Breaking News

Yearly Archives: 2022

ಹಲಾಲ್​-ಜಟ್ಕಾ ಮಧ್ಯ ಇಲ್ಲಿ ಗುಡ್ಡೆ ಮಾಂಸದ್ದೇ ಸದ್ದು; ಹೊಸ ತೊಡಕಿಗೆ ತೊಡಕಿಲ್ಲ..

ಮಂಡ್ಯ: ಯುಗಾದಿ ಹಬ್ಬದ ಮರುದಿನ ಹಲವೆಡೆ ಹೊಸತೊಡಕು ಎಂದು ಆಚರಿಸುತ್ತಾರೆ. ಆ ದಿನ ಭರ್ಜರಿ ಮಾಂಸದಡುಗೆ ಮಾಡಿ ಸವಿಯುತ್ತಾರೆ, ಇನ್ನು ಕೆಲವೆಡೆ ಮೋಜಿಗಾಗಿ ಇಸ್ಪೀಟ್​ನಂಥ ಆಟವೂ ನಡೆಯುತ್ತದೆ. ಈ ಮಧ್ಯೆ ರಾಜ್ಯದಲ್ಲಿ ಮಾಂಸಕ್ಕೆ ಸಂಬಂಧಿಸಿದಂತೆ ಹಲಾಲ್​-ಜಟ್ಕಾ ಸಂಘರ್ಷ ಉಂಟಾಗಿದ್ದು, ನಾಳೆ ಹೊಸ ತೊಡಕಿಗೆ ಯಾರಿಗೆ ಹೆಚ್ಚು ವ್ಯಾಪಾರ, ಯಾರು ಎಲ್ಲಿ ಮಾಂಸ ಖರೀದಿಸಲಿದ್ದಾರೆ ಎಂಬುದು ಕೂಡ ಕುತೂಹಲ ಕೆರಳಿಸಿದೆ.   ಈ ಮಧ್ಯೆ ಮಂಡ್ಯದಲ್ಲಿ ಗುಡ್ಡೆ ಮಾಂಸಕ್ಕೆ ಭರ್ಜರಿ ಬೇಡಿಕೆ ಉಂಟಾಗಿದೆ. …

Read More »

ಅಂಬಾನಿಯನ್ನು ಹಿಂದಿಕ್ಕಿದ ಅದಾನಿ; ಗೌತಮ್ ಈಗ ಏಷ್ಯಾದ ಅತಿ ಶ್ರೀಮಂತ..

ಮುಂಬೈ: ಅದಾನಿ ಗ್ರೂಪ್​ನ ಚೇರ್ಮನ್ ಗೌತಮ್​ ಅದಾನಿ ಇದೀಗ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯಾಗುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್​ನ ಚೇರ್ಮನ್​ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ. ಬ್ಲೂಮ್​ಬರ್ಗ್​ ಬಿಲಿಯನೇರ್ಸ್​ ಇಂಡೆಕ್ಸ್​ನ ಹೊಸ ಪಟ್ಟಿ ಪ್ರಕಾರ ಗೌತಮ್ ಅದಾನಿಯ ಒಟ್ಟು ಆಸ್ತಿ 10,000 ಕೋಟಿ (100 ಬಿಲಿಯನ್) ಡಾಲರ್ ಆಗಿದ್ದು, ಈ ಮೂಲಕ ಅವರು ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಟಾಪ್​-10 ಸ್ಥಾನದಲ್ಲಿದ್ದಾರೆ. ಮತ್ತೊಂದೆಡೆ ಮುಖೇಶ್ ಅಂಬಾನಿ 9,900 ಕೋಟಿ (99 ಬಿಲಿಯನ್​) ಡಾಲರ್ …

Read More »

