Breaking News

Yearly Archives: 2022

LPG ಸಬ್ಸಿಡಿ ಬಗ್ಗೆ ಸರ್ಕಾರದ ಹೊಸ ಯೋಜನೆ, ಯಾರ ಖಾತೆಗೆ ಹಣ ಬರುತ್ತೆ ಗೊತ್ತಾ.?

ನವದೆಹಲಿ: ಎಲ್.ಪಿ.ಜಿ. ಸಿಲಿಂಡರ್ ಸಬ್ಸಿಡಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ದೊಡ್ಡ ಸುದ್ದಿ ಸಿಗಬಹುದು, ಗೃಹಬಳಕೆಯ ಗ್ಯಾಸ್ ಬೆಲೆಯಲ್ಲಿ ಹೆಚ್ಚಳದ ಸುದ್ದಿ ಇದೆ. ರಷ್ಯಾ-ಉಕ್ರೇನ್ ಯುದ್ಧದ ನಡುವೆ ಕಚ್ಚಾ ತೈಲದ ಬೆಲೆ ಹೆಚ್ಚಾಗಿದೆ. ಇದೇ ವೇಳೆ ಎಲ್.ಪಿ.ಜಿ. ಸಿಲಿಂಡರ್ ಬೆಲೆ 1000 ರೂ.ಗೆ ತಲುಪಲಿದೆ ಎಂಬ ಚರ್ಚೆ ನಿರಂತರವಾಗಿ ನಡೆದಿದೆ. ಎಲ್.ಪಿ.ಜಿ. ಸಿಲಿಂಡರ್ ಗಳ ಹಣದುಬ್ಬರ ಏರಿಕೆಗೆ ಸಂಬಂಧಿಸಿದಂತೆ ಸರ್ಕಾರದ ಅಭಿಪ್ರಾಯಗಳು ಇನ್ನೂ ಮುನ್ನೆಲೆಗೆ ಬಂದಿಲ್ಲ. ಆದರೆ, ಸರ್ಕಾರದ ಆಂತರಿಕ ಮೌಲ್ಯಮಾಪನದಲ್ಲಿ, ಗ್ರಾಹಕರು ಸಿಲಿಂಡರ್‌ಗೆ …

Read More »

ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಹಾಲಿನ ದರ ಹೆಚ್ಚಳ ಸಾಧ್ಯತೆ

ಬೆಳಗಾವಿ: ಹಾಲಿನ ದರ ಹೆಚ್ಚಳ ಮಾಡುವಂತೆ 14 ಹಾಲು ಒಕ್ಕೂಟಗಳು ಒತ್ತಡ ಹಾಕುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಾಲಿನ ದರ ಹೆಚ್ಚಳದ ಬಗ್ಗೆ ಸಿಎಂ ಕೈಗೊಳ್ಳುವ ನಿರ್ಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.   ಹಾಲಿನ ದರ ಪರಿಷ್ಕರಣೆ ಮಾಡುವುದರಿಂದ ಉಂಟಾಗುವ ಸಾಧಕ-ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಿ …

Read More »

ಕರ್ನಾಟಕ ಕಾಂಗ್ರೆಸ್ ಮುಖ್ಯಮಂತ್ರಿ ಆಕಾಂಕ್ಷಿಗಳ ಸಾಲಿಗೆ ಹೊಸ ಹೆಸರು ಸೇರ್ಪಡೆ

ಬೆಂಗಳೂರು, ಮಾ.9: ಕರ್ನಾಟಕದಲ್ಲಿ ಮುಂದಿನ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರು ಎಂಬ ರೇಸ್‌ಗೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ. ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಸ್ವಲ್ಪ ಮಂಕಾಗಿದ್ದರೂ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಆಸೆಯನ್ನಂತೂ ಬಿಟ್ಟಿಲ್ಲ. ಈಗಾಗಲೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ರಾಜ್ಯದಲ್ಲಿ ಓಡಾಡುತ್ತಿದ್ದಾರೆ. ಅವರ ಹಿಂಬಾಲಕರು ನಮ್ಮ ನಾಯಕರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಈಗ …

