ಬೆಳಗಾವಿಯ ಪಾಟೀಲ್‍ಗಲ್ಲಿಯಲ್ಲಿ ಒಳಚರಂಡಿ ಬ್ಲಾಕ್ ಆಗಿರುವ ಕಾರಣ ಮಳೆಯ ನೀರು ಹರಿದು ಹೋಗದೇ ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಇಲ್ಲಿನ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಕೂಡಲೇ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಡಬೇಕೆಂದು ಪಾಟೀಲ್ ಗಲ್ಲಿಯ ನಿವಾಸಿ ಮನವಿ ಮಾಡಿದ್ದಾರೆ. ಹೌದು ಬೆಳಗಾವಿ ನಗರದ ಪಾಟೀಲ್‍ಗಲ್ಲಿಯ ಮನೆ ನಂ 561/62 ರಲ್ಲಿ ಚಿರಾಗ್ ಪೊರ್‍ವಾಲ್ ರವರಿಗೆ ಸೇರಿದ ಮನೆಯಿದೆ. ಇಲ್ಲಿ ಒಳಚರಂಡಿಯಿಲ್ಲದ ಕಾರಣ ನಗರದಲ್ಲಿ ವಿಪರೀತವಾಗಿ ಮಳೆ ಸುರಿದರೆ ನೀರು ಸರಾಗವಾಗಿ ಹರಿದು …
Read More »Yearly Archives: 2022
ದರೋಡೆ ಮಾಡ್ತಿದ್ದ ಮಂಕಿ ಕ್ಯಾಪ್ ಕಳ್ಳರನ್ನು ಬಂಧಿಸಿದ ಪೊಲೀಸರು
ವಿಜಯಪುರ :ಜಿಲ್ಲೆಯ ಹೆದ್ದಾರಿಗಳಲ್ಲಿ ಮಂಕಿ ಕ್ಯಾಪ್ ಧರಿಸಿ ದರೋಡೆ ಮಾಡ್ತಿದ್ದ ಕುಖ್ಯಾತರನ್ನು ಗಾಂಧಿಚೌಕ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ನಗರ ಬಸ್ ನಿಲ್ದಾಣ ಬಳಿಯ ನಯೇರಾ ಪೆಟ್ರೋಲ್ ಪಂಪ್ ಬಳಿ ದರೋಡೆ ಯತ್ನ ನಡೆಯುತ್ತಿರೋ ಖಚಿತ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ನಬಿರಸೂಲ ಜಿಲಾನಿ ಕೋರವಾರ, ಅವಿನಾಶ ರಮೇಶ ಬಾಗಡೆ, ಅಲ್ತಾಫ್ ಕುತುಬುದ್ದೀನ್ ಐನಾಪುರ, ಮತೀನ ಖಲೀಲಅಹ್ಮದ್ ಖಾಜಿ, ಸಮೀರ ಅಬ್ದುಲ್ ರಜಾಕ್ ಯರಗಲ್ ಎಂಬುವರನ್ನು ಬಂಧಿಸಲಾಗಿದೆ. ಸರ್ಫರಾಜ್ ಎಂಬಾತ ಪರಾರಿಯಾಗಿದ್ದಾನೆ. …
Read More »ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ.
ಬೆಳಗಾವಿ, : ಮುಸ್ಲಿಮರಿಲ್ಲದ ಮೊಹರಂ ಆಚರಣೆಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?. ಮುಸಲ್ಮಾನರ ಸಂಖ್ಯೆಯೇ ಇಲ್ಲದ ಬೆಳಗಾವಿಯ ಹಳ್ಳಿಯೊಂದು ಈ ಹಬ್ಬವನ್ನು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ. ಬೆಳಗಾವಿಯ ಸವದತ್ತಿ ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ವರ್ಷಕ್ಕೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಮೊಹರಂ ಆಚರಿಸಲಾಗುತ್ತದೆ. ಮೊಹರಂ, ರಂಜಾನ್ ನಂತರ ಎರಡನೇ ಪವಿತ್ರ ಹಬ್ಬವಾಗಿದೆ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳು ಬರುತ್ತದೆ. ಈ ವರ್ಷ ಜುಲೈ 31 ರಂದು ಪ್ರಾರಂಭವಾಗಿ ಆಗಸ್ಟ್ …
Read More »ಮಳೆಗೆ ಮನೆ ಗೋಡೆ ಕುಸಿತ: ತಾಯಿ ಸಾವು, ಮಗ ಆಸ್ಪತ್ರೆಗೆ ದಾಖಲು
