Breaking News

Yearly Archives: 2022

ಪಿಎಸ್‌ಐ ಹಗರಣ: ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು

ಕಲಬುರಗಿ: ದ ಪ್ರಮುಖ ಆರೋಪಿಗಳಾದ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಆರ್‌.ಡಿ. ಪಾಟೀಲ ಹಾಗೂ ಅವರ ಅಣ್ಣ, ಕಾಂಗ್ರೆಸ್ ಮುಖಂಡ ಮಹಾಂತೇಶ ಪಾಟೀಲ ಅವರಿಗೆ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠವು ಗುರುವಾರ ಜಾಮೀನು ಮಂಜೂರು ಮಾಡಿದೆ.   ಕೆಲ ದಿನಗಳ ಹಿಂದೆ ವಾದ ವಿವಾದವನ್ನು ಆಲಿಸಿದ್ದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ನ್ಯಾಯಪೀಠವು ಆದೇಶವನ್ನು ಗುರುವಾರಕ್ಕೆ ಕಾಯ್ದಿರಿಸಿತ್ತು. ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದ ಪಿಎಸ್‌ಐ ಪರೀಕ್ಷಾ …

Read More »

ಮಹಾರಾಷ್ಟ್ರ ಸರ್ಕಾರ ಎಂಇಎಸ್‌ ಬೆಂಬಲಿಸದಿರಲಿ: ಅಶೋಕ ಚಂದರಗಿ

ಬೆಳಗಾವಿ: ‘ಸುಪ್ರೀಂ ಕೋರ್ಟ್‌ನಲ್ಲಿ ನಿರ್ಧಾರ ಆಗುವವರೆಗೆ ಗಡಿ ವಿಚಾರದಲ್ಲಿ ಕರ್ನಾಟಕ- ಮಹಾರಾಷ್ಟ್ರ ಯಾವುದೇ ಬೇಡಿಕೆ ಇಡಬಾರದು ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಈ ನಿರ್ಣಯದಂತೆ ಎಂಇಎಸ್‌ ಬೆಳಗಾವಿಯಲ್ಲಿ ನಡೆಸುವ ಯಾವುದೇ ಕರ್ನಾಟಕ ವಿರೋಧಿ ಚಟುವಟಿಕೆಗಳನ್ನು ಮಹಾರಾಷ್ಟ್ರ ಸರ್ಕಾರ ಅಥವಾ ಅಲ್ಲಿಯ ನಾಯಕರು ಬೆಂಬಲಿಸಬಾರದು. ಮಹಾ ಮೇಳಾವ್‌ದಲ್ಲಿಯೂ ಭಾಗವಹಿಸಬಾರದು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದ್ದಾರೆ. ‘ಎರಡೂ ರಾಜ್ಯಗಳ ತಲಾ ಮೂವರು ಸಚಿವರ …

Read More »

ಉತ್ತರ ವಲಯ ವ್ಯಾಪ್ತಿಯಲ್ಲಿ ಫೊನ್ ಇನ್ ಕಾರ್ಯಕ್ರಮ‌ನಡೆಸುವಂತೆ S.P.ಗಳಿಗೆ ಸೂಚನೆ: I.G.P. ಸತೀಶಕುಮಾರ

ಉತ್ತರ ವಲಯ ವ್ಯಾಪ್ತಿಯಲ್ಲಿ ಫೊನ್ ಇನ್ ಕಾರ್ಯಕ್ರಮ‌ನಡೆಸುವಂತೆ ಎಸ್ಪಿಗಳಿಗೆ ಸೂಚನೆ ನೀಡಲಾಗುವುದು ಎಂದು ಐಜಿಪಿ ಸತೀಶಕುಮಾರ ಹೇಳಿದರು. ಜಿಲ್ಲಾ ಪೊಲೀಸ್ ಮೈದಾನದಲ್ಲಿ ಪ್ರಾಪರ್ಟಿ ಪರೇಡ್ ಕಾರ್ಯಕ್ರಮ ಮುಗಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಬೆಳಗಾವಿ ಎಸ್ಪಿ ರವರು ನಡೆಸುವ ಹಾಗೆ ತಿಂಗಳಲ್ಲಿ ಒಂದು ದಿನ ನಾನು‌ ಅಷ್ಟೇ ಅಲ್ಲ ಎಲ್ಲ‌ ಎಸ್ಪಿಗಳಿಗೂ ಪೊನ್ ಇನ್ ಕಾರ್ಯಕ್ರಮ ನಡೆಸುವಂತೆ ಸೂಚನೆ ನೀಡುವುದಾಗಿ ಹೇಳಿದರು. ಕಳೆದ ಒಂದು ವರ್ಷದಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು …

Read More »

