Breaking News

Yearly Archives: 2022

ಆ.17 ರಂದು ನಾಳೆ ಮಹಾಲಿಂಗಪುರ ಬಂದ್: ಸಾಮೂಹಿಕ ನಾಯಕತ್ವದಡಿ ಹೋರಾಟ

ಮಹಾಲಿಂಗಪುರ: ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡದ ಸರ್ಕಾರದ ಕಾರ್ಯವೈಖರಿ ಖಂಡಿಸಿ ಆ.17 ರಂದು ಮಹಾಲಿಂಗಪುರ ಬಂದ್‌ಗೆ ಕರೆ ನೀಡಲಾಗಿದ್ದು, ಸಾಮೂಹಿಕ ನಾಯಕತ್ವದಡಿ ತಾಲ್ಲೂಕು ಕೇಂದ್ರಕ್ಕೆ ಹೋರಾಟ ನಡೆಸಲಾಗುವುದು ಎಂದು ತಾಲ್ಲೂಕು ಹೋರಾಟ ಸಮಿತಿ ಸದಸ್ಯರು ತಿಳಿಸಿದರು.   ಹೋರಾಟದ ವೇದಿಕೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.15 ರೊಳಗೆ ಮಹಾಲಿಂಗಪುರ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡದಿದ್ದರೆ ಆ.17ರಂದು ಮಹಾಲಿಂಗಪುರ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದೆಂದು ಈಗಾಗಲೇ ತಿಳಿಸಲಾಗಿತ್ತು. ಇನ್ನುವರೆಗೂ …

Read More »

ಮನಃ ಪರಿವರ್ತನೆಗೆ ವಚನಗಳು ಸಹಕಾರಿ; ಡಾ| ಚನ್ನವೀರ ದೇವರು

ವಿಜಯಪುರ: ತಾಳ್ಮೆಯಿಂದ ಇರುವ ಮನುಷ್ಯ ಸಹನೆ-ವಿವೇಕದಿಂದ ಎಲ್ಲವನ್ನೂ ಗೆಲ್ಲುವ ಶಕ್ತಿ ಹೊಂದಿರುತ್ತಾನೆ. ಸಿಟ್ಟು-ಕೋಪ, ಆವೇಶದಂಥ ಗುಣಗಳು ಜೀವನದಲ್ಲಿ ಸೋಲನ್ನೇ ತರುತ್ತದೆ. ಲೋಕದ ದೃಷ್ಟಿಯಲ್ಲಿ ಜೈಲಿನಲ್ಲಿರುವ ಕೈದಿಗಳು ಹೃದಯ ಪರಿವರ್ತಿಸಿಕೊಂಡ ಪ್ರವಾದಿಗಳಾಗಿ, ಬಸವಾದಿ ಪ್ರಥಮರಾಗಿ, ಗೌತಮ ಬುದ್ಧರಾಗಿ ಜೀವಿಸಲು ಇರುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕುಂಟೋಜಿ ಹಿರೇಮಠದ ಡಾ| ಚನ್ನವೀರ ದೇವರು ಕಿವಿಮಾತು ಹೇಳಿದರು.   ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಶ್ರಾವಣ ಮಾಸದ ನಿಮಿತ್ತ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್‌, …

Read More »

ಸ್ವಾತಂತ್ರ್ಯ ಹೋರಾಟ; ಬಾಪು ಕೈಯಲ್ಲಿ ಹೂಂಕರಿಸಿದ್ದ ಬೆತ್ತ ಕನ್ನಡ ನೆಲದ್ದು

ಹುಬ್ಬಳ್ಳಿ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಕೈಗೊಂಡ ದಂಡಿಯಾತ್ರೆ ತನ್ನದೇ ಮಹತ್ವ ಪಡೆದುಕೊಂಡಿದೆ. ಸಾಬರಮತಿಯಿಂದ ದಂಡಿವರೆಗೆ ಸುಮಾರು 390 ಕಿ.ಮೀ. ಯಾತ್ರೆಯಲ್ಲಿ ಗಾಂಧೀಜಿ ಬಳಸಿದ್ದ ದೊಡ್ಡದಾದ ಬೆತ್ತ ಕನ್ನಡದ ನೆಲದ್ದು. ಅದನ್ನು ನೀಡಿದ್ದು ಕರ್ನಾಟಕದ ಮೊದಲ ರಾಷ್ಟ್ರಕವಿ ಎಂಬ ಖ್ಯಾತಿಯ ಮಂಜೇಶ್ವರ ಗೋವಿಂದ ಪೈಗಳು ಎನ್ನುವುದು ವಿಶೇಷ.   ದಂಡಿಯಾತ್ರೆಯಲ್ಲಿ ದೇಶದ ಸಹಸ್ರಾರು ಜನರು ಗಾಂಧೀಜಿ ಅವರನ್ನು ಹಿಂಬಾಲಿಸಿದ್ದರು. ಉತ್ತರ ಕನ್ನಡ, ಕರಾವಳಿ ಪ್ರದೇಶ ಸೇರಿ ದೇಶದ ವಿವಿಧೆಡೆಗಳಲ್ಲಿ ಉಪ್ಪಿನ ಸತ್ಯಾಗ್ರಹ …