Read More »

‘ದಿ ಕಾಶ್ಮೀರ್ ಫೈಲ್ಸ್’ ಬೆನ್ನಲ್ಲೇ ‘ಗುಜರಾತ್ ಫೈಲ್ಸ್’ ಚಿತ್ರಕ್ಕೆ ತಯಾರಿ, ಮೋದಿಗೆ ಸವಾಲೊಡ್ಡಿದ ನಿರ್ದೇಶಕ

‘ದಿ ಕಾಶ್ಮೀರ್ ಫುಲ್ಸ್’ ಸಿನಿಮಾ ರಿಲೀಸ್ ಆದಾಗಿನಿಂದಲೂ ಚಿತ್ರದ ಬಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಚರ್ಚೆ ಆಗುತ್ತಲೇ ಇದೆ. ಒಂದು ಕೋಮಿನ ಜನರನ್ನು ಪ್ರಮುಖರನ್ನಾಗಿಸಿ ಈ ಚಿತ್ರ ತೆರೆಗೆ ತರಲಾಗಿದೆ ಎಂಬ ವಾದ ಕೂಡ ಎದ್ದಿದೆ. ಮತ್ತೊಂದು ಕಡೆ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಹಲವು ಕಡೆಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದ್ದು, ಚಿತ್ರವನ್ನು ಎಲ್ಲರೂ ನೋಡಬೇಕು ಎಂದು ರಾಜಕೀಯ ಮುಖಂಡರು ಹೇಳುತ್ತಿದ್ದಾರೆ. ಇದರ ನಡುವೆ …

Read More »

ಹಿಂದೂಗಳ ಮಳಿಗೆಗಳಿಗೆ ಮಾತ್ರ ಅವಕಾಶ ನೀತಿಯನ್ನು ಪ್ರಶ್ನಿಸಿದ ಸಿದ್ದರಾಮಯ್ಯ

ಉಡುಪಿ: ಕಾಪು ನಲ್ಲಿ ಮಾರಿಗುಡಿ ದೇವಾಲಯದ ಅಧಿಕಾರಿಗಳು ಸುಗ್ಗಿ ಮಾರಿ ಪೂಜೆ ಕಾರ್ಯಕ್ರಮದಲ್ಲಿ ಮಳಿಗೆಗಳನ್ನು ಸ್ಥಾಪಿಸಲು ಹಿಂದೂಗಳಿಗೆ ಮಾತ್ರ ಅವಕಾಶ ನೀಡುವುದಕ್ಕೆ ನಿರ್ಧರಿಸಿರುವ ನೀತಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.   ಮಾ.22 ಹಾಗೂ 23 ರಂದು ಕಾಪುವಿನಲ್ಲಿ ಮಾರಿಗುಡಿ ದೇವಾಲಯದ ವಾರ್ಷಿಕವಾಗಿ ನಡೆಯುವ ಸುಗ್ಗಿ ಮಾರಿ ಪೂಜೆ ನಡೆಯಲಿದೆ. ಉಡುಪಿಯಲ್ಲಿ ವರದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಭಾರತ ಮುಕ್ತವಾದ ದೇಶ, ಈ ರೀತಿ ಬೆದರಿಕೆ ಹಾಕುವುದಕ್ಕೆ ಯಾರಿಗೂ ಸಾಧ್ಯವಿಲ್ಲ. …

Read More »

