆಂಬ್ಯುಲೆನ್ಸ್, ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೂ ಪ್ರಯೋಜನ ಒದಗಿಸಲಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. ವಿಕಾಸಸೌಧದ ಗಾಂಧೀ ಪ್ರತಿಮೆ ಬಳಿ ಇಂದು ಬೆಂಗಳೂರಿನ ಕಾವೇರಿ ಆಸ್ಪತ್ರೆ ಸಮೂಹ ಬನ್ನೇರುಘಟ್ಟ ಉದ್ಯಾನಕ್ಕೆ ಕೊಡುಗೆಯಾಗಿ ನೀಡಿದ ಆಂಬ್ಯುಲೆನ್ಸ್ ವಾಹನವನ್ನು ಇಲಾಖೆಯ ಪರವಾಗಿ ಸ್ವೀಕರಿಸಿ, ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಅವರಿಗೆ ಹಸ್ತಾಂತರಿಸಿ ಮಾತನಾಡಿದ ಅವರು, …

Read More »

ದೆಹಲಿ ಚುನಾವಣೆ ; ಎಕ್ಸಿಟ್ ಪೋಲ್ ಮೇಲೆ ನಮಗೆ ವಿಶ್ವಾಸವಿಲ್ಲ

ದೆಹಲಿ ಚುನಾವಣೆ ; ಎಕ್ಸಿಟ್ ಪೋಲ್ ಮೇಲೆ ನಮಗೆ ವಿಶ್ವಾಸವಿಲ್ಲ ನಲಪಾಡಗೆ ನೋಟಿಸಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಫೈನಾನ್ಸಗಳ ಕಿರುಕುಳ ತಪ್ಪಿಸಲು ಹೊಸ ವಿಧೇಯಕ ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ ಎಕ್ಸಿಟ್ ಪೋಲ್ ಮೇಲೆ ನಮಗೆ ವಿಶ್ವಾಸವಿಲ್ಲ. ಮತದದಾರರು ಎಲ್ಲವನ್ನು ತಿರ್ಮಾಣ ಮಾಡುತ್ತಾರೆಂದು ಡಿಸಿಎಂ ಡಿ.ಕೆ. ಶಿವಕುಮಾರ ನುಡಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ ತಾವು ಯಾವುದೇ ಎಕ್ಸಿಟ್ ಪೋಲ್ ಮೇಲೆ ವಿಶ್ವಾಸ ಇರಿಸಲ್ಲ ಎಂದರು. ಮತದಾರರ …

Read More »

ವೈಜಾಗ್ ಸ್ಟೀಲ್ (RINl) ಭವಿಷ್ಯದ ಯೋಜನೆ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದ ನಾ.ರಾ.ಲೋಕೇಶ್

ವೈಜಾಗ್ ಸ್ಟೀಲ್ (RINl) ಭವಿಷ್ಯದ ಯೋಜನೆ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದ ನಾ.ರಾ.ಲೋಕೇಶ್ ₹11,440 ಕೋಟಿ ಪುನಶ್ಚೇತನ ಪ್ಯಾಕೇಜ್ ಬಗ್ಗೆ ಚರ್ಚೆ* ನವದೆಹಲಿಯ ಮಾಜಿ ಪ್ರಧಾನಿಗಳ ಮನೆಯಲ್ಲಿ ಭೇಟಿ; ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಲೋಕೇಶ್ ನವದೆಹಲಿ: ಕೇಂದ್ರ ಸರಕಾರವು ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ ಅಥವಾ ವೈಜಾಗ್ ಸ್ಟೀಲ್ (RINl) ಪುನಶ್ಚೇತನ ಪ್ಯಾಕೇಜ್ ಘೋಷಿಸಿದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಐಟಿ ಸಚಿವ ನಾ.ರಾ.ಲೋಕೇಶ್ ಅವರು ಬೃಹತ್ ಕೈಗಾರಿಕೆ …

Read More »

ಪುಟ್ಟ ಬಾಲಕಿ ಮೇಲೆ ಕಾಮುಕನಿಂದ ಅತ್ಯಾಚಾರ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಲ್ಲಿ ನಡೆದ ಘಟನೆ

ಪುಟ್ಟ ಬಾಲಕಿ ಮೇಲೆ ಕಾಮುಕನಿಂದ ಅತ್ಯಾಚಾರ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಲ್ಲಿ ನಡೆದ ಘಟನೆ ಪೋತ್ನಾಳ್ ಗ್ರಾಮದ ವಿದ್ಯಾಭಾರತಿ ಶಾಲೆಯಲ್ಲಿ 2ನೆ ತರಗತಿಯ ವಿದ್ಯಾರ್ಥಿನಿ ಮುದ್ದಂಗುಡ್ಡಿ‌ ಗ್ರಾಮದ ಶಿವನಗೌಡನಿಂದ ಅತ್ಯಾಚಾರ ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲು ಎಸ್ಪಿ ಪುಟ್ಟ ಮಾದಯ್ಯ, ಡಿವೈಎಸ್ಪಿ ತಳವಾರ ಭೇಟಿ   ಕಾಮುಕರ ಮನಸ್ಥಿತಿ ಯಾವ ರೀತಿ ಇರುತ್ತದೆ ಹುಷಾರಾಗಿರಿ ಎಂದು ಸರಕಾರ ಆಗಾಗ್ಗೆ ತಿಳಿ ಹೇಳುತ್ತಿರುತ್ತದೆ.ಆದರೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮುದ್ದಂಗುಡ್ಡಿ ಪುಟ್ಟ …

Read More »

ದಡ್ಡಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ – ಅಭಿವೃದ್ಧಿ ಕೆಲಸಗಳೆಲ್ಲಾ ಸ್ಥಗಿತ!