Read More »

ಪಾಲಿಕೆ ಸದಸ್ಯರಿಗೆ ಸಿಗದ ಧ್ವಜಾರೋಹಣ ಭಾಗ್ಯ

ಬೆಳಗಾವಿ: ಸ್ವಾತಂತ್ರ್ಯ ಮಹೋತ್ಸವದ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಲೆ ರಾಷ್ಟ್ರ ಧ್ವಜಾರೋಹಣ ಮಾಡುವ ಸೌಭಾಗ್ಯ ಪಾಲಿಕೆಯ ಸದಸ್ಯರಿಗೆ ಒಲಿದು ಬರಲಿಲ್ಲ. ಈ ವಿಷಯದಲ್ಲಿ ಸರಕಾರ ಮತ್ತು ಸ್ಥಳೀಯ ಬಿಜೆಪಿ ಶಾಸಕರ ಭರವಸೆ ಮತ್ತೂಮ್ಮೆ ಹುಸಿಯಾಗಿದೆ.   ಶಾಸಕರ ಮಾತು ನಂಬಿ ಮೇಯರ್‌ ಅಗುವ ಮೂಲಕ ದ್ವಜಾರೋಹಣ ಮಾಡುವ ಕನಸು ಕಂಡಿದ್ದ ಸದಸ್ಯರಿಗೆ ನಿರಾಸೆಯಾಗಿದೆ. ಜೊತೆಗೆ ಈ ನಿರಾಸೆಯ ಬೆನ್ನಲ್ಲೇ ಬಿಜೆಪಿ ಸದಸ್ಯರಲ್ಲಿ ಶಾಸಕರ ನಡೆಯ ಬಗ್ಗೆ ಅಸಮಾಧಾನ …

Read More »

ಸ್ವಾತಂತ್ರ್ಯ ದಿನಾಚರಣೆ; ಅಂಬೇಡ್ಕರ್ ಭಾವಚಿತ್ರ ಮರೆತ ತಾಲೂಕಾಡಳಿತ; ದಲಿತ ಸಂಘನೆಗಳ ಆಕ್ರೋಶ

ಚಿಕ್ಕೋಡಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯ ವೇಳೆ ಚಿಕ್ಕೋಡಿ ತಾಲೂಕಾಡಳಿತ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಮರೆತಿದ್ದ ಹಿನ್ನಲೆ ದಲಿತ ಸಂಘಟನೆಗಳು ತಾಲೂಕಾಡಳಿತ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಚಿಕ್ಕೋಡಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆ ಸಂದರ್ಭ ಚಿಕ್ಕೋಡಿ ತಾಲೂಕಾಡಳಿತ ಮಹಾತ್ಮಾ ಗಾಂಧೀಜಿಯವರ ಒಂದೇ ಪೋಟೋ ಇಟ್ಟು ಯಡವಟ್ಟು ಮಾಡಿಕೊಂಡಿದೆ.   ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಬಿಟ್ಟು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ …

Read More »

ಸ್ವಾತಂತ್ರ್ಯ ದಿನಾಚರಣೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಚಾಮರಾಜಪೇಟೆ ಮೈದಾನ

ಬೆಂಗಳೂರು: ಹಲವು ವಿವಾದಗಳ ಬಳಿಕ ಚಾಮರಾಜಪೇಟೆ ಮೈದಾನದಲ್ಲಿ ಇಂದು ಬೆಳಿಗ್ಗೆ ಎಂಟು ಗಂಟೆಗೆ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿಲಾಯಿತು.   ಇದೇ ಪ್ರಥಮ ಬಾರಿಗೆ ಈ ಮೈದಾನದಲ್ಲಿ ಸರ್ಕಾರದಿಂದ ಆಯೋಜಿಸಿದ್ದ ಧ್ವಜಾರೋಹಣವನ್ನು ಉಪವಿಭಾಗಾಧಿಕಾರಿಗಳಾದ ಡಾ.ಎಂ. ಜಿ. ಶಿವಣ್ಣ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸದರಾದ ಪಿ.ಸಿ. ಮೋಹನ್, ಶಾಸಕರಾದ ಜಮೀರ್ ಅಹಮ್ಮದ್, ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೊಲೀಸ್ …

Read More »

ಸ್ವಾತಂತ್ರ್ಯ ಹೋರಾಟಕ್ಕಾಗಿ ಬೊಮ್ಮಾಯಿ ಜೈಲುವಾಸ ಅನುಭವಿಸಿದ್ದರಾ?: ಸಿದ್ದರಾಮಯ್ಯ

ಬೆಂಗಳೂರು: ನೆಹರು ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೊಮ್ಮಾಯಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲುವಾಸ ಅನುಭವಿಸಿದ್ದರಾ? ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.   ಕೆಪಿಸಿಸಿ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಕ್ಕೆ‌ ನೆಹರು ಅವರ ಕೊಡುಗೆಯಿದೆ. ನೆಹರು ಜೈಲು ವಾಸ ಅನುಭವಿಸಿದ್ದರು. ಈಶ್ವರಪ್ಪ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ರಾ? ಬೊಮ್ಮಾಯಿ ಜೈಲುವಾಸ ಅನುಭವಿಸಿದ್ರಾ? ಅವನ್ಯಾವನೋ ರವಿಕುಮಾರ್ ಜೈಲಿಗೆ …

Read More »

ಒಂದಲ್ಲ ಎರಡಲ್ಲ ಬರೋಬ್ಬರಿ 5 ಕೋಟಿ ತಿರಂಗಾ ಸೆಲ್ಫಿ!

