Breaking News

Yearly Archives: 2022

ಶ್ರೀಶೈಲದಲ್ಲಿ ಮಲಗಿದ್ದ ಕೆಎಸ್‌ಆರ್‌ಟಿಸಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ

ಬಾಗಲಕೋಟೆ: ಆಂಧ್ರ ಪ್ರದೇಶದ ಪ್ರಸಿದ್ಧ ಯಾತ್ರಾ ಕ್ಷೇತ್ರ ಶ್ರೀಶೈಲದಲ್ಲಿ ಕನ್ನಡಿಗರ ಮೇಲೆ ಮತ್ತೆ ಹಲ್ಲೆ ನಡೆದಿದೆ. ಕೆಎಸ್‍ಆರ್‌ಟಿಸಿ ಬಸ್ ಚಾಲಕ ಬಸವರಾಜ್ ಬಿರಾದಾರ್ ಮೇಲೆ  10-12 ಜನರ ಗುಂಪೊಂದು ಹಲ್ಲೆ ಮಾಡಿದೆ.  ಗಾಜು ಪುಡಿ-ಪುಡಿ ಮಾಡಿದ ಕಿಡಿಗೇಡಿಗಳು, ಕಟ್ಟೆಯ ಮೇಲೆ ಮಲಗಿದ್ದ ಬಿರಾದಾರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.ಅಶ್ಲೀಲವಾಗಿ ನಿಂದಿಸಿ, ಕರ್ನಾಟಕದವನು ಇಲ್ಲೇಕೆ ಇದ್ದೀಯಾ? ಅಂತಲೇ ಬಸ್ ಮೇಲೆ ಕಲ್ಲು ತೂರಿದ್ದಾರೆ. ಪ್ರಶ್ನಿಸಿದ್ದಕ್ಕೆ ನನ್ನ ಮುಖ, ಕಾಲಿಗೆ ಕಲ್ಲಿನಿಂದ ಹೊಡೆದ್ದಾರೆ ಎಂದು …

Read More »

ವಿಷಕಾರಿ ಹಾವು ಕಚ್ಚಿ ನಾಲ್ಕು ವರ್ಷದ ಮಗು ಸಾವು

ಚಿಕ್ಕೋಡಿ(ಬೆಳಗಾವಿ): ವಿಷಕಾರಿ ಹಾವು ಕಚ್ಚಿ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದಲ್ಲಿ ನಡೆದಿದೆ.   ಇಶಾಂತ್ ರಾಘವೇಂದ್ರ ಕಾಂಬಳೆ (04) ಮೃತ ಮಗು. ಯರನಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ಮಗು ಮನೆಯಲ್ಲಿ ಮಲಗಿದ್ದಾಗ ವಿಷಪೂರಿತ ಹಾವು ಕಚ್ಚಿದ ಪರಿಣಾಮ ಮಗು ಸಾವನ್ನಪ್ಪಿದೆ. ಹಾವು ಕಚ್ಚಿದ ಪರಿಣಾಮ ಮಗು ಅಳಲು ಆರಂಭಿಸಿದಾಗ ಮಗುವನ್ನು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ …

Read More »

