Breaking News

Daily Archives: ಮೇ 22, 2024

ಮುರುಡೇಶ್ವರದಲ್ಲಿ ಪ್ರವಾಸಿಗರ ದಂಡು; ಅಗತ್ಯ ಸೌಲಭ್ಯ ಇಲ್ಲದೆ ಜನರ ಪರದಾಟ

ಭಟ್ಕಳ: ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರವಾಸಿತಾಣ ಮುರುಡೇಶ್ವರಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಏರುತ್ತಿದ್ದರೂ ಪ್ರವಾಸೋದ್ಯಮ ಇಲಾಖೆ ಅಗತ್ಯ ಮೂಲಸೌಕರ್ಯದ ಸೌಲಭ್ಯ ಒದಗಿಸಿದ ಕಾರಣ ಪ್ರವಾಸಿಗರು ಪರದಾಡುವಂತಾಗಿದೆ. ಮುರುಡೇಶ್ವರಲ್ಲಿನ ಪ್ರಕೃತಿದತ್ತ ಸೌಂದರ್ಯವನ್ನು ವೀಕ್ಷಿಸುವುದೇ ಒಂದು ಸುಂದರ ಅನುಭವ. ಈಶ್ವರನ ದೇವಸ್ಥಾನ, ಬೃಹದಾಕಾರದ ರಾಜಗೋಪುರ, ಬೃಹದಾಕಾರದ ಈಶ್ವರನ ಮೂರ್ತಿ, ಸುಂದರರಾಮೇಶ್ವರ ದೇವಸ್ಥಾನ, ಪಂಚ ಶಿವಕ್ಷೇತ್ರ ಆದ ಬಗ್ಗೆ ಈಶ್ವರನ ಬೃಹಾದಾಕಾರದ ಮೂರ್ತಿಯ ಕೆಳಭಾಗದ ಗುಹೆಯೊಳಗಿನ ಸುಂದರ ಚಿತ್ರಣ, …

Read More »

ಓದು ಬರಹ ಬರದಿದ್ದರೂ ಪರೀಕ್ಷೆಯಲ್ಲಿ 622 ಅಂಕ! ಯಾದಗಿರಿ ನ್ಯಾಯಾಲಯದಲ್ಲಿ ಜವಾನನಾಗಿ ನೇಮಕ

ಕೊಪ್ಪಳ/ಬಾಗಲಕೋಟೆ: ಯಾದಗಿರಿ ನ್ಯಾಯಾಲಯದಲ್ಲಿ ಜವಾನನಾಗಿ ನೇಮಕಗೊಂಡಿರುವ ಕೊಪ್ಪಳ ನಗರದ ಪ್ರಭು ಲೋಕರೆಗೆ ಓದು-ಬರಹ ಬಾರದಿದ್ದರೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 622 ಅಂಕ ಗಳಿಸಿದ್ದು ಹೇಗೆ ಎಂಬ ಚರ್ಚೆ ಆರಂಭವಾಗಿದೆ. ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಕೊಪ್ಪಳ ಠಾಣೆಗೆ ಜಿಲ್ಲಾ ನ್ಯಾಯಾಲಯದ ಸಿವಿಲ್ ಮತ್ತು ಜೆಎಂಎಫ್​ಸಿ ನ್ಯಾಯಾಧೀಶರು ದೂರು ನೀಡಿದ್ದಾರೆ.   ಏಳನೇ ತರಗತಿ ವಿದ್ಯಾರ್ಹತೆ ಮೇಲೆ ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಸ್ಕ್ಯಾವೆಂಜರ್ ಆಗಿ ನೇಮಕಗೊಂಡಿದ್ದ ಪ್ರಭು, ಏ.22ರಂದು ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ …

Read More »

ಇನ್ಮುಂದೆ ಇರಲ್ಲ ಟೆಸ್ಟ್ ಡ್ರೈವ್! ಡ್ರೈವಿಂಗ್ ಲೈಸೆನ್ಸ್’ನ ನಿಯಮದಲ್ಲಿ ಭಾರಿ ಬದಲಾವಣೆ – ಜೂನ್ 1 ರಿಂದ ಜಾರಿ