ನವದೆಹಲಿ: ಒಂದಲ್ಲ ಎರಡಲ್ಲ ಬರೋಬ್ಬರಿ 5 ಕೋಟಿ ತಿರಂಗ ಸೆಲ್ಫಿ! ಇದು ಕೇಂದ್ರ ಸಂಸ್ಕೃತಿ ಸಚಿವಾಲಯವೇ ಸೋಮವಾರ ಬಿಡುಗಡೆ ಮಾಡಿದ ಮಾಹಿತಿ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶಾದ್ಯಂತ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ, ಅದರ ಜತೆಗೆ ಸೆಲ್ಫಿ ತೆಗೆದುಕೊಂಡು ಹರ್‌ಘರ್‌ ತಿರಂಗ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲು ಮನವಿ ಮಾಡಲಾಗಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಸೋಮವಾರ ಸಂಜೆ 4ಗಂಟೆ ವೇಳೆಗೆ 5 ಕೋಟಿಗೂ ಹೆಚ್ಚು ತಿರಂಗ ಸೆಲ್ಫಿಗಳನ್ನು ಜನರು ಅಪ್‌ಲೋಡ್‌ ಮಾಡಿದ್ದಾರೆ. …

Read More »

ಚಿವರು ಎಚ್ಚರಿಕೆಯಿಂದ ಮಾತಾಡಲಿ: ಸಿ.ಟಿ.ರವಿ

ಸರಕಾರ ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸುವ ಜವಾಬ್ದಾರಿ ಹಿರಿಯ ಸಚಿವರ ಮೇಲಿದೆ. ನಮ್ಮ ಬದ್ಧತೆ ರಾಜ್ಯದ ಜನತೆಗೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಚಿವರು ಎಚ್ಚರಿಕೆಯಿಂದ ಮಾತನಾಡಬೇಕೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.   ಸುದ್ದಿಗೋಷ್ಠಿಯಲ್ಲಿ ಎಸ್‌.ಟಿ. ಸೋಮಶೇಖರ್‌ ಸಹಿತ ಯಾವುದೇ ಸಚಿವರು ಬಾಲಿಶವಾಗಿ ಮಾತನಾಡಿ ಸಮಾಜಕ್ಕೆ ತಪ್ಪು ಸಂದೇಶ ಹೋಗುವಂತೆ ಮಾಡಬಾರದು. ಟಿಪ್ಪು ಬ್ಯಾನರ್‌ ಹರಿದವರನ್ನು ಮತ್ತು ಶಿವಮೊಗ್ಗದಲ್ಲಿ ಸಾವರ್ಕರ್‌ ಫೋಟೋ ತೆಗೆಸಿ ಅವಮಾನಿಸಿದವರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಇಂಥ …

Read More »

ಅಪ್ಪನ ಸಮಾಧಿ ಮುಂದೆ ರಾಷ್ಟ್ರಗೀತೆ ನುಡಿಸಿ ಸ್ವಾತಂತ್ರ್ಯ ದಿನ‌ ಆಚರಿಸಿದ ಸೈನಿಕನ ಪುತ್ರಿ

ಚಾಮರಾಜನಗರ: ಯಳಂದೂರು ತಾಲೂಕಿನ‌ ಮಲಾರಪಾಳ್ಯದಲ್ಲಿ ನಿವೃತ್ತ ಸೈನಿಕ ನವೀನ್ ಅವರ ಸ್ಮಾರಕದ ಮುಂದೆ 9 ವರ್ಷದ ಪುತ್ರಿ ಹನಿ ಎಂಬಾಕೆ ಕೊಳಲಿನ ಮೂಲಕ ರಾಷ್ಟ್ರಗೀತೆ ನುಡಿಸಿ ಸ್ವಾತಂತ್ರ್ಯ ದಿನಾಚರಿಸಿದ್ದಾಳೆ.‌ ಮಗಳ‌ ಜೊತೆ ತಾಯಿ ಭವ್ಯಾ ಇದ್ದರು. ನವೀನ್ ಅವರು ಅಪಘಾತದಲ್ಲಿ ಅಸುನೀಗಿದ್ದರು. ಪ್ರತೀ ವರ್ಷ ಸ್ವಾತಂತ್ರ್ಯ ದಿನದಂದು ಈ ಕುಟುಂಬ ವಿಶೇಷ ನಮನ ಸಲ್ಲಿಸುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ಗೌಡಹಳ್ಳಿ ಗ್ರಾ.ಪಂ ಸಿಬ್ಬಂದಿ, ಯುವಕರು ಭಾಗಿಯಾಗಿದ್ದರು.

Read More »