ಕಿರಿಕ್ ಪಾರ್ಟಿ’ 2 ಮಾಡೋಕೆ ರೆಡಿಯಾದ ಸಿಂಪಲ್ ಸ್ಟಾರ್

ಕಾಲೇಜ್ ಕಥೆಯನ್ನ ತೆರೆಯ ಮೇಲೆ ಎಳೆ ಎಳೆಯಾಗಿ ತೋರಿಸಿಕೊಟ್ಟ ಸ್ಯಾಂಡಲ್‌ವುಡ್‌ನ ಬ್ಲಾಕ್ ಬಸ್ಟರ್ ಸಿನಿಮಾ `ಕಿರಿಕ್ ಪಾರ್ಟಿ’ ಟೀಮ್‌ನಿಂದ ಈಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಕಿರಿಕ್ ಪಾರ್ಟಿ ಸೀಕ್ವೆಲ್ ಮಾಡೋಕೆ ರಕ್ಷಿತ್ ಶೆಟ್ಟಿ ಆ್ಯಂಡ್ ಟೀಮ್ ಯೋಜನೆ ಹಾಕಿಕೊಂಡಿದೆ. ರಕ್ಷಿತ್ ಶೆಟ್ಟಿ ಕೆರಿಯರ್‌ನ ದಿಕ್ಕನ್ನೇ ಬದಲಿಸಿದ ಸಿನಿಮಾ `ಕಿರಿಕ್ ಪಾರ್ಟಿ’ ಕಥೆಯನ್ನ ಎಲ್ಲರೂ ನೋಡಿ ಮೆಚ್ಚಿಕೊಂಡಿದ್ದರು. ಕರ್ಣ ಮತ್ತು ಸಾನ್ವಿ ಲವ್‌ಸ್ಟೋರಿಯಿಂದ ಹಿಡಿದು ಹಾಡುಗಳು ಸೂಪರ್ ಡೂಪರ್ ಹಿಟ್ …

Read More »

ಸಿದ್ದರಾಮಯ್ಯ ಅವರ ಸುತ್ತಲೂ ಇರುವವರು ಭಯೊತ್ಪಾದಕರು:

ಮೈಸೂರು: ಸಿದ್ದರಾಮಯ್ಯ ಅವರ ಸುತ್ತಲೂ ಇರುವವರು ಭಯೊತ್ಪಾದಕರು ಆದರೂ ಅವರಿಗೆ ಕಾಣುತ್ತಿಲ್ಲ. ಹಾಗಾಗಿ ಅವರಿಗೆ ದೃಷ್ಟಿ ದೋಷವಿರಬಹುದು ಅದನ್ನು ಸರಿಪಡಿಸಿಕೊಳ್ಳಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.   ಮೈಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರ್​ಎಸ್​ಎಸ್​ ನೂರಾರು ವಿದ್ಯಾಸಂಸ್ಥೆಗಳನ್ನು ಕಟ್ಟಿದೆ, ಶುಲ್ಕವಿಲ್ಲದೇ ಕೆಲವು ಕಡೆ ಶಿಕ್ಷಣವನ್ನೂ ನೀಡುತ್ತಿದೆ. ಇವೆಲ್ಲಾ ಅವರಿಗೆ ಕಾಣುವುದಿಲ್ಲ. ನಿಮ್ಮದೇ ಶಾಸಕರ ಮನೆಗೆ ಬೆಂಕಿ ಬಿತ್ತು, ಅವರಿಗೆ ನಿಮ್ಮ ಬೆಂಬಲಿಗರೇ ಜಾಮೀನು ಕೊಡಿಸಿದ್ದಾರೆ. ಹೀಗಾದರೂ ಕಾಣುತ್ತಿಲ್ಲವೆಂದರೆ ನಿಮಗೆ …

Read More »

ಸುಪ್ರೀಂ ಆದೇಶ ಪಾಲಿಸದಿದ್ರೆ ಗುಂಡು ಹಾರಿಸ್ತೀವಿ.:ಮುತಾಲಿಕ್ ಕಿಡಿ

ಹುಬ್ಬಳ್ಳಿ: ಲೌಡ್​ಸ್ಪೀಕರ್​ ಅಳವಡಿಕೆ ಸಂಬಂಧ ಸುಪ್ರೀಂ ಕೋರ್ಟ್​ ನೀಡಿದ ಆದೇಶವನ್ನು ಪಾಲಿಸದವರ ಮೇಲೆ ಗುಂಡು ಹಾರಿಸುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್​ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತಾಲಿಕ್​, ಒಂದು ವರ್ಷದಿಂದ ಲೌಡ್​ಸ್ಪೀಕರ್​ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಸುಪ್ರೀಂಕೋರ್ಟ್​ ಆದೇಶ ಪಾಲನೆಯಾಗಿಲ್ಲ. ಹಿಂದುಗಳ ಬೆಂಬಲದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವೂ ನ್ಯಾಯಾಲಯದ ಆದೇಶಕ್ಕೆ ಕಿಮ್ಮತ್ತು ನೀಡಿಲ್ಲ. ಜೂ. 8ರಂದು ಬಿಜೆಪಿಯ ಶಾಸಕರು, ಮಂತ್ರಿಗಳ …

