ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮ ನಿವೇಶನ ಹಂಚಿಕೆಯ ವಿರುದ್ಧ ಲೋಕಾಯುಕ್ತರ ಮೊರೆ ಹೋಗಲಾಗಿದೆ ಎಂದು ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಹೇಳಿದರು.
ಶುಕ್ರವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಮಾ. 16,17 ರಂದು ಬುಡಾದಿಂದ ಆನ್ ಲೈನ್ ಆಕ್ಷನ್ ಮಾಡಿದರು. ಮಾ.18 ರಂದು ಬುಡಾದವರು ಹೋಳಿ ಹಬ್ಬದ ದಿನ ಮ್ಯಾನ್ಯೂವಲ್ ಆಕ್ಷನ್ ಮಾಡಿ ನಿವೇಶನ ಹಂಚಿಕೆ ಮಾಡಿರುವ ಕುರಿತು ಅಂದಿನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವು. ಆದರೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸುಮಾರು ನೂರಾರು ಕೋಟಿ ರೂ. ಅವ್ಯವಹಾರವಾಗಿದೆ. ಈ ಕುರಿತು ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದರು.
ಕರ್ನಾಟಕ ಸರಕಾರದ ಎಲ್ಲಾ ಇಲಾಖೆಯಲ್ಲಿ ಯಾರೂ ಮ್ಯಾನ್ಯೂವಲ್ ಆಕ್ಷನ್ ಮಾಡುವುದಿಲ್ಲ. ಎಲ್ಲರೂ ಆನ್ ಲೈನ್ ಆಕ್ಷನ್ ಗೆ ಒತ್ತು ಕೊಡುತ್ತಾರೆ. ಎಲ್ಲ ಕಡೆ ಮ್ಯಾನ್ಯೂವಲ್ ಆಕ್ಷನ್ ನಲ್ಲಿ ವಂಚನೆ ಮಾಡಲು ಅವಕಾಶ ಇರುತ್ತದೆ. ಆದರೆ ಬುಡಾದವರು ಮ್ಯಾನ್ಯುವಲ್ ಆಕ್ಷನ್ ಮಾಡಿರುವುದು, ಕಾರ್ನರ್ ನಿವೇಶ ಮತ್ತು ಬೆಲೆ, ಬಾಳುವ ನಿವೇಶನಗಳನ್ನು ಕಡಿಮೆ ದರದಲ್ಲಿ ಮಾರಾಟವಾಗಿದೆ ಎಂದರು.
ಬುಡಾದವರು ಆನ್ ಲೈನ್ ಆಕ್ಷನ್ ಮೂಲಕ ಬೇರೆ ಬೇರೆ ನಿವೇಶನಕ್ಕೆ ಒಂದ ದರದಲ್ಲಿ ಹಂಚಿಕೆ ಮಾಡಿದ್ದಾರೆ. ಹರಾಜು ಮಾಡುವ ವೇಳೆ ಬುಡಾದಿಂದ ಅಂದಾಜು18,00 ರೂ. ಚದರ ಅಡಿಯಲ್ಲಿ ದರ ನಿಗದಿ ಇದೆ. ಹರಾಜು ಆಗಿದ್ದು 5,150 ರೂ.ಗೆ ಹಂಚಿಕೆ ಮಾಡಿದ್ದಾರೆ. ಆದರೆ ಮ್ಯಾನ್ ವೆಲ್ ಆಕ್ಷನ್ ನಲ್ಲಿ ಕಾರ್ನರ್ ನಿವೇಶನ ಹಾಗೂ ಬೆಲೆ ಬಾಳುವ ನಿವೇಶನಗಳಿಗೆ ಬುಡಾದಿಂದ ಅಂದಾಜು1,400 ರೂ. ಚದರ ಅಡಿಯಲ್ಲಿ ದರ ನಿಗದಿ ಪಡಿಸಿತ್ತು. ಆದರೆ ಮಾರಾಟವಾಗಿದ್ದು1450 ರೂ.ಗೆ. ಆನ್ ಲೈನ್ ಆಕ್ಷನ್ ನಲ್ಲಿ ಒಳಗಿನ ನಿವೇಶನದಲ್ಲಿ ಸಾವಿರಾರು ಪರ್ ಸ್ವೆರ್ ಫೀಟ್ ಗೆ ಲಾಭವಾಗಿದೆ. ಆದರೆ ಮ್ಯಾನವಲ್ ಆಕ್ಷನ್ ನಲ್ಲಿ ಕೇವಲ 50 ರಿಂದ 100 ರೂ. ಸ್ಕ್ವೇರ್ ಫಿಟ್ ನಲ್ಲಿ ಲಾಭವಾಗಿದೆ ಇದು ನಾನಾ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.