ಹುಕ್ಕೇರಿ, ಫೆಬ್ರವರಿ 4:ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ, ಅನಕ್ಷರತೆ ಮತ್ತು ನಿರ್ಲಕ್ಷ್ಯ ಆಡಳಿತ ಹಬ್ಬಿಕೊಂಡಿದ್ದು, ಗ್ರಾಮಸ್ಥರ ಸಮಸ್ಯೆಗಳಿಗಾದರೂ ಸ್ಪಂದನೆಯೇ ಇಲ್ಲ. ಗ್ರಾಮದಲ್ಲಿ ಅಭಿವೃದ್ಧಿ ಎಂಬುದು ಕೇವಲ ಹೋಲಿಕೆಯ ಮಾತಾಗಿದ್ದು, ಬಹುತೇಕ ಯೋಜನೆಗಳ ಹಣ ದುರ್ಬಳಕೆಯಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಮಂಜೂರಾಗಿದ್ದರೂ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಗ್ರಾಮಸ್ಥರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಲ್ ಜೀವನ್ ಮಿಷನ್ ಯೋಜನೆ ಸಂಪೂರ್ಣ ವಿಫಲ! ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ …

Read More »

ದಾವಣಗೆರೆಯಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಅನ್ಯ ಕೋಮಿನ ಆರೋಪಿಗೆ ಕಠಿಣ ಶಿಕ್ಷೆ ನೀಡಿ; ಬೆಳಗಾವಿ ಶ್ರೀರಾಮಸೇನೆ ಆಗ್ರಹ

ದಾವಣಗೆರೆ ಜಿಲ್ಲೆಯ ಚೆನ್ನಗಿರಿಯಲ್ಲಿ ನಡೆದ ವಿದ್ಯಾರ್ಥಿನಿಯರು ಮತ್ತು ಹಿಂದೂ ಮಹಿಳೆಯರನ್ನು ಪುಸಲಾಯಿಸಿ, ಮತ್ತು ಬರುವ ಮಾತ್ರೆ ನೀಡಿ ಬಲಾತ್ಕಾರಗೈದು ವಿಡಿಯೋ ಹರಿಬಿಟ್ಟ ಅನ್ಯ ಕೋಮಿನ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಶ್ರೀರಾಮಸೇನೆ ಬೆಳಗಾವಿ ಆಗ್ರಹಿಸಿದೆ. ದಾವಣಗೆರೆ ಜಿಲ್ಲೆಯ ಚೆನ್ನಗಿರಿಯಲ್ಲಿ ಮೆಡಿಕಲ್ ಶಾಪಗೆ ಬರುತ್ತಿದ್ದ ವಿದ್ಯಾರ್ಥಿನಿಯರು ಮತ್ತು ಹಿಂದೂ ಮಹಿಳೆಯರನ್ನು ಪುಸಲಾಯಿಸಿ, ಮತ್ತು ಬರುವ ಮಾತ್ರೆ ನೀಡಿ ಬಲಾತ್ಕಾರಗೈದು ವಿಡಿಯೋ ಹರಿಬಿಟ್ಟ ಅನ್ಯ ಕೋಮಿನ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ …

Read More »

ಮಹಾನಗರ ಪಾಲಿಕೆ ಆಯುಕ್ತರು ವರ್ಗಾವಣೆ ಮೂಲಕ ನಮಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ನಡುವಿನ ಶೀತಲ ಸಮರದಿಂದ 4 ದಿನಗಳಲ್ಲಿ 40 ಅಧಿಕಾರಿಗಳ ವರ್ಗಾವಣೆ ಆಗಿದೆ. ವರ್ಗಾವಣೆಯಿಂದ ನೊಂದ ಸಿಬ್ಬಂದಿ ಸಚಿವ ಸತೀಶ್ ಜಾರಕಿಹೊಳಿಯನ್ನು ಭೇಟಿಯಾಗಿ ಪಾಲಿಕೆ ಆಯುಕ್ತರಾದ ಶುಭಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದೇ ವಿಚಾರ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗ್ತಿದ್ದು ಸಿಬ್ಬಂದಿ ವರ್ಗಾವಣೆ ಬಿಸಿಬಿಸಿ ಸುದ್ದಿಯಾಗಿದೆ. ಆಯುಕ್ತರು ವರ್ಗಾವಣೆ ಮೂಲಕ ನಮಗೆ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಮುಂದೆ ಅಳಲು ತೋಡಿಕೊಂಡಿದ್ದಾರೆ. …

Read More »