ಬೆಂಗಳೂರು: ಚಾಲನಾ ಪರವಾನಗಿ ಮತ್ತು ತರಬೇತಿಗೆ ಸಂಬಂಧಿಸಿದ ನಿಯಮಗಳಲ್ಲಿ ಸರ್ಕಾರ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಹೊಸ ನಿಯಮಗಳು ಜೂನ್ 1, 2024 ರಿಂದ ಜಾರಿಗೆ ಬರುತ್ತವೆ. ಹೀಗಾಗಿ ಇನ್ನು ಮುಂದೆ ಆರ್ ಟಿಒ ಕಚೇರಿಗೆ ಹೋಗಿ ಟೆಸ್ಟ್ ಡ್ರೈವ್ ಮಾಡಬೇಕಿಲ್ಲ. ಹೊಸ ನಿಯಮಗಳಲ್ಲಿ ಯಾವ ಬದಲಾವಣೆಗಳು ಬರಲಿವೆ ಎಂಬುದನ್ನು ಇಲ್ಲಿ ತಿಳಿಯಿರಿ.   ಹೊಸ ನಿಯಮಗಳ ಪ್ರಕಾರ ಇನ್ನು ಮುಂದೆ ಆರ್‌ಟಿಒ ಕಚೇರಿಗೆ ಚಾಲನಾ ಪರೀಕ್ಷೆಗೆ ಹೋಗಬೇಕಾಗಿಲ್ಲ. ಆರ್‌ಟಿಒ ಕಚೇರಿ …

Read More »

ಹುಬ್ಬೇರಿಸುವಂತೆ ಮಾಡಿದ ವಸತಿ ಶಾಲೆ ಎಸ್ಸೆಸ್ಸೆಲ್ಸಿ ಫಲಿತಾಂಶ

ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ನಡೆಯುವ ವಸತಿ ಶಾಲೆಗಳಲ್ಲಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಶೇ.96 ಲಿತಾಂಶ ಪ್ರಕಟವಾಗಿದ್ದು, ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲವೆಂದು ತೋರಿಸಿವೆ. ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವಿಲ್ಲ, ಉತ್ತಮ ಶಿಕ್ಷಕರಿಲ್ಲ, ಅತಿಥಿ ಶಿಕ್ಷಕರಲ್ಲಿಯೇ ಶಾಲೆಗಳನ್ನು ನಡೆಸಲಾಗುತ್ತಿದೆ. ಮೂಲ ಸೌಕರ್ಯದ ಕೊರತೆ ಇದೆ ಎಂಬ ಹತ್ತಾರು ಕಾರಣಗಳನ್ನು ನೀಡಿ ಸರ್ಕಾರಿ ಶಾಲೆಗಳನ್ನು ದೂಷಿಸಲಾಗುತ್ತದೆ. ಅದೆಲ್ಲ ಸವಾಲುಗಳನ್ನು ಮೆಟ್ಟಿ ನಿಂತಿರುವ ವಸತಿ ಶಾಲೆಗಳು ಶೇ,96 ಲಿತಾಂಶ ನೀಡಿರುವುದು …

Read More »

ರಾಮೇಶ್ವರಂ ಕೆಫೆ ಬಾಂಬ್‌ ಸ್ಪೋಟ ಪ್ರಕರಣ : ಹುಬ್ಬಳ್ಳಿಯಲ್ಲಿ ಇಬ್ಬರು ಸಹೋದರರು ಸೇರಿ 11 ಜನರು ʻNIAʼ ವಶಕ್ಕೆ

ಹುಬ್ಬಳ್ಳಿ : ರಾಮೇಶ್ವರಂ ಬಾಂಬ್‌ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ ಐಎ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ಇಬ್ಬರು ಸಹೋದರು ಸೇರಿದಂತೆ 11 ಜನರನ್ನು ವಶಕ್ಕೆ ಪಡೆದು ವಿಚಾರಣ ನಡೆಸಿದೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಂತ ಶೋಯೇಬ್ ಅಬ್ದುಲ್ ಮಿರ್ಜಾ ಎಂಬಾತನ ನಿವಾಸದ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳಿಕ ಎನ್‌ ಐಎ ಅಧಿಕಾರಿಗಳು ಶೋಯೇಬ್‌ ಮಿರ್ಜಾ ಹಾಗೂ ಆತನ ಸಹೋದರ ಅಜೀದ್‌ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಹುಬ್ಬಳ್ಳಿಯ …