ಅಕ್ರಮ ನಿವೇಶನ ಹಂಚಿಕೆ ಲೋಕಾಯುಕ್ತರ ಮೊರೆ ಹೋದ ರಾಜಕುಮಾರ ಟೋಪಣ್ಣವರ

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮ ನಿವೇಶನ ಹಂಚಿಕೆಯ ವಿರುದ್ಧ ಲೋಕಾಯುಕ್ತರ ಮೊರೆ ಹೋಗಲಾಗಿದೆ ಎಂದು ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಹೇಳಿದರು. ಶುಕ್ರವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಮಾ. 16,17 ರಂದು ಬುಡಾದಿಂದ ಆನ್ ಲೈನ್ ಆಕ್ಷನ್ ಮಾಡಿದರು. ಮಾ.18 ರಂದು ಬುಡಾದವರು ಹೋಳಿ ಹಬ್ಬದ ದಿನ ಮ್ಯಾನ್ಯೂವಲ್ ಆಕ್ಷನ್ ಮಾಡಿ ನಿವೇಶನ ಹಂಚಿಕೆ ಮಾಡಿರುವ ಕುರಿತು ಅಂದಿನ ಜಿಲ್ಲಾಧಿಕಾರಿಗೆ ಮನವಿ …

Read More »

ವರ್ಷದಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರ ದೊಡ್ಡ ಸಾಧನೆ, ಜಪ್ತಿ ಮಾಡಿ ಮೂಲ ಮಾಲೀಕರಿಗೆ ವಾಪಸ್

ಒಂದು ವರ್ಷದಲ್ಲಿ ಪೊಲೀಸರು 301 ಅಪರಾಧಗಳನ್ನು ಬಹಿರಂಗಪಡಿಸಿದ್ದಾರೆ ಮತ್ತು 324 ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು 17 ಕೋಟಿ 54 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 4 ಕೋಟಿ 18 ಲಕ್ಷ, ಎಂಟು ಕೆಜಿ 369 ಗ್ರಾಂ ಚಿನ್ನ , 4 ಲಕ್ಷದ 91 ಸಾವಿರದ 7 ಕೆಜಿ ಬೆಳ್ಳಿ, 1 ಕೋಟಿ 24 ಲಕ್ಷ ರೂ. 3 ಕೋಟಿ 99 ಲಕ್ಷ ರೂ, 7 ಕೋಟಿ 47 ಲಕ್ಷ ಮೌಲ್ಯದ …

Read More »

ಬೆಳಗಾವಿಯ ಸುವರ್ಣ ವಿಧಾನ ಸೌಧ ಸಜ್ಜಾಗುತಿದ್ತೆ ಅಧಿವೇಶನಕ್ಕೆ

ಗಂಟು ಮೂಟೆ ಕಟ್ಟಿಕೊಂಡು ಕರ್ನಾಟಕ ಸರಕಾರ ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಶಿಫ್ಟ್ ಆಗುತ್ತಿದೆ. ಸೋಮವಾರದಿಂದ ಚಳಿಗಾಲದ ಅಧಿವೇಶನ. ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ‌ ನಡೆಯಲಿದ್ದು, ಅದಕ್ಕಾಗಿ‌ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಬೆಳಗಾವಿ ‌ಮಹಾನಗರದಲ್ಲಿ ಹತ್ತು ದಿನಗಳ ಕಾಲ ಸಚಿವರು, ಅಧಿಕಾರಿಗಳು, ವಿವಿಧ ಪಕ್ಷದ ನಾಯಕರು, ಗಣ್ಯಾತಿ ಗಣ್ಯರು ಓಡಾಡುತ್ತಾರೆ. ಹೀಗಾಗಿ ನಗರದ ರಸ್ತೆಗಳನ್ನು ಸುಧಾರಿಸುವ ಕೆಲಸ ಒಂದು ಕಡೆ ನಡೆದರೆ, ಸುವರ್ಣ ವಿಧಾನಸೌಧಕ್ಕೆ ಹೊಸ‌ ಸ್ವರೂಪ ನೀಡುವ ಕಾರ್ಯವೂ …

Read More »

46 ಸಾವಿರ ನೇಕಾರ ಕುಟುಂಬಗಳ ವಿದ್ಯಾರ್ಥಿಗಳಿಗೆ ಮಕ್ಕಳ ವಿದ್ಯಾನಿಧಿ ಬಿಡುಗಡೆ?

ನೇಕಾರರ ಮಕ್ಕಳ ವಿದ್ಯಾನಿಧಿ ಯೋಜನೆಗೆ 46 ಸಾವಿರ ನೇಕಾರ ಕುಟುಂಬಗಳ ವಿದ್ಯಾರ್ಥಿಗಳಿಗೆ ಗುರುತಿಸಲಾಗಿದ್ದು, ಶೀಘ್ರವಾಗಿ ವಿದ್ಯಾನಿಧಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನೇಕಾರ್ ಸಮ್ಮಾನ್ ಯೋಜನೆಯಡಿ ಕೈಮಗ್ಗ ನೇಕಾರರಿಗೆ ಡಿಬಿಟಿ ಮೂಲಕ ಸಹಾಯಧನ ವರ್ಗಾವಣೆಗೆ ಚಾಲನೆ ನೀಡಿದರು. 46 ಸಾವಿರ ನೇಕಾರ ಕುಟುಂಬದ ವಿದ್ಯಾರ್ಥಿಗಳ ದಾಖಲೆಗಳನ್ನು ಹದಿನೈದು ದಿನದೊಳಗೆ ಪಡೆದು ಪಟ್ಟಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿಗಳು, ವಿದ್ಯಾರ್ಥಿಗಳಿಗೆ …

