ಹುಬ್ಬಳ್ಳಿ: ರೈಲು ಸಂಖ್ಯೆ 07363 ಎಸ್ಎಸ್ಎಸ್ (ಶ್ರೀ ಸಿದ್ದಾರೂಢ ಸ್ವಾಮೀಜಿ) ಹುಬ್ಬಳ್ಳಿ – ಯೋಗ ನಗರಿ ರಿಷಿಕೇಶ್ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ಜನವರಿ 06ರಿಂದ ಮುಂದಿನ ಆದೇಶದ ವರೆಗೆ ಪ್ರತಿ ಸೋಮವಾರ 20:30 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು ಜನವರಿ 13 & 27, ಮತ್ತು ಫೆಬ್ರವರಿ 03,10 & 24, 2025 ರಂದು ಹೊರತುಪಡಿಸಿ ಬುಧವಾರ 23:30 ಗಂಟೆಗೆ ಯೋಗ ನಗರಿ ರಿಷಿಕೇಶ್ ತಲುಪಲಿದೆ. ರೈಲು ಸಂಖ್ಯೆ 07364 ಯೋಗ …
Read More »Daily Archives: ಜನವರಿ 4, 2025
ಸಾರಿಗೆ ಬಸ್ ದರ ಪರಿಷ್ಕರಣೆಗೆ ಹುಬ್ಬಳ್ಳಿ ಸಾರ್ವಜನಿಕರ ಅಭಿಪ್ರಾಯ
ಹುಬ್ಬಳ್ಳಿ: ರಾಜ್ಯ ಸರ್ಕಾರ ನಾಲ್ಕು ಸಾರಿಗೆ ಸಂಸ್ಥೆಗಳ ಪ್ರಯಾಣ ದರ ಪರಿಷ್ಕರಿಸುವ ನಿರ್ಧಾರ ಕೈಗೊಂಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರ ಏರಿಕೆಯಾಗುತ್ತಿರುವುದಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಶಿಕುಮಾರ್ ಹಿರೇಮಠ ಎಂಬವರು ಪ್ರತಿಕ್ರಿಯಿಸಿ, “ಬಸ್ ದರ ಏರಿಕೆ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವದರ ಜೊತೆಗೆ …
Read More »ಎಣ್ಣೆ ಆಯ್ತು, ಇಂಧನ ಆಯ್ತು ಈಗ ಬಸ್ ದರ, ನಾವ್ ಏನ್ ಮಾಡೋಣ ನೀವೇ ಹೇಳಿ’
ಎಣ್ಣೆ ಆಯ್ತು, ಇಂಧನ ಆಯ್ತು ಈಗ ಬಸ್ ದರ, ನಾವ್ ಏನ್ ಮಾಡೋಣ ನೀವೇ ಹೇಳಿ’: ವಡಗಾವ ನಿವಾಸಿ ಸಂಜಯ ಜಯಗೌಡ ಅವರು ಮಾತನಾಡಿ, ”ರಾಜ್ಯ ಸರ್ಕಾರ ಇಷ್ಟು ದಿನ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಜೊತೆಗೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿತ್ತು. ಆದರೆ, ಈಗ ಬಸ್ ದರ ಏರಿಸಿ ಪುರುಷರ ಹಣವನ್ನು ಮಹಿಳೆಯರಿಗೆ ಕೊಡುತ್ತಿರುವುದು ಸರಿಯಲ್ಲ. ದುಡಿಯುವ ಕೈಗಳಿಗೆ ಕೆಲಸ ಕೊಡಿ. ಅವರೇ ನಿಮಗೆ …
Read More »ಕಾಮಗಾರಿ ಮುಗಿಸಿ ಒಂದೂವರೆ ವರ್ಷ ಕಳೆದರೂ ದುಡ್ಡು ಕೊಡ್ತಿಲ್ಲ