Read More »

ಡಿಸಿಎಂ DK ಶಿವಕುಮಾರ್‌ ಮನೆಯಿಂದಲೇ ʻಪೆನ್‌ ಡ್ರೈವ್‌ʼ ವರ್ಗಾವಣೆ ಆಗಿದೆ : ಮಾಜಿ ಸಿಎಂ ʻHDKʼ ಹೊಸ ಬಾಂಬ್‌

ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಮನೆಯಲ್ಲೇ ಪೆನ್ ಡ್ರೈವ್ ಟ್ರಾನ್ಸ್ ಫರ್ ನಡೆದಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸರಿಯಾದ ತನಿಖೆ ನಡೆಸದೇ ಇದ್ರೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ. ಪೆನ್‌ ಡ್ರೈವ್‌ ಪ್ರಕರಣದಲ್ಲಿ ಡಿಕೆ ಬ್ರದರ್ಸ್ ಕೈವಾಡ ಇದೆ. ಹಾಸನದ ಕಾಂಗ್ರೆಸ್ ಅಭ್ಯರ್ಥಿ ಹೊಳೆನರಸೀಪುರದಲ್ಲಿ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಡಿ.ಕೆ.ಸುರೇಶ್, ಡಿಕೆ …

Read More »

UPSC IES/ISSE 2024 ಪರೀಕ್ಷೆ ದಿನಾಂಕ ಪ್ರಕಟ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) 2024ನೇ ಸಾಲಿನ ಇಂಡಿಯನ್ ಎಕನಾಮಿಕ್ ಸರ್ವಿಸ್ (ಐಇಎಸ್) / ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸ್ ಎಕ್ಸಾಮಿನೇಷನ್ (ಐಎಸ್‌ಎಸ್‌ಇ) 2024ರ ವೇಳಾಪಟ್ಟಿಯನ್ನು ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಬಿಡುಗಡೆಯಾದ ವೇಳಾಪಟ್ಟಿಯ ಪ್ರಕಾರ ಅದಕ್ಕೆ ಅನುಗುಣವಾಗಿ ತಯಾರಿ ಪ್ರಾರಂಭಿಸಬಹುದು. ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ವಿವರವಾದ ವೇಳಾಪಟ್ಟಿಯನ್ನು ಪರಿಶೀಲಿಸಬಹುದು. ಯುಪಿಎಸ್ಸಿ ಐಇಎಸ್ / ಐಎಸ್‌ಎಸ್‌ಇ 2024 ಗೆ ಸಂಬಂಧಿಸಿದ ಹೆಚ್ಚಿನ …

Read More »

ಗ್ಯಾಸ್‌ ಸಿಲಿಂಡರ್‌ ಹೊಂದಿರುವವರಿಗೆ ಬಿಗ್ ಶಾಕ್. ಈ ನಿಯಮ ಕಡ್ಡಾಯ..!

ಬೆಂಗಳೂರು:- ಗ್ಯಾಸ್‌ ಸಿಲಿಂಡರ್‌ ಹೊಂದಿರುವ ಕುಟುಂಬಗಳಿಗೆ ಶಾಕ್ ಎದುರಾಗಿದ್ದು, ಇನ್ಮುಂದೆ ಕೆಲವು ನಿಯಮ ಕಡ್ಡಾಯವಾಗಿದೆ. ಹೌದು.. ಗ್ಯಾಸ್ ಏಜೆನ್ಸಿಗಳಿಗೂ ಇ-ಕೆವೈಸಿ ಮಾಡಲು ಯಂತ್ರಗಳನ್ನು ನೀಡಲಾಗಿದೆ. ಇದರಲ್ಲಿ ಯಾರ ಹೆಸರಿನಲ್ಲಿ ಗ್ಯಾಸ್ ಸಂಪರ್ಕವಿದೆಯೋ ಅವರೇ ಕೆವೈಸಿ ಮಾಡಿಕೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ನಿಯಮದ ಪ್ರಕಾರ ಇ-ಕೆವೈಸಿ ಮಾಡದವರಿಗೆ ಕಡಿಮೆ ಸಿಲಿಂಡರ್ ನೀಡಲಾಗುವುದು ಅಥವಾ ಸಿಲಿಂಡರ್ ಸಬ್ಸಿಡಿ ಸಿಗುವುದಿಲ್ಲ. ಹಾಗಾಗಿಯೇ ಇಂತಹ ಸಮಸ್ಯೆಯನ್ನು ತಪ್ಪಿಸಲು.. ತಕ್ಷಣವೇ KYC ನ್ನು ಪೂರ್ಣಗೊಳಿಸಿ. ಕೇಂದ್ರದ ಹೊಸ …