ಪ್ರೀತಿಯ ಹೆಸರಲ್ಲಿ ಮೋಸ ಹೋದ ಯುವತಿಯೊಬ್ಬಳು ಪ್ರಿಯಕರನ ಮನೆಯ ಮುಂದೆ ಆತ್ಮಹತ್ಯೆಗೆ ಯತ್ನ

ಮೈಸೂರು: ಪ್ರೀತಿಯ ಹೆಸರಲ್ಲಿ ಮೋಸ ಹೋದ ಯುವತಿಯೊಬ್ಬಳು ಪ್ರಿಯಕರನ ಮನೆಯ ಮುಂದೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ. ಪ್ರೀತಿಯ ಬಲೆಗೆ ಬಿದ್ದು ತನ್ನ ದೇಹವನ್ನು ಪ್ರಿಯಕರನಿಗೆ ಒಪ್ಪಿಸಿದ ಯುವತಿ ಇಂದು ವಂಚಿತಳಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾಳೆ. ಕಂದೇಗಾಲ ಗ್ರಾಮದ ಪ್ರಭುಸ್ವಾಮಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಇಬ್ಬರು ಒಂದೇ ಗ್ರಾಮದವರು. ಪ್ರಿಯಕರ ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತೀವ್ರ ಅಸ್ವಸ್ಥಗೊಂಡಿದ್ದ ಆಕೆಯನ್ನು …

Read More »

ಪೆಟ್ರೋಲ್, ಡೀಸೆಲ್ ದರ ಮತ್ತೆ ಗಗನಮುಖಿ ಶ್ರೀಸಾಮಾನ್ಯನ ಜೇಬಿಗೆ ಬೆಲೆ ಏರಿಕೆಯ ಬೆಂಕಿ

ಪಂಚರಾಜ್ಯಗಳ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಶುರುವಾದ ಪೆಟ್ರೋಲ್, ಡೀಸೆಲ್ ದರ ಏರಿಕೆಯ ನಾಗಾಲೋಟ ಮುಂದುವರಿದಿದೆ. ಜಸ್ಟ್​ 12 ದಿನಗಳ ಅವಧಿಯಲ್ಲಿ 10 ಬಾರಿ ತೈಲ ದರ ಪರಿಷ್ಕರಣೆ ಆಗಿದೆ. ಬೆಲೆ ಏರಿಕೆ ಬರೆಗೆ ಶ್ರೀಸಾಮಾನ್ಯ ಬೆಚ್ಚಿಬಿದ್ದಿದ್ದಾನೆ. ದರಪ್ರಹಾರ ಹೀಗೆ ಮುಂದುವರಿದ್ರೆ ದುಬಾರಿ ದುನಿಯಾದಲ್ಲಿ ಹೇಗಪ್ಪ ಜೀವನ ನಡೆಸೋದು ಅಂತಾ ಚಿಂತೆಯ ಬಲೆಗೆ ಸಿಲುಕಿ ಒದ್ದಾಡುವಂತಾಗಿದೆ. ಒಂದೆಡೆ ವಸ್ತ್ರ, ವ್ಯಾಪಾರ ಹಾಗೂ ಆಹಾರ ಸಮರಗಳು ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಿದ್ರೆ ಮತ್ತೊಂದೆಡೆ ಏರಿಕೆಯಾಗ್ತಿರೋ ಪೆಟ್ರೋಲ್, …

Read More »

ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ನಾವು ಹೊರಡಿಸಿಲ್ಲ.:ಪ್ರಭು ಚೌಹಾಣ್

ಬೆಂಗಳೂರು: ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ನಾವು ಹೊರಡಿಸಿಲ್ಲ. ನಮ್ಮ ಇಲಾಖೆಯಿಂದ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಟಿವಿ9ಗೆ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿಕೆ ನೀಡಿದ್ದಾರೆ. ಸ್ಟನ್ನಿಂಗ್ ಕಡ್ಡಾಯ ಆದೇಶ ಮಾಡಿಲ್ಲ. ಪತ್ರ ಬರೆದಿದ್ದಾರೆ ಅಷ್ಟೇ. ಹಲಾಲ್ ಕಟ್ ಮಾಡಬಾರದು ಎಂದು ಪತ್ರ ಬರೆದಿದ್ದಾರೆ ಅಷ್ಟೇ. ಯಾವುದೇ ರೀತಿಯ ಆದೇಶವನ್ನು ಹೊರಡಿಸಿಲ್ಲ. ಪತ್ರದ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ ಎಂದು ಪ್ರಭು ಚೌಹಾಣ್ ತಿಳಿಸಿದ್ದಾರೆ. ಹಲಾಲ್ ಕಟ್ ಹಾಗೂ ಜಟ್ಕಾ …