ಶಿವಮೊಗ್ಗ: ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮನೆ ಗೋಡೆ ಕುಸಿತ ಉಂಟಾಗಿ ಮನೆಯಲ್ಲಿದ್ದ ತಾಯಿ ಸಾವನ್ನಪ್ಪಿ, ಮಗ ಗಾಯಗೊಂಡಿರುವ ಘಟನೆ ಭದ್ರಾವತಿ ತಾಲೂಕಿನ ಕಾವಗೊಂಡನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಸುಜಾತ(60) ಮೃತಪಟ್ಟಿದ್ದು, ಇವರ ಮಗ ಕೃಷ್ಣಮೂರ್ತಿ(40) ಅವರ ಕಾಲಿಗೆ ಗಾಯವಾಗಿದ್ದು,ಇವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ 9:30 ರ ಹೊತ್ತಿಗೆ ಟಿವಿ ನೋಡುತ್ತಿರುವಾಗ ಏಕಾಏಕಿ ಮನೆಯ ಗೋಡೆ ಕುಸಿತವಾಗಿ ಇವರ ಮೇಲೆ ಬಿದ್ದಿದೆ. ಸ್ಥಳಕ್ಕೆ ಭದ್ರಾವತಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ …
Read More »ಬೆಳಗಾವಿ: ಭಾರಿ ಮಳೆಗೆ ನಾಲ್ಕು ಸೇತುವೆಗಳು ಮುಳುಗಡೆ, ಸಂಚಾರ್ ಬಂದ್
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೆಳಹಂತದ ನಾಲ್ಕು ಸೇತುವೆಗಳು ಜಲಾವೃತವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸೇತುವೆ ಎರಡು ಬದಿಗೆ ಪೊಲೀಸರು ಬ್ಯಾರಿಕೇಡ್ ಹಾಕಿ ಜನರ ಓಡಾಟವನ್ನು ಬಂದ್ ಮಾಡಿದ್ದಾರೆ. ನಿಪ್ಪಾಣಿ ತಾಲೂಕಿನ ದೂಧಗಂಗಾ ನದಿಗೆ ಕಟ್ಟಲಾದ ಕಾರದಗಾ-ಭೋಜ್, ವೇದಗಂಗಾ ನದಿಯಿಂದ ಭೋಜವಾಡಿ ಕುನ್ನೂರ-ಸಿದ್ನಾಳ ಅಕ್ಕೋಳ ಸೇತುವೆ ಹಾಗೂ ಜತ್ರಾಟ-ಭೀಮಶಿ ಸೇತುವೆಗಳು ಜಲಾವೃತವಾಗಿವೆ. ಸದ್ಯ ಮಹಾರಾಷ್ಟ್ರ ಘಟ್ಟ ಪ್ರದೇಶ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಕೃಷ್ಣಾ …
Read More »ರಮೇಶ್ ಕುಮಾರ್ ನಾಲಿಗೆ -ಮಿದುಳಿನ ಸಂಪರ್ಕ ಕಳೆದುಕೊಂಡಿದ್ದಾರೆ: ಕುಮಾರಸ್ವಾಮಿ ಗರಂ
ಬೆಂಗಳೂರು: ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬಂಗಾರಪೇಟೆ ತಾಲ್ಲೂಕಿನ ಯರಗೋಳ್ ಜಲಾಶಯ ಉದ್ಘಾಟನೆ ವಿಳಂಬ ಕುರಿತು ಮಾತನಾಡಿದ್ದ ಕೆ.ಆರ್. ರಮೇಶ್ ಕುಮಾರ್, ‘ನರಗಳ ದೌರ್ಬಲ್ಯ ಇದ್ದಾಗ ಮಕ್ಕಳು ಆಗುವುದು ವಿಳಂಬವಾಗುತ್ತದೆ’ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು. ರಮೇಶ್ ಕುಮಾರ್ ಹೇಳಿಕೆಗೆ ಟ್ವಿಟರ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ‘ವಿಕೃತ, ಕೊಳಕು ಮನಃಸ್ಥಿತಿಯ ಮಾಜಿ ಸ್ಪೀಕರ್ ರಮೇಶ್ ಕುಮಾರ್, ನಾಲಿಗೆ ಮತ್ತು ಮಿದುಳಿನ …
Read More »ಸ್ವಾತಂತ್ರ್ಯ ಹೋರಾಟಕ್ಕೆ ಈ ಸೋಗಲಾಡಿ ಸಿದ್ದಸೂತ್ರದಾರನ ಕೊಡುಗೆ ಏನು?: H.D.K.