ದಾವಣಗೆರೆ: ಕಾಮಗಾರಿ ಮುಗಿಸಿ ಒಂದೂವರೆ ವರ್ಷ ಕಳೆದರು ಅನುದಾನ ಬಿಡುಗಡೆಯಾಗಿಲ್ಲ. ವಯಸ್ಸಿಗೆ ಬಂದಿರುವ ಮಗಳಿಗೆ ಮದುವೆ ಮಾಡಲು ಹಣ ಇಲ್ಲದೆ ಗುತ್ತಿಗೆದಾರ ಅಸಹಾಯಕತೆಯಿಂದ ದಯಾಮರಣ ಕೋರಿ ಸಿಎಂ, ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. 2022-23ನೇ ಸಾಲಿನ ವಿಶೇಷ ಅನುದಾನ ಅಡಿಯಲ್ಲಿ ಟೆಂಡರ್ ಕರೆದಿದ್ದರು. ಟೆಂಡರ್ ಪಡೆಯಲು ನಾನು ಭಾಗಿಯಾಗಿದ್ದೆ. ಹರಿಹರ ನಗರಸಭೆ ಹಾಗು ಜಿಲ್ಲಾಧಿಕಾರಿ ಅವರು ಕಾಮಗಾರಿ ಕಾರ್ಯದೇಶ ನೀಡಿದ್ದರು. ಅನುಮೋದನೆ ಆದ ಬಳಿಕ ಟೆಂಡರ್ ನನಗೆ ಸಿಕ್ಕಿತು. ನಾನು ಸಾಲಸೋಲ ಮಾಡಿ …
Read More »ಯುವತಿಯ ಕುಟುಂಬದವರ ಮೇಲೆ ಹಲ್ಲೆ ಮಾಡಿ ಆತ್ಮಹತ್ಯೆ ಮಾಡಿ ಕೊಂಡ?
ಬಳ್ಳಾರಿ: ಯುವತಿ ಮತ್ತವರ ಮನೆಯವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಭಗ್ನ ಪ್ರೇಮಿಯೊಬ್ಬ, ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸಂಡೂರಿನ ಯಶವಂತನಗರ ಬಳಿ ನಡೆದಿದೆ. ನವೀನ್ ಕುಮಾರ್ ಮೃತ ಭಗ್ನ ಪ್ರೇಮಿ. ಹಲ್ಲೆಯಿಂದ ಯುವತಿ ಮತ್ತವರ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯುವತಿಯ ಅಣ್ಣನಿಗೆ ಬಲವಾಗಿ ಪೆಟ್ಟು ಬಿದ್ದಿದೆ. ಹೊಸಪೇಟೆ ತಾಲೂಕಿನ ಪಿ.ಕೆ. ಹಳ್ಳಿ ಮೂಲದ ನವೀನ್ ಕುಮಾರ್ ಎಂಬಾತ ಯುವತಿಯನ್ನು ಬಲವಂತದಿಂದ ಕರೆದುಕೊಂಡು ಹೋಗಿ ತಾಳಿ ಕಟ್ಟಿದ್ದು, ನಿನ್ನೆ (ಶುಕ್ರವಾರ) …
Read More »ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ಪ್ರಯಾಣ ದರ
ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಶೇ.15ರಷ್ಟು ಪ್ರಯಾಣ ದರ ಪರಿಷ್ಕರಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಇಂದು ಮಧ್ಯರಾತ್ರಿಯಿಂದ ಶೇ 15ರಷ್ಟು ಟಿಕೆಟ್ ಏರಿಕೆಯ ಪರಿಷ್ಕೃತ ದರ ಅನ್ವಯವಾಗಲಿದೆ. ಹೀಗಿದೆ ಬಸ್ ಪ್ರಯಾಣದ ದರ …
Read More »ಉದ್ಯಮಿಯ ಮನೆಗೆ ದಾಳಿ ನಡೆಸಿ ಬರೋಬ್ಬರಿ 30 ಲಕ್ಷ ರೂ. ಲೂಟಿ
ಬಂಟ್ವಾಳ: ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿಯ ಮನೆಗೆ ದಾಳಿ ನಡೆಸಿ ಬರೋಬ್ಬರಿ 30 ಲಕ್ಷ ರೂ. ಲೂಟಿ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಸುಲೈಮಾನ್ ಹಾಜಿ ಅವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರ್ನಲ್ಲಿ ಆಗಮಿಸಿದ ತಂಡ …
Read More »ಸರ್ಕಾರದ ವಿರುದ್ಧ ಕುಂದಾನಗರಿ ಜನರ ಆಕ್ರೋಶ