Read More »

ನಮ್ಮಲ್ಲಿ ಬೇಧಭಾವ ಇಲ್ಲ, ಎಲ್ಲರೂ ಕೂಡಿ ಜಾತ್ರೆ ಮಾಡುತ್ತೇವೆ:ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರೆ

ವಿಜಯಪುರ: ಇಲ್ಲಿನ ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ ಕೋಮು ಸೌಹಾರ್ದತೆಗೆ ವೇದಿಕೆಯಾಗಿದೆ. ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ವಿಜಯಪುರ ತಾಲೂಕಿನ ಕತಕನಹಳ್ಳಿಯಲ್ಲಿ ನಡೆದ ಜಾತ್ರೆಯಲ್ಲಿ ಮುಸ್ಲಿಂ ವರ್ತಕರು ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಜಾತಿ, ಧರ್ಮ ಬದಿಗಿಟ್ಟು ಗ್ರಾಮಸ್ಥರು ಒಂದಾಗಿ ಜಾತ್ರೆ ಮಾಡುತ್ತಿದ್ದಾರೆ. ರಾಜ್ಯದ ವಿವಿಧೆಡೆ ಹಿಂದೂ ದೇವಸ್ಥಾನಗಳಲ್ಲಿ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರದ ನಡುವೆ ಸಾಮರಸ್ಯದ ಘಟನೆ ನಡೆದಿದೆ. ದೇವಸ್ಥಾನಗಳಲ್ಲಿ, ಜಾತ್ರೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧದ ಮಾತು …

Read More »

ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವುದಿಲ್ಲ, : ಅಮಿತ್ ಶಾ

ಬೆಂಗಳೂರು: ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವುದಿಲ್ಲ. ಬೇರೆ ಪಕ್ಷಗಳೊಂದಿಗೂ ಚುನಾವಣಾ ಪೂರ್ವ ಹೊಂದಾಣಿಕೆ ಇಲ್ಲ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದಂತೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. ಅವಧಿ ಪೂರ್ವ ಚುನಾವಣೆ ನಡೆಯಲ್ಲ. ಇದಕ್ಕೆ ಕಾರಣವನ್ನು ಕರೆ ಮಾಡಿ ತಿಳಿಸುವುದಾಗಿ ಅಮಿತ್ ಶಾ ಹೇಳಿರುವುದು ತಿಳಿದುಬಂದಿದೆ. ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನ ರಾಜ್ಯ …

Read More »

ರಾಜ್ಯದಲ್ಲಿ ಲಿಂಗ ಪರಿವರ್ತನೆ ಜಾಲ ಸಕ್ರಿಯವಾಗಿದೆಯಾ? ಬಚಾವ್​ ಆಗಿ ಬಂದ ವಿಜಯನಗರ ಯುವಕನ ಕತೆಯಿದು