ಬೆಂಗಳೂರು : ಸ್ವಯಂಘೋಷಿತ ಸಂವಿಧಾನ ರಕ್ಷಕ ಸಿದ್ದರಾಮಯ್ಯ ಮತ್ತೆ ಜೆಡಿಎಸ್ ಬಗ್ಗೆ ವಿಷಕಾರಿಕೊಂಡಿದ್ದಾರೆ. ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ವಿಕಿಪೀಡಿಯಾ ಪ್ರಕಾರ, ನಿಮ್ಮ ಜನ್ಮ ವರ್ಷ 1947. ಹುಟ್ಟಿದ ಕೂಡಲೇ ಪಂಚೆ ಕಟ್ಟಿ ಸ್ವಾತಂತ್ಯ ಸಂಗ್ರಾಮಕ್ಕೆ ಧುಮುಕಿದರಾ ಮಿಸ್ಟರ್ ಸಿದ್ದರಾಮಯ್ಯ? ಜೆಡಿಎಸ್ ಸ್ಥಾಪನೆ ಆಗಿದ್ದೇ 1999ರಲ್ಲಿ. ಆಗ ನೀವು ಎಲ್ಲಿದ್ದೀರಿ? ನಿಮಗೂ ಕಾಂಗ್ರೆಸ್ ಪಕ್ಷಕ್ಕೂ ಏನು ಸಂಬಂಧ? ನೀವು …
Read More »ಬಿಜೆಪಿಯವರದ್ದು ಸಬ್ ಕಾ ವಿಕಾಸ್ ಅಲ್ಲ, ಸಬ್ ಕಾ ಸರ್ವನಾಶ್: ಸಿದ್ದರಾಮಯ್ಯ
ಮೈಸೂರು : ‘ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ ಸಬ್ ಕಾ ವಿಕಾಸ್ ಅಲ್ಲ, ಸಬ್ ಕಾ ಸರ್ವನಾಶ್ ಆಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಜಿಲ್ಲೆಯ ನಂಜನಗೂಡು ತಾಲ್ಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ತಗಡೂರು ಗ್ರಾಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಿಜೆಪಿ …
Read More »ಈ ಬಾರಿ ಗಣೇಶೋತ್ಸವಕ್ಕೆ ನಿರ್ಬಂಧಗಳಿಲ್ಲ: ಕಂದಾಯ ಸಚಿವ ಆರ್.ಅಶೋಕ
ಬೆಂಗಳೂರು: ಈ ವರ್ಷದ ಗಣೇಶೋತ್ಸವವನ್ನು ಕೋವಿಡ್ ಪೂರ್ವದಂತೆ ನಡೆಸಲು ಅನುಮತಿ ನೀಡಲಾಗುವುದು. ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು. ಈ ಸಂಬಂಧ ಮುಖ್ಯಮಂತ್ರಿಯವರ ಜತೆ ಚರ್ಚೆ ನಡೆಸಲಾಗಿದೆ. ಅವರು ಒಪ್ಪಿಗೆ ನೀಡಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಳೆದ ಎರಡು ವರ್ಷ ಕೋವಿಡ್‌ನಿಂದಾಗಿ ಸಾರ್ವಜನಿಕ ಗಣೇಶೋತ್ಸವಗಳ ಮೇಲೆ ನಿರ್ಬಂಧಗಳನ್ನು ಹೇರಲಾಗಿತ್ತು. ಸಾರ್ವಜನಿಕರ ಪ್ರಾಣ ಒದಗಿಸುವುದು ಮುಖ್ಯವಾಗಿತ್ತು. ಸರ್ಕಾರದ ಮನವಿಗೆ ಸಾರ್ವಜನಿಕರು ಸ್ಪಂದಿಸಿದ್ದರು. ಈ ಬಾರಿ ಯಾವುದೇ …
Read More »ಬೆಳಗಾವಿಯಲ್ಲಿ ಮಳೆ ಅಬ್ಬರಕ್ಕೆ ಮನೆ ಕುಸಿತ; ಮಹಿಳೆಗೆ ಗಂಭೀರ ಗಾಯ, ನಾಲ್ಕು ವಾಹನಗಳು ಜಖಂ
ಬೆಳಗಾವಿ: ಜಿಲ್ಲೆಯಾದ್ಯಂತ ಸುರಿಯುತ್ತಿವ ಭಾರಿ ಮಳೆಯಿಂದಾಗಿ ಮನೆಯೊಂದು ಸಂಪೂರ್ಣವಾಗಿ ನೆಲಸಮವಾಗಿರುವ ಘಟನೆ ತಾಲೂಕಿನ ವಡಗಾಂವಿ ಪ್ರದೇಶದಲ್ಲಿ ನಡೆದಿದೆ. ವಡಗಾವಿಯ ಭಾರತ ನಗರದ ಎಡರನೇ ಕ್ರಾಸ್ನಲ್ಲಿ ಆನಂದ ಕಲ್ಲಪ್ಪ ಬಿರ್ಜೆ ಎಂಬುವವರಿಗೆ ಸೇರಿದ ಮನೆ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ನೆಲಸಮವಾಗಿದೆ. ಮನೆಯಲ್ಲಿ ಯಾರೂ ಇರದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಭಾನುವಾರ ಸಂಜೆಯಷ್ಟೇ ಮನೆಯಲ್ಲಿದ್ದ ಏಳು ಜನ ಕುಟುಂಬ ಸದಸ್ಯರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿತ್ತು. ಮನೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ …
Read More »