Read More »

ಪತ್ನಿಯ ಸೀಮಂತಕ್ಕೆಂದು ರಜೆ ಮೇಲೆ ಊರಿಗೆ ತೆರಳುತ್ತಿದ್ದ ಯೋಧ ರಸ್ತೆ ಅಪಘಾತದಲ್ಲಿ ಸಾವು

ಬೆಳಗಾವಿ: ಪತ್ನಿಯ ಸೀಮಂತಕ್ಕೆಂದು ರಜೆ ಮೇಲೆ ಊರಿಗೆ ತೆರಳುತ್ತಿದ್ದ ಯೋಧ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ. ಸವದತ್ತಿ ತಾಲೂಕಿನ ಹೊಸೂರು ಗ್ರಾಮದ ಯೋಧ ಪ್ರಕಾಶ ಸಂಗೊಳ್ಳಿ (29) ಮೃತರು. ಬೆಳಗಾವಿಯ ಎಂಎಲ್‌ಐಆರ್​ಸಿಯಲ್ಲಿ ಪ್ರಕಾಶ ಅವರು ಕೆಲಸ ಮಾಡುತ್ತಿದ್ದರು. ಜೂ.5ರಂದು ಪತ್ನಿಯ ಸೀಮಂತ ಕಾರ್ಯಕ್ರಮ ನಿಗದಿಯಾಗಿತ್ತು. ಹಾಗಾಗಿ ರಜೆ ಹಾಕಿ ಗುರುವಾರ ರಾತ್ರಿ ಊರಿಗೆ ಬೈಕ್​ನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು …

Read More »

ನಾನು ಏನು ಹೇಳುತ್ತೇನೋ ಅದನ್ನು ಮಾತ್ರ ಮಾಡುತ್ತೇನೆ. ಶುರುವಾಯ್ತು ಉಪ್ಪಿ ‘UI’

ಬೆಂಗಳೂರು: ‘ಉಪ್ಪಿ 2’ ಬಿಡುಗಡೆಯಾಗಿ ಸುಮಾರು ಏಳು ವರ್ಷಗಳ ನಂತರ ಉಪೇಂದ್ರ ಕೊನೆಗೂ ನಿರ್ದೇಶನಕ್ಕಿಳಿದಿದ್ದಾರೆ. ಅವರ ಹೊಸ ಚಿತ್ರ ‘ಯು/ಐ’ ಶುಕ್ರವಾರ ಅಧಿಕೃತವಾಗಿ ಪ್ರಾರಂಭವಾಗಿದೆ. ಲಹರಿ ಸಂಸ್ಥೆ ಮತ್ತು ಕೆ.ಪಿ. ಶ್ರೀಕಾಂತ್ ಜಂಟಿಯಾಗಿ ನಿಮಿರ್ಸುತ್ತಿರುವ ಈ ಚಿತ್ರದ ಮುಹೂರ್ತ ಬಂಡೆ ಮಾಂಕಾಳಮ್ಮ ದೇವಸ್ಥಾನದಲ್ಲಿ ನಡೆದಿದೆ. ಈ ಮುಹೂರ್ತಕ್ಕೆ ಸುದೀಪ್​ ಮುಖ್ಯ ಅತಿಥಿಯಾಗಿ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್​ ಮಾಡಿದರು. ಶಿವರಾಜಕುಮಾರ್​, ಧನಂಜಯ್​, ವಸಿಷ್ಠ ಸಿಂಹ ಮುಂತಾದವರು ಹಾಜರಿದ್ದು, ಚಿತ್ರತಂಡಕ್ಕೆ ಶುಭ …

Read More »

ಬದಲಾಗಲಿದೆಯೇ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ?: ಸಚಿವರ ಪ್ರತಿಕ್ರಿಯೆ ಇಲ್ಲಿದೆ..