ವಿಜಯನಗರ: ರಾಜ್ಯದಲ್ಲಿ ಲಿಂಗ ಪರಿವರ್ತನೆ ಮಾಡುವ ಜಾಲ ಸಕ್ರಿಯವಾಗಿದೆಯಾ ಎಂಬ ಪ್ರಶ್ನೆ ಮೂಡಿದೆ. ಮಂಗಳ‌ಮುಖಿಯರ ಹುಚ್ಚಾಟಕ್ಕೆ ಹೂವಿನ ಹಡಗಲಿ ತಾಲೂಕಿನ ಗ್ರಾಮವೊಂದರ ಯುವಕ ಹೈರಾಣಾಗಿರುವ ಘಟನೆ ನಡೆದಿದೆ. ಹಳ್ಳಿಯಲ್ಲಿ ‌ಕೆಲಸಕ್ಕಾಗಿ‌ ಪರದಾಡೋ ಹುಡುಗರನ್ನು ಟಾರ್ಗೆಟ್ ಮಾಡ್ತಾರಂತೆ ಈ ಮಂಗಳ ಮುಖಿಯರು? ಕೆಲಸ ಕೊಡಿಸುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಲಿಂಗಪರಿವರ್ತನೆ ಮಾಡಿ ಭಿಕ್ಷಾಟನೆಗೆ ಕಳುಹಿಸುತ್ತಾರೆಂಬ ಆರೋಪ ಕೇಳಿಬಂದಿದೆ. ಇದೇ ರೀತಿ ಕೆಲಸ ಕೊಡಿಸುವುದಾಗಿ 19 ವರ್ಷದ ಹಡಗಲಿ ತಾಲೂಕಿನ ಗ್ರಾಮವೊಂದರ ಯುವಕನನ್ನು ಕರೆದುಕೊಂಡು …

Read More »

ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂ:C.M. ಬೊಮ್ಮಾಯಿ

ಬೆಂಗಳೂರು: ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂ.ಗಳನ್ನು ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಘೋಷಿಸಿದರು. ಇಂದು ಕೋರಮಂಗಲದ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಗತಿಪರ ಸಮಾಜ, ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಪೊಲೀಸರ ನಿಷ್ಠೆ, ದಕ್ಷತೆಯಿಂದ ಸಾಧ್ಯವಿದೆ. ಅಪರಾಧ, ಅಪರಾಧಿಗಳೊಂದಿಗೆ ರಾಜಿಯಿಲ್ಲದೆ ಕೆಲಸ ಮಾಡಿದರೆ ಅಪರಾಧ ತನ್ನಿಂದ ತಾನೇ ಕಡಿಮೆಯಾಗುತ್ತದೆ. ರಾಜ್ಯ ಸರ್ಕಾರಕ್ಕೆ ನಿಮ್ಮ ಸೇವೆಗಳ ಬಗ್ಗೆ ಹೆಮ್ಮೆ …

Read More »

ವನ್ಯಜೀವಿ ಸಂರಕ್ಷಣೆಯ ಸಂದೇಶಕ್ಕೆ 249 ಕಿ.ಮೀ ಸೈಕಲ್ ತುಳಿದ ಅರಣ್ಯಾಧಿಕಾರಿ

ಮುಂಬೈ: ಅರಣ್ಯ ಅಧಿಕಾರಿಯೊಬ್ಬರಿಗೆ ಪುಣೆಯಿಂದ ಕೊಲ್ಲಾಪುರಕ್ಕೆ ವರ್ಗಾವಣೆಯಾಗಿತ್ತು. ಅಧಿಕಾರ ವಹಿಸಿಕೊಳ್ಳವ ಶುಭ ಸಂದರ್ಭದಲ್ಲಿ ಪರಿಸರ ಜಾಗೃತಿ ಮೂಡಿಸಲು 249 ಕಿ.ಮೀ ಸೈಕಲ್ ತುಳಿದು ಎಲ್ಲಡೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರದ ಅರಣ್ಯ ಅಧಿಕಾರಿ ನಾನಾ ಸಾಹೇಬ್ ಲಾಡ್ಕತ್, ಬಿರು ಬಿಸಿಲ ನಡುವೆ ಕೆಲ ಘಟ್ಟ ಪ್ರದೇಶಗಳನ್ನು ದಾಟಿ 17 ಗಂಟೆಗಳ ನಂತರ ಕೊಲ್ಲಾಪುರ ತಲುಪಿದ್ದಾರೆ. ಈ ವೇಳೆ 12 ಗಂಟೆಗಳ ಕಾಲ ಸೈಕಲ್ ತುಳಿದಿದ್ದಾರೆ. ಲಾಡ್ಕತ್ ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯದ ಸಂರಕ್ಷಣಾಧಿಕಾರಿ ಮತ್ತು …

Read More »