Read More »

ಗೃಹಲಕ್ಷ್ಮೀ ಹಣದಿಂದ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಡ ಮಹಿಳೆ

ರಾಮದುರ್ಗ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಎರಡು ಸಾವಿರ ರೂಪಾಯಿ ಹಣ ಕಳೆದ 10 ತಿಂಗಳಿಂದ ರಾಜ್ಯದ ಬಡ ಮಹಿಳೆಯರ ಪಾಲಿಗೆ ಸಂಜೀವಿನಿಯಾಗುತ್ತಿದೆ. ಗೃಹಲಕ್ಷ್ಮಿ ಹಣದಿಂದ ಬಡ ಮಹಿಳೆಯೊಬ್ಬರು ಮೊನ್ನೆಯಷ್ಟೆ ತಮ್ಮ ಮನೆಗೆ ಫ್ರೀಜ್ ಖರೀದಿಸಿದ್ದರೆ, ಮತ್ತೋರ್ವ ಮಹಿಳೆ ತನಗಿಷ್ಟದ ಮೊಬೈಲ್ ಖರೀದಿಸಿದ್ದರು. ಬಡ ವಿದ್ಯಾರ್ಥಿಗಳ ಪಾಲಿಗೆ ಈ ಯೋಜನೆ ಹಲವು ರೀತಿಯಲ್ಲಿ ವರದಾನವಾಗಿದೆ. ಇದೀಗ ಬೆಳಗಾವಿಯ ರಾಮದುರ್ಗದ ಸುರೇಬಾನ ಮನಿಹಾಳ ಗ್ರಾಮದ ಮಹಿಳೆಯೊಬ್ಬರು ಕಳೆದ 10 …

Read More »

MLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು

ಬೆಂಗಳೂರು: ಚುನಾವಣೆಯಲ್ಲಿ ಸೋತ ಘಟಾನುಘಟಿಗಳೂ ಸೇರಿ ಪ್ರಭಾವಿಗಳು ಮೇಲ್ಮನೆ ಪ್ರವೇಶಕ್ಕೆ ನಡೆಸುತ್ತಿರುವ ಲಾಬಿ ಬಿಜೆಪಿ ನಾಯಕರಿಗೆ ತಲೆಬಿಸಿ ಸೃಷ್ಟಿಸಿದ್ದು, ಮೂರು ಸ್ಥಾನಕ್ಕಾಗಿ ಮೂವತ್ತಕ್ಕೂ ಹೆಚ್ಚು ಜನರು ಆಕಾಂಕ್ಷಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಭಾವ್ಯರ ಪಟ್ಟಿಯನ್ನು ದೆಹಲಿಗೆ ಕಳುಹಿಸುವುದಕ್ಕಾಗಿ ಬುಧವಾರ ಬಿಜೆಪಿಯ ಪ್ರಮುಖರ ಸಭೆ ನಡೆಯಲಿದ್ದು, ಆಕಾಂಕ್ಷಿಗಳೆಲ್ಲರ ಹೆಸರನ್ನು ದಿಲ್ಲಿ ವರಿಷ್ಠರಿಗೆ ಕಳುಹಿಸಲು ನಿರ್ಧರಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌, ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ರಾಜೇಶ್‌ …

Read More »