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹೆಸರು ಬದಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ಈ ಭಾಗದ ಅಭಿಪ್ರಾಯಕ್ಕೆ ಅನುಗುಣವಾಗಿಯೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಅಭಿಪ್ರಾಯಕ್ಕೆ ವಿರೋಧವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದರು.   ಜಿಲ್ಲೆಗೊಂದು ನೂತನ ವಿಶ್ವ ವಿದ್ಯಾಲಯ ಸ್ಥಾಪನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಆರು ವಿವಿ ಸ್ಥಾಪಿಸಲಾಗಿದೆ. ಇನ್ನೊಂದು ವಿವಿ ಸ್ಥಾಪಿಸಬೇಕೆಂಬ ಚರ್ಚೆಯೂ ಇದೆ. ಶಿಕ್ಷಣದಲ್ಲಿ ಗುಣಮಟ್ಟ ಇರಬೇಕು. ಆ ನಿಟ್ಟಿನಲ್ಲಿ …

Read More »

ಬೈಕ್​ಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಉರುಳಿತು ಸರ್ಕಾರಿ ಬಸ್​!

ಹಾವೇರಿ: ವೇಗವಾಗಿ ಚಲಿಸುತ್ತಿದ್ದ ಸರ್ಕಾರಿ ಬಸ್​ ಬೈಕ್​ಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕದ ಹಳ್ಳದಲ್ಲೇ ಉರುಳಿಬಿದ್ದಿರುವ ಘಟನೆ ನಡೆದಿದೆ. ಜಿಲ್ಲೆಯ ಶಿಗ್ಗಾವಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕಂದಕಕ್ಕೆ ಬಸ್​ ಉರುಳಿದ್ದು, ಸದ್ಯ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.   ಹಾವೇರಿ ಬಸ್​ ಡಿಪೋಗೆ ಸೇರಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್​​​ ಉರುಳಿಬಿದ್ದಿದೆ. ಘಟನೆಗೆ ಚಾಲಕನ ಅಜಾಗರೂಕತೆ ಹಾಗೂ ವೇಗದ ಚಾಲನೆಯೇ ಕಾರಣ ಎಂದು ಹೇಳಲಾಗಿದೆ. ಬಸ್​​ನಲ್ಲಿದ್ದ ನಾಲ್ಕು ಪ್ರಯಾಣಿಕರು ಗಾಯಗೊಂಡಿದ್ದು, …

Read More »

ಬೆಳಗಾವಿ: ನಗರದಲ್ಲಿ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಕುಡುಕನಿಗೆ ಸಾರ್ವಜನಿಕರಿಂದ ಬಿತ್ತು ಗೂಸಾ..

ಬೆಳಗಾವಿ: ನಗರದಲ್ಲಿ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಕುಡುಕನನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ಕ್ಲಬ್ ರಸ್ತೆಯ ನೀರಾವರಿ ಇಲಾಖೆಯ ಕಚೇರಿ ಎದುರು ಶುಕ್ರವಾರ ನಡೆದಿದೆ. ಹಿರಿಯ ಅಧಿಕಾರಿಗಳು ಮಾತ್ರವಲ್ಲದೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಾಮಾನ್ಯ ಜನರು ಸಂಚರಿಸುತ್ತಾರೆ. ಇಂಥ ಸ್ಥಳದಲ್ಲಿ ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಕುಡುಕನಿಗೆ ಸಾರ್ವಜನಿಕರು ಥಳಿಸಿದ್ದಾರೆ. ವಾಹನ ದಟ್ಟನೆ ಕಂಡ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಪಟ್ಟರೂ ಕುಡಿದ ಮತ್ತಿನಲ್ಲಿದ್ದ ಕುಡುಕ …

Read More »