Read More »

ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಟ್ರ್ಯಾಕಿಂಗ್ ( ಚಾರಣ) ಶಿಬಿರಕ್ಕೆ ಚಾಲನೆ

ನಮ್ಮ ಯುವ ಜನಾಂಗವು ರಾಷ್ಟ್ರದ ಸಂಪತ್ತಾಗಿದ್ದು ದೇಶದ ಸಂಸ್ಕೃತಿ ಪರಂಪರೆ ಹಾಗೂ ಪರಿಸರವನ್ನು ತಿಳಿದುಕೊಳ್ಳುವುದು ಅವಶ್ಯವಾಗಿದೆ. ಪರಿಸರವನ್ನು ಸಂರಕ್ಷಿಸಿ ಅದನ್ನು ಪೋಷಿಸಿ ಬೆಳೆಸುವುದು ಕೂಡ ನಮ್ಮ ಕರ್ತವ್ಯವಾಗಿದೆ ಎಂದು ಎನ್ ಸಿಸಿಯ ಪ್ರಮುಖ ಧ್ಯೇಯವಾಗಿದೆ ಎಂದು ಬೆಳಗಾವಿಯೇ ಎನ್ ಸಿ ಸಿ ಗ್ರೂಪ್ ಕಮಾಂಡರ್ ಕರ್ನಲ್ ಎಸ್ ಶ್ರೀನಿವಾಸ ಹೇಳಿದರು. ಅವರು ಬೆಳಗಾವಿಯ ಜಾದವ್ ನಗರದಲ್ಲಿ ಬೆಳಗಾವಿ ಎನ್ ಸಿ ಸಿ ಗ್ರೂಪ್ ಅಡಿಯಲ್ಲಿ ಜರುಗುತ್ತಿರುವ ಅಖಿಲ ಭಾರತ ಟ್ರ್ಯಾಕಿಂಗ್ …

Read More »

ವಕೀಲರಿಗೆ ಭದ್ರತೆ ಇಲ್ಲದಂತಾಗಿದೆ.

ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರ ಪಾತ್ರ ಮಹತ್ವದಾಗಿದ್ದು, ಆದ್ರೆ ವಕೀಲರಿಗೆ ಭದ್ರತೆ ಇಲ್ಲದಂತಾಗಿದೆ. ಹೀಗಾಗಿ ವಕೀಲರಿಗೆ ಭದ್ರತೆಯನ್ನು ಒದಗಿಸುವ ಕಾನೂನನ್ನು ರಾಜ್ಯದಲ್ಲಿ ತರುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಚಿಕ್ಕೋಡಿ ತಾಲ್ಲೂಕು ವಕೀಲರ ಸಂಘದಿಂದ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಚಿಕ್ಕೋಡಿ ತಾಲ್ಲೂಕು ವಕೀಲರ ಸಂಘದ ಕಚೇರಿಯಿಂದ ಮಿನಿ ವಿಧಾನಸೌಧದವರೆಗೂ ಪ್ರತಿಭಟನಾ ಮೆರವಣಿಗೆ ಕೈಗೊಂಡ ವಕೀಲರು ಕೆಲ ಕಾಲ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ …

Read More »

ಅತಿ ಕಡಿಮೆ ದರದಲ್ಲಿ “ಇ ಬೈಕ್, ಇ ಸೈಕಲ್” ರೈಡಿಂಗ್ ಲಭ್ಯ

ಜನರ ಓಡಾಟಕ್ಕಾಗಿ ಅನುಕೂಲವಾಗಲು ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ಇ ಸೈಕಲ್ ಹಾಗೂ ಇ ಬೈಕ್ ಗಳನ್ನು ಶಾಸಕ ಅಭಯ ಪಾಟೀಲ ಅವರು ಚಾಲನೆ ನೀಡಿದರು. ಬೆಳಗಾವಿಯ ಶಾಹಸಪುರದ ಶಿವ ಚರಿತ್ರೆ ಹತ್ತಿರ ಇ ಸೈಕಲ್ ಹಾಗೂ ಇ ಬೈಕ್ ಗಳಿಗೆ ಚಾಲನೆ ನೀಡದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅಭಯ ಪಾಟೀಲ ಅವರು, 100 ಇ ಸೈಕಲ್, 100 ಇ ಬೈಕ್ ಹಾಗೂ 100 ಸೈಕಲ್ ಹೀಗೆ 300 …

Read More »