ಗಜೇಂದ್ರಗಡ: ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕ ನೀರು ಪಾಲು

ಗಜೇಂದ್ರಗಡ(ಗದಗ): ತಾಲೂಕಿನ ಜಿಗೇರಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ನೀರು ಪಾಲಾದ ಘಟನೆ ಶನಿವಾರ ನಡೆದಿದೆ. ಮೃತ ದುರ್ದೈವಿ ಗಜೇಂದ್ರಗಡ ಪಟ್ಟಣದ ನಿವಾಸಿ ಶಂಕರ ಬೆರಗಿ(25) ಎಂದು ತಿಳಿದು ಬಂದಿದೆ. ಶಂಕರ ತನ್ನ ಸ್ನೇಹಿತರೊಂದಿಗೆ ಜಿಗೇರಿ ಕೆರೆಗೆ ಈಜಲು ತೆರಳಿದ್ದ. ಮೇಲಿಂದ ಕೆರೆಗೆ ಹಾರಿದ ವೇಳೆ ಕೆರೆಯ ಹುದುಲಿಗೆ ಸಿಲುಕಿ ಮೃತಪಟ್ಟಿದ್ದಾನೆ. ಇದನ್ನು ಕಂಡ ಸ್ನೇಹಿತ ಹಾಗೂ ಮತ್ತಿತರರು ತಕ್ಷಣವೇ ನೀರಿಗೆ ಹಾರಿ ಸ್ನೇಹಿತನ ರಕ್ಷಿಸಲು ಪ್ರಯತ್ನಿಸಿದರೂ, ಅದಾಗಲೇ ಶಂಕರ್ ಬೆರಗಿ …

Read More »

ಮೋಳವಾಡದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ : ಸಮರ್ಪಕ ಪುನರ್ವಸತಿ ಕಲ್ಪಿಸಲು ಗ್ರಾಮಸ್ಥರ ಮನವಿ

ಬೆಳಗಾವಿ : ಆಡಳಿತವನ್ನು ಜನರ ಮನೆಬಾಗಿಲಿಗೆ ತೆಗೆದುಕೊಂಡು ಹೋಗುವ ಸರ್ಕಾರದ ಆಶಯದಂತೆ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ ಹಾಕಿರುವ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ಕೃಷ್ಣಾ ಹೊಳೆದಂಡೆಯ ಕಾಗವಾಡ ತಾಲೂಕಿನ ಮೋಳವಾಡ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಿದರು. ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಯನ್ನು ಗ್ರಾಮದ ಹಿರಿಯರು ಅಲಂಕೃತ ಎತ್ತಿನ ಬಂಡಿಯಲ್ಲಿ ಬರಮಾಡಿಕೊಂಡರು. ಝಾಂಜ್, ಡೊಳ್ಳು, ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಮಹಾಲಕ್ಷ್ಮಿ ಮಂದಿರದವರೆಗೆ ಜಿಲ್ಲಾಧಿಕಾರಿಯನ್ನು ಕರೆದೊಯ್ದರು. ಗ್ರಾಮದ …

Read More »

IPL 2022 :ಹೇಗಿದೆ ನೋಡಿ 10 ತಂಡಗಳ ಹೊಸ ಜೆರ್ಸಿ

ಐಪಿಎಲ್ ಸೀಸನ್ 15 ಗಾಗಿ ಎಲ್ಲಾ ತಂಡಗಳ ಜೆರ್ಸಿ ಅನಾವರಣಗೊಂಡಿದೆ. ಈ ಬಾರಿ ಕೆಲ ತಂಡಗಳು ಕಳೆದ ಸೀಸನ್​ನಲ್ಲಿ ಕಣಕ್ಕಿಳಿದ ಮಾದರಿಯ ಜೆರ್ಸಿಯಲ್ಲೇ ಕಾಣಿಸಿಕೊಳ್ಳಲಿದ್ದು, ಇನ್ನು ಕೆಲ ತಂಡಗಳ ಜೆರ್ಸಿಯಲ್ಲಿ ಸಣ್ಣ ಪುಟ್ಟ ಬದಲಾವಣೆಗಳಾಗಿವೆ. ಹಾಗೆಯೇ ಹೊಸ ಎರಡು ತಂಡಗಳಾದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಹೊಸ ಬಣ್ಣದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಹಾಗಿದ್ರೆ 10 ತಂಡಗಳ ಜೆರ್ಸಿ ಹೇಗಿದೆ ನೋಡೋಣ…