ಬೆಳಗಾವಿ : ಕೆಎಸ್ಆರ್ಟಿಸಿ ದರ ಪರಿಷ್ಕರಣೆಗೆ ನಿರ್ಧರಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದೆಡೆ ಮಹಿಳೆಯರಿಗೆ ಉಚಿತ ಬಸ್ ಭಾಗ್ಯ ನೀಡಿ, ಮತ್ತೊಂದೆಡೆ ಪುರುಷರಿಗೆ ಶೇ.15 ರಷ್ಟು ದರ ಏರಿಸುವ ಮೂಲಕ ನಮ್ಮ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಸರ್ಕಾರದ ನೀತಿ ಹೇಗಿದೆ ಎಂದರೆ?- ಜನ ಹೇಳೋದು ಹೀಗೆ: ಈ ಬಗ್ಗೆ ಶೀಗಿಹಳ್ಳಿ ಗ್ರಾಮದ ಬಾಳೇಶ ಎಂಬುವವರು ಈಟಿವಿ ಭಾರತದೊಂದಿಗೆ ಮಾತನಾಡಿ, ”ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ …
Read More »ಬೆಂಗಳೂರು: KAS ಅಧಿಕಾರಿಗಳ ಜೇಷ್ಠತಾ ಪಟ್ಟಿ ಸಿದ್ಧವಿದ್ದು, ಮುಂದಿನ 10 ದಿನಗಳ ಒಳಗಾಗಿ ಬಿಡುಗಡೆ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು: KAS ಅಧಿಕಾರಿಗಳ ಜೇಷ್ಠತಾ ಪಟ್ಟಿ ಸಿದ್ಧವಿದ್ದು, ಮುಂದಿನ 10 ದಿನಗಳ ಒಳಗಾಗಿ ಬಿಡುಗಡೆ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ಹೊರತಂದಿರುವ ಕ್ಯಾಲೆಂಡರ್ ಮತ್ತು ದಿನಚರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, KAS ಅಧಿಕಾರಿಗಳ ಜೇಷ್ಠತಾ ಪಟ್ಟಿ ಸಿದ್ಧವಿದೆ. ಮುಂದಿನ 10 ದಿನಗಳ ಒಳಗಾಗಿ ಬಿಡುಗಡೆ ಆಗುತ್ತದೆ. ಕೆಎಎಸ್ ಅಧಿಕಾರಿಗಳ ಬಡ್ತಿ ಬೇಡಿಕೆಯನ್ನೂ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು. ನಮಗೆ …
Read More »ಸಾರಿಗೆ ನಿಗಮಗಳ ಪರಿಸ್ಥಿತಿ ಸುಧಾರಣೆ ಬಗ್ಗೆ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ (
ಬೆಂಗಳೂರು: ಸರ್ಕಾರ ವಾರ್ಷಿಕ 2,000 ಕೋಟಿ ರೂ. ಅನುದಾನ ನೀಡಿದರೆ ರಸ್ತೆ ಸಾರಿಗೆ ನಿಗಮಗಳ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು. ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ವಾರ್ಷಿಕ ರಸ್ತೆ ಸಾರಿಗೆ ನಿಗಮಗಳಿಗೆ 2,000 ಕೋಟಿ ಅನುದಾನ ನೀಡಿದರೆ ಪರಿಸ್ಥಿತಿ ಸುಧಾರಣೆ ಆಗಲಿದೆ. ಈಗ ವಾರ್ಷಿಕ 500-300 ಕೋಟಿ ರೂ. ವರೆಗೆ ಅನುದಾನ ನೀಡಲಾಗುತ್ತಿದೆ. ರಸ್ತೆ ಸಾರಿಗೆ ನಿಗಮಗಳ ಸುಧಾರಣೆ ಕ್ರಮಗಳ ಬಗ್ಗೆ …
Read More »