Read More »

ವೃದ್ಧಾಶ್ರಮಗಳಲ್ಲಿ ಅನ್ನದಾನ ನಡೆಸಿ ಪುನೀತ್​ಗೆ ಅರ್ಥಪೂರ್ಣ ನಮನ ಸಲ್ಲಿಸಿದ ವಿಶಾಲ್

ಪುನೀತ್ ರಾಜ್​ಕುಮಾರ್ ಸ್ನೇಹಿತ, ತಮಿಳು ನಟ ವಿಶಾಲ್ ನೆಚ್ಚಿನ ಗೆಳೆಯನ ಜನ್ಮದಿನವನ್ನು ಆಚರಿಸಿದ್ದಾರೆ. ಈ ಸಂದರ್ಭದ ವಿಡಿಯೋಗಳನ್ನು ನಟ ಹಂಚಿಕೊಂಡಿದ್ದಾರೆ.ಮಾರ್ಚ್​​ 17ರಂದು ಪುನೀತ್ ರಾಜ್​ಕುಮಾರ್ ಜನ್ಮದಿನವನ್ನು (Puneeth Rajkumar Birth Anniversary) ಅವರಿಲ್ಲ ಎಂಬ ಕೊರಗಿನ ನಡುವೆಯೂ ಸಾರ್ಥಕವಾಗಿ ಆಚರಿಸಲಾಯಿತು. ಕರ್ನಾಟಕದಲ್ಲಿ ಅವರ ಅಭಿಮಾನಿ ಸಂಘಟನೆಗಳು ಹಲವು ಸಾಮಾಜಿಕ ಕಾರ್ಯಗಳ ಮೂಲಕ ಮಾದರಿಯಾದರು. ರಕ್ತದಾನ ಸೇರಿದಂತೆ ಹಲವು ಶಿಬಿರಗಳನ್ನು ಆಯೋಜಿಸಲಾಗಿತ್ತು. ‘ಜೇಮ್ಸ್’ (James) ವೀಕ್ಷಿಸಿದ ನಂತರ ನೇತ್ರದಾನ ಹಾಗೂ ದೇಹದಾನಕ್ಕೆ …

Read More »

ಪ್ರಾಥಮಿಕ ತರಗತಿ ಪುಸ್ತಕದಲ್ಲಿ ದೊಡ್ಮನೆ ಹುಡುಗನ ಯಶೋಗಾಥೆ!

ಬೆಂಗಳೂರು: ಜಾತಿ, ಜನಾಂಗ, ಧರ್ಮ, ಭಾಷೆ ಹೀಗೆ ಎಲ್ಲವನ್ನೂ ಮೀರಿ ಎಲ್ಲರಿಂದಲೂ ಹುಟ್ಟುಹಬ್ಬದ ಶುಭಾಶಯಗಳನ್ನ ಪಡೆದುಕೊಂಡ ಅಪೂರಪದ ವ್ಯಕ್ತಿ ಅಂದರೆ ಅದು ದೊಡ್ಮನೆ ಹುಡುಗ ಪುನೀತ್ ರಾಜಕುಮಾರ್. ಯುವರತ್ನ ಅಪ್ಪುವಿನ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸುವ ಸಾಧ್ಯತೆಯಿದೆ.   ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದು ಕನ್ನಡಿಗರ ಕಣ್ಮಣಿಯಾಗಿ ರಾರಾಜಿಸಿ ಇತ್ತೀಚೆಗಷ್ಟೆ ನಿಧನ ಹೊಂದಿರುವ ಪುನೀತ್ ರಾಜ್‍ಕುಮಾರ್ ಅವರ ಜೀವನ ಗಾಥೆಯನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ಪಠ್ಯವನ್ನಾಗಿ ಮಾಡುವಂತೆ ಹಲವಾರು ಸಂಘ-ಸಂಸ್ಥೆಗಳಿಂದ …

Read More »